ಬೆಂಗಳೂರು :  ʼಗುರುಶಿಷ್ಯರುʼ ಇದು ಮರೆಯಾದ ದೇಸಿಕ್ರೀಡೆ ಖೋಖೊ ಮೂಲಕ ಜನರಿಗೆ ಒಂದೊಳ್ಳೆ ಸಂದೇಶ ಸಾರೋ ಸಿನಿಮಾ. ಈ ಸಿನಿಮಾದಲ್ಲಿ ಶರಣ್ ಸ್ವಲ್ಪ ವಿಭಿನ್ನವಾಗೇ ಕಾಣಿಸಿಕೊಂಡು ಜನಮನ ಗೆದ್ದಿದ್ದಾರೆ. ಬೆವರಲ್ಲ ಬರೀ ರಕ್ತ ಹರಿಸಿ ನಟನೆ ಮಾಡಿದ ಅಷ್ಟೂ ಮಕ್ಕಳು ಮೊದಲ ಸಿನಿಮಾದಲ್ಲಿ ಜನರಿಂದ ಜೈಕಾರ ಹಾಕಿಸಿಕೊಂಡಾಯ್ತು. ಇದೀಗ ಗುರುಶಿಷ್ಯರು ಸಿನಿಮಾವನ್ನ ಚಿತ್ರತಂಡದ ಜೊತೆ ರಾಜಕೀಯ ಗಣ್ಯರು ಕೂಡ ಮೆಚ್ಚಿಕೊಂಡಿದ್ದಾರೆ. ಇದು ಗುರುಶಿಷ್ಯರು ಸಿನಿಮಾ ತಂಡಕ್ಕೆ ಇನ್ನಷ್ಟು ಬಲ ಬಂದಂತೆ ಆಗಿದೆ.


COMMERCIAL BREAK
SCROLL TO CONTINUE READING

ತರುಣ್ ಸುಧೀರ್ ಹಾಗೂ ಶರಣ್ ಕೃಷ್ಣ ನಿರ್ಮಾಣದ, ಜಡೇಶ್ ಕೆ ಹಂಪಿ ನಿರ್ದೇಶನದ, ಶರಣ್ - ನಿಶ್ವಿಕಾ ನಾಯ್ಡು ಅಭಿನಯದ ʼಗುರು ಶಿಷ್ಯರುʼ ಚಿತ್ರವನ್ನು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವರಾದ ಆರ್ ಅಶೋಕ್, ಶಾಸಕರಾದ ಎಂ.ಕೃಷ್ಣಪ್ಪ, ಡಿ.ಎಸ್ ಮ್ಯಾಕ್ಸ್ ನ ದಯಾನಂದ್, ಉದ್ಯಮಿ ಲೋಕೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜಿ.ಮರಿಸ್ವಾಮಿ, ಮಾಜಿ ಕಾರ್ಪೊರೇಟರ್ ಹನುಮಂತಯ್ಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ವೀಕ್ಷಿಸಿದರು. ಚಿತ್ರದ ವೀಕ್ಷಣೆಯ ನಂತರ ದೇಸಿ ಕ್ರೀಡೆ ಖೊಖೊ ಆಟದ ಕಥೆಯನ್ನು ಆಧರಿಸಿರುವ ಈ ಚಿತ್ರವನ್ನು ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.


ಇದನ್ನೂ ಓದಿ: Bangalore : ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ.!


ಗುರು ಶಿಷ್ಯರು ಸಿನಿಮಾದಲ್ಲಿ ನಟ ಶರಣ್ ಪುತ್ರ ಹೃದಯ್, ನೆನಪಿರಲಿ ಪ್ರೇಮ್ ಪುತ್ರ ಏಕಾಂತ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, MLA ರಾಜು ಗೌಡ ಪುತ್ರ ಮಣಿಕಂಠ ಹಾಗೂ ರವಿಶಂಕರ್ ಪುತ್ರ ಸೇರಿದಂತೆ ಹಲವಾರು ವಿಶೇಷ ಪ್ರತಿಭೆಗಳು ನಟಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇಂತಹ ಸಿನಿಮಾಗಳು ಈ ಕಾಲಕ್ಕೆ ನಿಜಕ್ಕೂ ಅಗತ್ಯವಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.