ಶಿವಣ್ಣ ಫ್ಯಾನ್ಸ್‌ಗೆ ಸಿಹಿ ಸುದ್ದಿ : ವರ್ಷದ ಕೊನೆ ತಿಂಗಳಲ್ಲಿ ತೆರೆಗೆ ಅಪ್ಪಳಿಸಲಿದೆ ʼವೇದʼ..!

ಭಜರಂಗಿ 2 ನಂತ್ರ ‌ನಿರ್ದೇಶಕ ಹರ್ಷ ಮತ್ತೆ ಶಿವಣ್ಣನ ಜೊತೆ ವೇದ ಮಾಡಿದ್ದು ಚಿತ್ರದ ಮೇಲೆ ಶಿವಸೈನ್ಯದಲ್ಲಿ ನೀರಿಕ್ಷೇ ಎಂಬ ಮೌಂಟ್ ಎವರೆಸ್ಟ್ ಶಿಖರ ಬೆಳೆದಿದೆ. ಅಲ್ಲದೆ ವೇದ ಚಿತ್ರದಲ್ಲಿ ಶಿವಣ್ಣನ ಖಡಕ್ ಲುಕ್ ನೋಡಿ ಯಾವಗ ಈ‌ಸಿನಿಮಾ ಕಣ್ತುಂಬಿ ಕೊಳ್ತಿವೋ ಅಂತ ಕಾಯ್ತಿದ್ದ ಸೆಂಚುರಿ ಸ್ಟಾರ್ ಬಳಗಕ್ಕೆ  ಬಂಪರ್ ಗಿಫ್ಟ್ ಕೊಟ್ಟಿದ್ದಾರೆ ನಿರ್ದೇಶಕ ಹರ್ಷ.

Written by - YASHODHA POOJARI | Edited by - Krishna N K | Last Updated : Oct 1, 2022, 01:07 PM IST
  • ʼವೇದʼ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನೀರಿಕ್ಷೀತ ಸಿನಿಮಾ
  • ಚಿತ್ರದ ಮೇಲೆ ಶಿವಸೈನ್ಯದಲ್ಲಿ ನೀರಿಕ್ಷೇ ಎಂಬ ಮೌಂಟ್ ಎವರೆಸ್ಟ್ ಶಿಖರ ಬೆಳೆದಿದೆ.
  • ಸೆಂಚುರಿ ಸ್ಟಾರ್ ಬಳಗಕ್ಕೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ ನಿರ್ದೇಶಕ ಹರ್ಷ.
ಶಿವಣ್ಣ ಫ್ಯಾನ್ಸ್‌ಗೆ ಸಿಹಿ ಸುದ್ದಿ : ವರ್ಷದ ಕೊನೆ ತಿಂಗಳಲ್ಲಿ ತೆರೆಗೆ ಅಪ್ಪಳಿಸಲಿದೆ ʼವೇದʼ..! title=

ಬೆಂಗಳೂರು : ʼವೇದʼ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನೀರಿಕ್ಷೀತ ಸಿನಿಮಾ. ಭಜರಂಗಿ 2 ನಂತ್ರ ‌ನಿರ್ದೇಶಕ ಹರ್ಷ ಮತ್ತೆ ಶಿವಣ್ಣನ ಜೊತೆ ವೇದ ಮಾಡಿದ್ದು ಚಿತ್ರದ ಮೇಲೆ ಶಿವಸೈನ್ಯದಲ್ಲಿ ನೀರಿಕ್ಷೇ ಎಂಬ ಮೌಂಟ್ ಎವರೆಸ್ಟ್ ಶಿಖರ ಬೆಳೆದಿದೆ. ಅಲ್ಲದೆ ವೇದ ಚಿತ್ರದಲ್ಲಿ ಶಿವಣ್ಣನ ಖಡಕ್ ಲುಕ್ ನೋಡಿ ಯಾವಗ ಈ‌ಸಿನಿಮಾ ಕಣ್ತುಂಬಿ ಕೊಳ್ತಿವೋ ಅಂತ ಕಾಯ್ತಿದ್ದ ಸೆಂಚುರಿ ಸ್ಟಾರ್ ಬಳಗಕ್ಕೆ  ಬಂಪರ್ ಗಿಫ್ಟ್ ಕೊಟ್ಟಿದ್ದಾರೆ ನಿರ್ದೇಶಕ ಹರ್ಷ.

