RRR Hindi Remake : ಟಾಲಿವುಡ್‌ ಸ್ಟಾರ್‌ ನಿರ್ದೇಶಕ ರಾಜಮೌಳಿ ನಿರ್ದೇಶನದ RRR ಪ್ಯಾನ್ ವರ್ಲ್ಡ್‌ ಸಿನಿಮಾ ಈಗಾಗಲೇ ಯಶಸ್ವಿಯಾಗಿದೆ. ಈ ಚಿತ್ರವು ಜಾಗತಿಕವಾಗಿ 1200 ಕೋಟಿ ರೂ. ಗಳಿಸಿದ್ದು ಎಲ್ಲರಿಗೂ ಗೊತ್ತಿದೆ. ಅಲ್ಲದೆ, ಹಿಂದಿ ಡಬ್ಬಿಂಗ್ ಆವೃತ್ತಿಯಲ್ಲೇ 273 ಕೋಟಿ ರೂ. ಗಳಿಸಿತ್ತು. ಇದರಿಂದಾಗಿ ಈ ಸಿನಿಮಾವನ್ನು ರೀಮೇಕ್ ಮಾಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಆದ್ರೂ ಒಂದು ವೇಳೆ ರಿಮೇಕ್‌ ಆದ್ರೆ, ಎನ್‌ಟಿಆರ್‌ ಮತ್ತು ರಾಮ್‌ಚರಣ್‌ ತೇಜ್‌ ಅವರ ಪಾತ್ರವನ್ನು ಯಾರು ನಿಭಾಯಿಸಬಲ್ಲರು ಎಂಬ ಪ್ರಶ್ನೆ ಉದ್ಭವಿಸುತ್ತದೆ.


COMMERCIAL BREAK
SCROLL TO CONTINUE READING

ಬಾಲಿವುಡ್‌ನ ಯಾವ ನಟರು ರಾಜಮೌಳಿಯ ದೃಶ್ಯಕಾವ್ಯ ʼಆರ್‌ಆರ್‌ಆರ್‌ʼ ರಿಮೇಕ್‌ನ ಪ್ರಮುಖ ಪಾತ್ರಗಳನ್ನು ನಿರ್ವಹಿಸಬಹುದು ಮತ್ತು ಈ ಸಿನಿಮಾದ ಬಾಲಿವುಡ್ ಆವೃತ್ತಿಯನ್ನು ಯಾರು ನಿರ್ದೇಶಿಸಿದರೆ ಉತ್ತಮ ಎಂಬ ಪ್ರಶ್ನೆಗೆ ಇದೀಗ ಚಾಟ್‌ಜಿಪಿಟಿ ಸಲಹೆ ನೀಡಿದೆ. ರಾಮ್ ಚರಮ್ ನಟಿಸಿದ ಅಲ್ಲೂರಿ ಸೀತಾರಾಮ ರಾಜು ಪಾತ್ರವನ್ನು ರಣವೀರ್ ಸಿಂಗ್ ಅಥವಾ ಸಿದ್ಧಾರ್ಥ್ ಮಲ್ಹೋತ್ರಾ ನಿರ್ವಹಿಸಬಹುದು ಎಂದು ಹೇಳಿದೆ.


ಇದನ್ನೂ ಓದಿ: Upasana baby shower: ರಾಮ್ ಚರಣ್ ಪತ್ನಿ ಉಪಾಸನಾ ಸೀಮಂತದಲ್ಲಿ ಅಲ್ಲು ಅರ್ಜುನ್, ಸಾನಿಯಾ ಮಿರ್ಜಾ!


ರಣವೀರ್‌ ನಟನೆ ಬಗ್ಗೆ ChatGPT, ʼರಣವೀರ್ ಸಿಂಗ್ ಬಹುಮುಖ ನಟರಾಗಿದ್ದು, ಅಭಿನಯ ಮತ್ತು ಪಾತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಅವರು ಕೆಲವು ಶಕ್ತಿಯುತ ಪ್ರದರ್ಶನಗಳನ್ನು ನೀಡಿದ್ದು, ಅವರ ನಟನಾ ಸಾಮರ್ಥ್ಯ ಉತ್ತಮ ಶ್ರೇಣಿಯಲ್ಲಿದೆ ಅಂತ ತಿಳಿಸಿದೆ. ಆರ್‌ಆರ್‌ಆರ್‌ನ ಇತರ ಪ್ರಮುಖ ಪಾತ್ರವೆಂದರೆ ಕೊಮರಂ ಭೀಮ್, ಈ ಪಾತ್ರವನ್ನು ಎನ್‌ಟಿಆರ್‌ ನಿರ್ವಹಿಸಿದ್ದಾರೆ. ಹಿಂದಿ ರಿಮೇಕ್‌ನಲ್ಲಿ, ಈ ಪಾತ್ರವನ್ನು ವಿಕ್ಕಿ ಕೌಶಲ್ ಅಥವಾ ರಾಜ್‌ಕುಮಾರ್ ರಾವ್ ಅವರು ನಿರ್ವಹಿಸಿದರೆ ಉತ್ತಮ ಎಂದು ಚಾಟ್‌ ಬೋಟ್‌ ಹೇಳಿದೆ.


ವಿಕ್ಕಿ ಕೌಶಲ್ ಮತ್ತು ರಾಜ್‌ಕುಮಾರ್ ರಾವ್ ಇಬ್ಬರೂ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ನಟರು, ತಮ್ಮ ಅಭಿನಯದಲ್ಲಿ ಬಹುಮುಖತೆ ಹೊಂದಿದ್ದಾರೆ. ತಮ್ಮ ಹಿಂದಿನ ಸಿನಿಮಾಗಳಲ್ಲಿ ಬಲವಾದ ಮತ್ತು ಶಕ್ತಿಯುತ ವ್ಯಕ್ತಿತ್ವದ ಪಾತ್ರಗಳನ್ನು ಸಹ ನಿರ್ವಹಿಸಿದ್ದಾರೆ. ಇದರಿಂದ ಆರ್‌ಆರ್‌ಆರ್‌ನ ಹಿಂದಿ ರಿಮೇಕ್‌ನಲ್ಲಿ ಕೊಮರಂ ಭೀಮ್ ಪಾತ್ರವನ್ನು ನಿರ್ವಹಿಸಲು ಇವರಿಬ್ಬರು ಸೂಕ್ತವಾದ ಆಯ್ಕೆ ಎಂದು ಚಾಟ್‌ಬೋಟ್‌ ಪ್ರತಿಕ್ರಿಯೆ ನೀಡಿದೆ. ಅಲ್ಲದೆ, ಆರ್‌ಆರ್‌ಆರ್ ಹಿಂದಿ ರಿಮೇಕ್ ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ  ನಿರ್ದೇಶನ ಮಾಡಿದ್ರೆ ಸೂಕ್ತ ಎಂದು ಚಾಟ್‌ಜಿಪಿಟಿ ತಿಳಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.