ನಟ ರಕ್ಷಿತಾ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಸಖತ್‌ ಹಿಟ್‌ ಆಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಈ ಚಿತ್ರ ಜನರ ಮನಗೆದ್ದಿದ್ದು, ಗಲ್ಲಾಪೆಟ್ಟಿಗೆಯಲ್ಲಿಯೂ ಉತ್ತಮ ಗಳಿಕೆ ಕಂಡಿದೆ. 2022ರ ಹಿಟ್‌ ಚಿತ್ರಗಳಲ್ಲಿ ಒಂದಾದ 777 ಚಾರ್ಲಿ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಒಟಿಟಿಗೂ ಎಂಟ್ರಿ ಕೊಡಲು ಸಿದ್ಧವಾಗಿದೆ. 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ 25 ದಿನಗಳ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗಲು ಸಜ್ಜಾಗಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಾಲಿವುಡ್‌ಗೆ ಹಾರಲಿದೆ 'ರಂಗಿತರಂಗ'..! ಕನ್ನಡ ಸಿನಿಮಾದಲ್ಲಿ ಅಕ್ಷಯ್‌ ಹೀರೋ..?


ಈ ನಡುವೆಯೇ ಚಿತ್ರತಂಡ ಸಿನಿಮಾದಿಂದ ಡಿಲೀಟ್‌ ಮಾಡಲಾದ ದೃಶ್ಯವೊಂದನ್ನು ಹಂಚಿಕೊಂಡಿದೆ. "ಧರ್ಮ ಹಾಗೂ ಚಾರ್ಲಿ ಜೊತೆ ಆದ್ರಿಕ ಹುಟ್ಟುಹಬ್ಬದ ಆಚರಣೆಯಲ್ಲಿ ನೀವೂ ಭಾಗಿಯಾಗಿ" ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. 


ಈ ವಿಡಿಯೋದಲ್ಲಿ ಆದ್ರಿಕ ಹುಟ್ಟುಹಬ್ಬ ಸೆಲಿಬ್ರೇಷನ್‌ಗೆ ಚಾರ್ಲಿ ಮತ್ತು ಧರ್ಮ ಗಿಫ್ಟ್‌ ತೆಗೆದುಕೊಂಡು ಬರುವ ದೃಶ್ಯವಿದೆ. ಸಿನಿಮಾ ನೋಡಿ ಮೆಚ್ಚಿದ ಜನರು ಇದೀಗ ಈ ವಿಡಿಯೋವನ್ನು ಸಹ ಇಷ್ಟಪಡುತ್ತಿದ್ದಾರೆ. 


 


 

 

 

 



 

 

 

 

 

 

 

 

 

 

 

A post shared by Kiranraj K (@kiranraj_k)


 


ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ಶಾರ್ವರಿ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ ಸೇರಿದಂತೆ ಅನೇಕ ತಾರೆಯರಿ ಈ ಸಿನಿಮಾದಲ್ಲಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿ 777 ಚಾರ್ಲಿ ಸಿನಿಮಾದ ಒಟಿಟಿ ಹಕ್ಕು, ಟಿವಿ ರೈಟ್ಸ್‌ನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದೆ.  ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾ ಜುಲೈ 29ರಂದು ವೂಟ್ ಸೆಲೆಕ್ಟ್‌ನಲ್ಲಿ ಚಾರ್ಲಿ ಬಿಡುಗಡೆಯಾಗಲಿದೆ.  


ಇದನ್ನೂ ಓದಿ: ಸಿನಿಪ್ರಿಯರಿಗೆ ಸಿಹಿ ಸುದ್ದಿ.. ಒಟಿಟಿಗೆ ಎಂಟ್ರಿ ಕೊಡುತ್ತಿದೆ 777 ಚಾರ್ಲಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