ಬೆಂಗಳೂರು: ಸ್ಯಾಂಡಲ್‌ವುಡ್ ನಟ ಒಳ್ಳೆ ಹುಡ್ಗ ಪ್ರಥಮ್, ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಮಂಡ್ಯ ಮೂಲದ ಭಾನುಶ್ರೀ ಜೊತೆ ಎಂಗೇಜ್ ಮಾಡಿಕೊಂಡಿರುವ ವಿಡೀಯೋ ಸಾಮಾಜಿಕ ಮಾಧ್ಯಮದಲ್ಲಿ ಬಾರಿ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇನ್ನುಳಿದಂತೆ ತಮ್ಮ ಮದುವೆ ಬಗ್ಗೆ ಸ್ಟಷ್ಟನೆ ಕೊಟ್ಟಿರುವ ಪ್ರಥಮ್, ಸರಳವಾಗಿ ಕುಟುಂಬದವರು ಮೆಚ್ಚಿದವರ ಟ್ರೆಡಿಷನಲ್ ಫ್ಯಾಮಿಲಿಯ ಸಿಂಪಲ್ ಹುಡುಗಿಯನ್ನವರಿಸಲಿದ್ದೆನೆ ಎಂದರು. 


ಇದನ್ನೂ ಓದಿ: Shivarajkumar: ಯುವಕನ ಸಾಹಸಕ್ಕೆ ಶಿವಣ್ಣ ಫುಲ್‌ ಫಿದಾ.. ಹಗ್ ಮಾಡಿ ಭೇಷ್ ಎಂದ ಹ್ಯಾಟ್ರಿಕ್ ಹೀರೋ!


ಮದುವೆ ಪ್ಲಾನ್‌ ಬಗ್ಗೆ ಹೇಳಿರುವ ಪ್ರಥಮ್, ಯಾವುದೇ ರೀತಿಯ ಆಡಂಬರ ಇರಲ್ಲ. ಮದುವೆ ಪ್ರಯುಕ್ತ ವೃದ್ಧಾಶ್ರಮವೊಂದರ 138ಜನರಿಗೆ ಸಿಹಿ ಊಟ ಯೋಜನೆ ಇದೆ. ನೀವೆಲ್ಲರೂ ಹೇಗೆ ಬದುಕುತ್ತಿದ್ದೀರೋ ನಾವು ಕೂಡ ಹಾಗೇ. ನನ್ನ ಕೈಹಿಡಿಯುವವರು ಮಾಧ್ಯಮ, ಸೋಷಿಯಲ್ ಮೀಡಿಯಾ, ಪಬ್ಲಿಸಿಟಿಯಿಂದ ತುಂಬಾ ದೂರ.


ಸಿದ್ಧರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ಥರ ಅಂದುಕೊಳ್ಳಿ. ಮದುವೆ ಅವ್ರು ಹೇಗೇ ಮಾಡುತ್ತಾರೋ ಅವರಿಷ್ಟ. ನನಗೆ ದೇವಸ್ಥಾನದಲ್ಲಿ ಆಗುವ ಆಸೆ, ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ. ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್ ವೆಜ್ ಊಟ ಇದಾಗಿರಬಹುದು.


ಇದನ್ನೂ ಓದಿ: Actress Barkha Madan: ಒಂದು ಕಾಲದಲ್ಲಿ ಬಿಕಿನಿಯಲ್ಲಿ ಮಿಂಚಿದ್ದ ಬರ್ಖಾ ಮದನ್; ಇಂದು ಬೌದ್ಧ ಸನ್ಯಾಸಿನಿ..!


ಸರಳ ಜೀವನ ಪ್ರೀತಿಸುವುದರಿಂದ ಅದುವೇ ಇಷ್ಟ ಎಂದಿದ್ದಾರೆ. ಇನ್ನು ಮದುವೆಗೆ ಕೆಲವು  ಸೆಲೆಬ್ರೆಟಿಗಳ ಆಹ್ವಾನಿಸುವ ಯೋಜನೆಯಲ್ಲಿದ್ದಾರೆ. ಪ್ರಥಮ್ ಭಾವಿ ಪತ್ನಿ ಭಾನುಶ್ರೀ ಗೆ ಧ್ರುವ ಸರ್ಜಾ ಇಷ್ಟವಂತೆ ಈ ನಿಟ್ಟಿನಲ್ಲಿ ಪ್ರಿನ್ಸ್ ಧ್ರುವ , ಶಿವಣ್ಣ, ಹಾಗೆಯೇ  ನಟ ಯಶ್ ಹಾಗೂ ಸಿಎಂ ಸಿದ್ದರಾಮಯ್ಯರವನ್ನು ಕರೆಯುವ ಯೋಜನೆಯಲ್ಲಿದ್ದಾರೆ.


ಸರಳತೆ ಪ್ರೀತಿಸುವ ನಟನಿಗೆ ಅವರ ಮದುವೆ ಸಹ ಸಿಂಪಲ್‌ ಆಗಿರಲಿದೆ ಎಂದು ಹೇಳಿದ್ದಾರೆ. ಸದ್ಯ ನಟನ ಮದುವೆಗೆ ಇನ್ನು ದಿನಾಂಕ ಗೊತ್ತು ಪಡಿಸಿಲ್ಲ. ತಮ್ಮ ಮದುವೆ ಯೋಜನೆ ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ನಟ ಹಂಚಿಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.