ಮಗಳು ಶಮಿಕಾ ಜೊತೆ ರಾಧಿಕಾ ಕುಮಾರಸ್ವಾಮಿ!

ಮಹಿಳಾ ಪ್ರಧನಾ ಚಿತ್ರವಾದ 'ದಮಯಂತಿ' ಚಿತ್ರದಲ್ಲಿ ಅಭಿನಯಿಸಲು ರಾಧಿಕಾ ಒಪ್ಪಿಗೆ.

Updated: Aug 10, 2018 , 01:27 PM IST
ಮಗಳು ಶಮಿಕಾ ಜೊತೆ ರಾಧಿಕಾ ಕುಮಾರಸ್ವಾಮಿ!

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಎಂದೊಡನೆ ನೆನಪಾಗುವುದು ಅವರ ಆ ಕ್ಯೂಟ್ ಸ್ಮೈಲ್. ಇತ್ತೀಚಿಗೆ ರಾಧಿಕಾ ಎಲ್ಲಿದ್ದಾರೆ? ಏನ್ ಮಾಡ್ತಿದಾರೆ. ಅವರ ಚಿತ್ರಗಳ್ ಯಾಕ್ ಬರ್ತಿಲ್ಲ ಎಂದು ಯೋಚಿಸುತ್ತಿದ್ದವರಿಗೆ, ಮಹಿಳಾ ಪ್ರಧನಾ ಚಿತ್ರವಾದ 'ದಮಯಂತಿ' ಚಿತ್ರದಲ್ಲಿ ಅಭಿನಯಿಸಲು ರಾಧಿಕಾ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿ ಸಂತಸ ತಂದಿತ್ತು.

ಇದೀಗ ರಾಧಿಕಾ ತಮ್ಮ ಮಗಳ ಜೊತೆ ಏಕೆ ಕಾಣಿಸಿಕೊಳ್ಳುತ್ತಿಲ್ಲ. ರಾಧಿಕಾ ಮಗಳು ಶಮಿಕಾ ಈಗ ಹೇಗಿದ್ದಾರೆ? ಎಂಬ ಕುತೂಹಲ ಹೊಂದಿದ್ದ ರಾಧಿಕಾ ಅಭಿಮಾನಿಗಳಿಗೆ ಈ ಫೋಟೋ ಖಂಡಿತ ಖುಷಿ ಕೊಡುತ್ತೆ. ರಾಧಿಕ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಷಯ ಬಿಟ್ಟು, ಇತ್ತೀಚಿಗೆ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. 

ರಾಧಿಕಾ ಇತ್ತೀಚಿಗೆ ತಮ್ಮ ಮಗಳಿಗೆ ಹೆಚ್ಚು ಗಮನ ಕೊಡುತ್ತಿದ್ದಾರೆ, ಹಾಗಾಗಿ ಎಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ. ಇದೀಗ ರಾಧಿಯ ತಮ್ಮ ಮುದ್ದು ಮಗಳು ಶಮಿಕಾ ಜೊತೆ ಮೆಟ್ರೋ ದಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.