ಬೆಂಗಳೂರು : 75 ಲಕ್ಷ ರೂಪಾಯಿ ಹಣ ವರ್ಗಾವಣೆ ವಿಚಾರ ಕುರಿತಂತೆ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ (Radhika Kumaraswamy)  ಸಂಕಷ್ಟಕ್ಕೆ ಸಿಲುಕಿದ್ದಾರೆ.  ವಂಚನೆ ಆರೋಪ ಎದುರಿಸುತ್ತಿರುವ  ಯುವರಾಜ್ ಸ್ವಾಮಿ (Yuvraj Swamy) ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಗುರುವಾರ ನೊಟೀಸ್ ಜಾರಿ ಮಾಡಿತ್ತು.


COMMERCIAL BREAK
SCROLL TO CONTINUE READING

ಸ್ಯಾಂಡಲ್ ವುಡ್ ಸ್ವೀಟಿ ರಾಧಿಕಾಗೆ ಸಿಸಿಬಿ ಗ್ರಿಲ್ : 
ಶುಕ್ರವಾರ 11 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸೆಂಟ್ರಲ್ ಕ್ರೈಂ ಬ್ರಾಂಚ್ - ಸಿಸಿಬಿ (CCB) ಕಚೇರಿಗೆ ರಾಧಿಕಾ ಹಾಜರಾಗಿದ್ದಾರೆ. ಸಿಸಿಬಿ ಎಸಿಪಿ ನಾಗರಾಜ್  ಪ್ರಕರಣದ ವಿಚಾರಣೆ ನಡೆಸುತಿದ್ದಾರೆ.  ರಾಧಿಕಾ ಕುಮಾರಸ್ವಾಮಿ ಬಳಸುತ್ತಿದ್ದ ಮೊಬೈಲ್ ನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ. ವಂಚನೆ ಆರೋಪ ಎದುರಿಸುತ್ತಿರುವ ಯುವರಾಜ್ ಸ್ವಾಮಿ ಜೊತೆಗಿನ ಹಣಕಾಸು ವ್ಯವಹಾರದ ಕುರಿತಂತೆ ತನಿಖೆ ನಡೆಯುತ್ತಿದೆ. ಸಿಸಿಬಿ  ಪ್ರಶ್ನೆಗಳ ಪಟ್ಟಿಯನ್ನೇ ತಯಾರು ಮಾಡಿದ್ದು, ದುಡ್ಡಿನ ಕಹಾನಿಯ ಮೂಲ ಕೆದಕುತ್ತಿದೆ. ಪಕ್ಕಾ ದಾಖಲೆಗಳೊಂದಿಗೆ ರಾಧಿಕಾ ಅವರ ಉತ್ತರ ನಿರೀಕ್ಷೆ ಮಾಡುತ್ತಿದೆ ಸಿಸಿಬಿ.


ಇದನ್ನೂ ಓದಿ : ಮಗಳು ಶಮಿಕಾ ಜೊತೆ ರಾಧಿಕಾ ಕುಮಾರಸ್ವಾಮಿ!


ಹಣ ವರ್ಗಾವಣೆ ಪ್ರಕರಣದ ಕಂಪ್ಲೀಟ್ ಡಿಟೈಲ್ಸ್..
ಸ್ಯಾಂಡಲ್ ವುಡ್ (Sandalwood) ನಟಿ ರಾಧಿಕಾ ಕುಮಾರ ಸ್ವಾಮಿ ಬ್ಯಾಂಕ್ ಖಾತೆಗೆ ಸುಮಾರು  1.25 ಕೋಟಿಯಷ್ಟು ಹಣವರ್ಗಾವಣೆಯಾಗಿದೆ ಎಂಬ  ಆರೋಪದ ಮೇಲೆ ರಾಧಿಕಾಗೆ ಸಿಸಿಬಿ  (CCB) ನೊಟೀಸ್  ಜಾರಿ ಮಾಡಲಾಗಿತ್ತು.. ಉದ್ಯಮಿಗಳಿಗೆ ವಂಚಿಸಿರುವ ಆರೋಪದ ಮೇಲೆ  ಯುವರಾಜ್ (Yuvraj Swamy) ಎಂಬಾತನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಲೆ ಯುವರಾಜ್, ರಾಧಿಕಾ ಕುಮಾರಸ್ವಾಮಿ ಮತ್ತು ಅವರ ಸಹೋದರ ರವಿರಾಜ್ (Raviraj) ಬ್ಯಾಂಕ್ ಖಾತೆಗೆ 1.25 ಕೋಟಿಯಷ್ಟು ಹಣ ವರ್ಗಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.


ಈ ಬಗ್ಗೆ  ಸುದ್ದಿಗೋಷ್ಟಿ ನಡೆಸಿದ್ದ ರಾಧಿಕಾ ಸ್ಪಷ್ಟನೆ ನೀಡಿದ್ದರು.  ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದರು. ಬಂಧಿತ ಯುವರಾಜ್ ತಮ್ಮ ಕುಟುಂಬಕ್ಕೆ 17 ವರ್ಷದಿಂದ ಪರಿಚಿತ ಎಂದು ಹೇಳಿದ್ದರು. ಅಲ್ಲದೆ ಚಿತ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ತಮ್ಮ  ಖಾತೆಗೆ 15 ಲಕ್ಷ ರೂ ವರ್ಗಾಯಿಸಿದ್ದರು. ಅಲ್ಲದೆ, ನಿರ್ಮಾಪಕರೊಬ್ಬರಿಂದ (Producer) 60ಲಕ್ಷರೂಗಳನ್ನು ವರ್ಗಾಯಿಸಿದ್ದರು. ಈ  ವ್ಯವಹಾರ ನಡೆದಿರುವುದು ಸಿನೆಮಾ (Cinema) ನಿರ್ಮಾಣಕ್ಕೆ  ಸಂಬಂಧಪಟ್ಟಂತೆ. ಇದು ಬಿಟ್ಟು ಬೇರೆ ಯಾವ ವ್ಯವಹಾರವೂ ಯುವರಾಜ್ ಜೊತೆ ನಡೆಸಿಲ್ಲ ಎಂದು ರಾಧಿಕಾ ಸ್ಪಷ್ಟಪಡಿಸಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.