ಹೋದಲ್ಲಿ ಬಂದಲ್ಲಿ ಶಿವಣ್ಣನ ಸಮಸ್ತ ಅಭಿಮಾನಿಗಳು ಕನವರಿಸ್ತಿರೋ ಸಿನಿಮಾ ವೇದ. ಇನ್ನು ಈ ಚಿತ್ರದ ಮೂಲಕ ಗೀತಾ ಶಿವರಾಜ್ ಕುಮಾರ್ ನಿರ್ಮಾಪಕಿ ಯಾಗಿದ್ದು, ಮೊದಲ ಬಾರಿಗೆ ಶಿವಣ್ಣ ತಮ್ಮ‌ಹೋಮ್ ಪ್ರೊಡಕ್ಷನ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿರೋ ಕಾರಣ ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿತ್ತು. ಅಲ್ಲದೆ ಚಿತ್ರದ ಮೇಕಿಂಗ್, ಹಾಗೂ ಶಿವಣ್ಣನ ಲುಕ್ ಶಿವಣ್ಣನ ಅಭಿಮಾನಿಗಳಿಗೆ ಚಳಿಯಲ್ಲೂ ಮೈ ಬಿಸಿ ಏರುವಂತೆ ಮಾಡಿತ್ತು..ಅಲ್ಲದೆ ಈಗ ವೇದ ಚಿತ್ರದ ಬಿಗ್  ಅಪ್ಡೇಟ್  ಶಿವಸೈನ್ಯದ ಅಂಗಳದಲ್ಲಿ ಮಿಂಚಿನ ಸಂಚಾರ ಉಂಟು ಮಾಡಿದೆ.

ಇದನ್ನೂ ಓದಿ: Weight Loss Drinks: ಬೊಜ್ಜಿನ ಸಮಸ್ಯೆಯೇ? ಬೆಳಿಗ್ಗೆ ಎದ್ದ ತಕ್ಷಣ ಈ 4 ಪಾನೀಯಗಳನ್ನು ಕುಡಿಯಿರಿ.!

ಹೌದು.. ವೇದ ಸಿನಿಮಾ ಬಳಗ ದಸರಾ ಹಬ್ಬಕ್ಕೆ ಸೆಂಚುರಿ ಸ್ಟಾರ್ ಭಕ್ತಗಣಕ್ಕೆ  ಸ್ವೀಟ್ ನ್ಯೂಸ್ ಕೊಟ್ಟಿದ್ದು, ಈ ವರ್ಷದ ಅಂತ್ಯಕ್ಕೆ ಅಂದ್ರೆ ಕ್ರಿಸ್ ಮಸ್ ಹಬ್ಬಕ್ಕೆ ವೇದ ಚಿತ್ರ ರಿಲೀಸ್ ಆಗಲಿದೆ ಎಂಬ ಸರ್ಪ್ರೈಸ್ ನ್ಯೂಸ್ ಅನೌನ್ಸ್ ಮಾಡಿದೆ. ಇನ್ನು ವೇದ ಚಿತ್ರದ ಈ ಅಪ್ಡೇಟ್ ನೋಡಿ ಖುಷ್ ಆಗಿರೋ ಟಗರು ಶಿವನ‌ ಫ್ಯಾನ್ಸ್‌ಗಳು ʼವೇದʼ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಗ್ಯಾರಂಟಿ ಗುರು ಅಂತ ಭವಿಷ್ಯ ನುಡಿತ್ತಿದ್ದಾರೆ.  ಇನ್ನು ಶಿವಣ್ಣನ ಅಭಿಮಾನಿಗಳು ಸಖತ್ ಕಾನ್ಫಿಡೆನ್ಸ್ ನಲ್ಲಿ ʼವೇದʼ ಬಗ್ಗೆ ಭವಿಷ್ಯ ನುಡಿಯೋದಕ್ಕೆ ಕಾರಣ ಇದ್ದು, ಆ ಕಾರಣ ಏನಪ್ಪ ಅಂದ್ರೆ ಸ್ಯಾಂಡಲ್ ವುಡ್ ನ ಲಕ್ಕಿ ಡಿಸೆಂಬರ್ ನಲ್ಲಿ ಶಿವಣ್ಣನ ʼವೇದʼ ಬರ್ತಿರೋದು.

