Radhe Shyam:ವ್ಯಾಲೆಂಟೈನ್ ಡೇ ಗಿಫ್ಟ್.. ಪೂಜಾ ಹೆಗ್ಡೆಗೆ ಮುದ್ದಾಗಿ ಪ್ರಪೋಸ್ ಮಾಡಿದ ಪ್ರಭಾಸ್!

Radhe Shyam: ಪ್ರಭಾಸ್ ಅಭಿಮಾನಿಗಳಿಗೆ 'ರಾಧೆ ಶ್ಯಾಮ್' ಚಿತ್ರತಂಡ ವ್ಯಾಲೆಂಟೈನ್ ಡೇ ಗಿಫ್ಟ್ (Valentine's Day) ನೀಡಿದೆ.

Edited by - Chetana Devarmani | Last Updated : Feb 14, 2022, 05:33 PM IST
  • 'ರಾಧೆ ಶ್ಯಾಮ್' ಚಿತ್ರತಂಡದಿಂದ ವ್ಯಾಲೆಂಟೈನ್ ಡೇ ಗಿಫ್ಟ್
  • ಪ್ರೇಮಿಗಳ ದಿನದಂದು ವಿಶೇಷ ಗ್ಲಿಂಪ್ಸ್ ಬಿಡುಗಡೆ
  • ಪೂಜಾ ಹೆಗ್ಡೆಗೆ ಮುದ್ದಾಗಿ ಪ್ರಪೋಸ್ ಮಾಡಿದ ಪ್ರಭಾಸ್!
Radhe Shyam:ವ್ಯಾಲೆಂಟೈನ್ ಡೇ ಗಿಫ್ಟ್.. ಪೂಜಾ ಹೆಗ್ಡೆಗೆ ಮುದ್ದಾಗಿ ಪ್ರಪೋಸ್ ಮಾಡಿದ ಪ್ರಭಾಸ್!  title=
ರಾಧೆ ಶ್ಯಾಮ್

ನವದೆಹಲಿ: ಪ್ರಭಾಸ್ ಅಭಿಮಾನಿಗಳಿಗೆ 'ರಾಧೆ ಶ್ಯಾಮ್' (Radhe Shyam) ಚಿತ್ರತಂಡ ವ್ಯಾಲೆಂಟೈನ್ ಡೇ ಗಿಫ್ಟ್ (Valentine's Day) ನೀಡಿದೆ. ಪ್ರೇಮಿಗಳ ದಿನದಂದು ವಿಶೇಷ ಗ್ಲಿಂಪ್ಸ್ ಬಿಡುಗಡೆ ಮಾಡಿದೆ.

ಇದನ್ನೂ ಓದಿ: 'Srivalli' ಸಿಗ್ನೇಚರ್ ಸ್ಟೆಪ್ ಗೆ ಕೊರಿಯನ್ ಯುವತಿಯ Swag Dance, ಫಿದಾ ಆಗಲಿದ್ದಾನೆಯೇ 'Pushpa'?

ಪ್ರಭಾಸ್ (ವಿಕ್ರಮಾದಿತ್ಯ) ಮತ್ತು ಪೂಜಾ ಹೆಗ್ಡೆ (ಸ್ಫೂರ್ತಿ) ನಡುವಿನ ಪ್ರೇಮ ದೃಶ್ಯಗಳನ್ನು ಹೊಂದಿರುವ ಈ ವಿಶೇಷ ದ್ರಶ್ಯ ಪ್ರೇಕ್ಷಕರ ಮನಗೆದ್ದಿದೆ. ಅದರಲ್ಲೂ ವಿಕ್ರಮಾದಿತ್ಯ ಪ್ರೀತಿಗಾಗಿ ಮಾಡುವ ಕೆಲಸಗಳು ಸಿನಿರಸಿಕರನ್ನು ರಂಜಿಸುತ್ತಿವೆ. ನಾಯಕ ಪ್ರಭಾಸ್ (Prabhas) ಮಂಡಿಯೂರಿ ಕುಳಿತು ಪ್ರಪೋಸ್ ಮಾಡುವ ದೃಶ್ಯಗಳಿಗೆ ಅಭಿಮಾನಿಗಳು ಮನಸೋತಿದ್ದಾರೆ.

ಜನವರಿಯಲ್ಲಿ ತೆರೆಕಾಣಬೇಕಿದ್ದ ಚಿತ್ರ ಕೊರೊನಾ (Corona) ಮೂರನೇ ಅಲೆಯ ಕಾರಣದಿಂದ ಮುಂದೂಡಲ್ಪಟ್ಟಿದೆ. ಇದರಿಂದ ನಿರಾಸೆಗೊಂಡಿರುವ ಅಭಿಮಾನಿಗಳಿಗೆ ಈ ಟ್ರೇಲರ್ ದೊಡ್ಡ ಕೊಂಚ ಸಮಾಧಾನ ನೀಡಿದೆ. ವ್ಯಾಲೆಂಟೈನ್ಸ್ ಡೇ ವಿಶೇಷ ಗ್ಲಿಂಪ್ಸ್‌ಗಳು ಚಿತ್ರದ ಮೇಲಿನ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ.

ಇದನ್ನೂ ಓದಿ: "ಚಲನಚಿತ್ರಗಳ ಹೆಸರಿನಲ್ಲಿ ಕಸವನ್ನು ಮಾರಾಟ ಮಾಡಬೇಡಿ ಪ್ಲೀಸ್": 'ಗೆಹರಾಯಿಯಾ' ಬಗ್ಗೆ ಕಂಗನಾ ಕಾಮೆಂಟ್

ಮಾರ್ಚ್ 11 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ 'ರಾಧೆ ಶ್ಯಾಮ್' ಬಿಡುಗಡೆಯಾಗಲಿದೆ.

ರಾಧಾ ಕೃಷ್ಣ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಭೂಷಣ್ ಕುಮಾರ್, ವಂಶಿ, ಪ್ರಮೋದ್ ನಿರ್ಮಾಣ ಮಾಡಿದ್ದು, ಟಿ-ಸೀರೀಸ್ ಫಿಲ್ಮ್ಸ್ ಮತ್ತು ಯುವಿ ಕ್ರಿಯೇಷನ್ಸ್ ಸಹ-ನಿರ್ಮಾಣ ಮಾಡಿವೆ. 

ಚಿತ್ರದಲ್ಲಿ ಪ್ರಭಾಸ್, ಪೂಜಾ ಹೆಗ್ಡೆ (Pooja Hegde), ಭಾಗ್ಯ ಶ್ರೀ, ಕೃಷ್ಣಂ ರಾಜು, ಸತ್ಯ ರಾಜ್, ಜಗಪತಿ ಬಾಬು, ಸಚಿನ್ ಕೇದಾರ್ಕರ್, ಪ್ರಿಯದರ್ಶಿ, ಮುರಳಿ ಶರ್ಮಾ, ಜಯರಾಮ್ ಸೇರಿದಂತೆ ದೊಡ್ಡ ತಾರಾಗಣವಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News