'ರಾಧೆ ಶ್ಯಾಮ್​' (Radhe Shyam) ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಸಿನಿಮಾ ಇದಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Ravichandran: ನಟ ವಿ.ರವಿಚಂದ್ರನ್ ತಾಯಿ ನಿಧನ


ಈ ಚಿತ್ರತಂಡಕ್ಕೆ ಈಗ ಶಿವರಾಜ್​ಕುಮಾರ್​ (Shivarajkumar) ಕೂಡ ಜೊತೆಯಾಗಿದ್ದಾರೆ. 'ರಾಧೆ ಶ್ಯಾಮ್​' ಸಿನಿಮಾದ ನಿರ್ಮಾಪಕರು ಸ್ವತಃ ಈ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. 


ಶಿವರಾಜ್​ಕುಮಾರ್​ ಮಾತ್ರವಲ್ಲದೇ ಖ್ಯಾತ ನಿರ್ದೇಶಕ ರಾಜಮೌಳಿ (Rajamouli), ಮಲಯಾಳಂ ಸೂಪರ್​ ಸ್ಟಾರ್​ ಪೃಥ್ವಿರಾಜ್ ಸುಕುಮಾರನ್​ (Pruthviraj Sukumaran) ಕೂಡ 'ರಾಧೆ ಶ್ಯಾಮ್​' ಚಿತ್ರತಂಡ ಸೇರಿಕೊಂಡಿದ್ದಾರೆ. 


 


Shruti Hassan ಗೆ ತಗುಲಿದ ಕೊರೊನಾ ಸೋಂಕು, ಮನೆಯಲ್ಲಿಯೇ ಚಿಕಿತ್ಸೆ


'ರಾಧೆ ಶ್ಯಾಮ್​' ಚಿತ್ರದ ಕನ್ನಡ ವರ್ಷನ್​ ನಿರೂಪಣೆಗೆ ಶಿವರಾಜ್​ಕುಮಾರ್​ (Shivarajkumar) ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ. ಅದೇ ರೀತಿ, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಪೃಥ್ವಿರಾಜ್​ ಸುಕುಮಾರನ್​  ನಿರೂಪಣೆಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.   


ಮಾರ್ಚ್ 11 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.