ಯೆಸ್. ಶಿವಣ್ಣ ಹಾಗೂ ಎ.ಹರ್ಷ ಕಾಂಬೋದಲ್ಲಿ ಬರ್ತಿರೋ ನಾಲ್ಕನೇಯ ಚಿತ್ರ" ವೇದ" ಭಜರಂಗಿ, ವಜ್ರಕಾಯ, ಭಜರಂಗಿ 2 ನಂತ್ರ ಈ ಜೋಡಿ ವೇದಗಾಗಿ ಮತ್ತೆ ಒಂದಾಗಿದೆ. ಅಲ್ಲದೆ ಈ ಚಿತ್ರಕ್ಕಾಗಿ ಹರ್ಷ ಸಖತ್ ಹೋಮ್ ವರ್ಕ್ ಮಾಡಿರೋದು ಪೋಸ್ಟರ್ ನಲ್ಲೇ ಗೊತ್ತಾಗ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ಕೊಂಚ ಜಾಸ್ತಿಯೇ ಇದೆ. ಅಲ್ಲದೆ ಈಗ ʼವೇದʼ ಲಕ್ಕಿ ಡಿಸೆಂಬರ್ ನಲ್ಲಿ ಬರ್ತಿರೋದ್ರಿಂದ ಈ ಚಿತ್ರ ಹಿಟ್ ಲಿಸ್ಟ್ ಸೇರೆ ಸೇರುತ್ತೆ ಅನ್ನೋ ನಂಬಿಕೆಯೂ ಜಾಸ್ತಿಯಾಗಿದೆ. ಯಾಕಂದ್ರೆ ಈ ಹಿಂದೆ ಡಿಸೆಂಬರ್‌ನಲ್ಲಿ ಬಂದಿರುವ ಕನ್ನಡದ ಬಹುತೇಕ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ.

ಇದನ್ನೂ ಓದಿ: Bangalore : ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ.!

ಮುಂಗಾರುಮಳೆ, ರಾಮಚಾರಿ, ಕಿರಿಕ್ ಪಾರ್ಟಿ ಚಮಕ್, ಅಲ್ಲದೆ ಶಿವಣ್ಣ ಅಭಿನಯದ ಭಜರಂಗಿ ಚಿತ್ರ 2013 ರಲ್ಲಿ ಲಕ್ಕಿ ಡಿಸೆಂಬರ್ ನಲ್ಲೇ ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳ್ ಎಬ್ಬಿಸಿತ್ತು. ಈಗ 9 ವರ್ಷಗಳ ನಂತರ ಮತ್ತೆ ಶಿವಣ್ಣ ಹರ್ಷ ಜೋಡಿಯ ʼವೇದʼ ಚಿತ್ರಕೂಡ ಲಕ್ಕಿ ಡಿಸೆಂಬರ್‌ನಲ್ಲೇ ರಿಲೀಸ್ ಆಗ್ತಿರೋ ಕಾರಣ ಈ ಚಿತ್ರವೂ ಹಿಟ್ ಲಿಸ್ಟ್ ಸೇರೋ ದ್ರಲ್ಲಿ ಡೌಟ್ ಇಲ್ಲ ಅಂತಿದ್ದಾರೆ ಗಾಂಧಿನಗರ ಸಿನಿ ಪಂಡಿತರು.

ಅದೇನೆ ಇರಲಿ ಬಹಳ ದಿನಗಳಿಂದ ವೇದಗಾಗಿ ಕಾಯ್ತಿದ್ದವರಿಗೆ ಈಗ ಕೊನೆಗೂ ವೇದ ನೋಡೊಕೆ ಮುಹೂರ್ತ ಫಿಕ್ಸ್ ಆಗಿದ್ದು, ನಾಲ್ಕನೇ ಚಿತ್ರದಲ್ಲೂ ಶಿವಣ್ಣ ಮತ್ತು ಹರ್ಷ ಮೋಡಿ ಮಾಡಿ ಐದನೇ ಚಿತ್ರಕ್ಕೆ ಸಜ್ಜಾಗ್ತಾರ ಅಂತ ಗೊತ್ತಾಗ ಬೇಕಾದ್ರೆ ಡಿಸೆಂಬರ್ ಕೊನೆ ವಾರದವರೆಗೂ ಕಾಯಲೇ ಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News