ಕ್ರೇಜಿಸ್ಟಾರ್ ಬಗ್ಗೆ ನಿಮಗೆ ಗೊತ್ತಿರದ ಹಲವು ವಿಶೇಷಗಳಿವು
CrazyStar Birthday: ರವಿಚಂದ್ರನ್ ತಂದೆ ಎನ್. ವೀರಾಸ್ವಾಮಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಇದು ಕ್ರೇಜಿಸ್ಟಾರ್‌ಗೆ ಚಿತ್ರರಂಗಕ್ಕೆ ಎಂಟ್ರಿ ನೀಡಲು ಸಹಾಯವಾಯ್ತು. ಅದ್ಧೂರಿ ಹಾಡುಗಳು, ಅದ್ಭುತ ದೃಶ್ಯ ವೈಭವವನ್ನು ತೆರೆ ಮೇಲೆ ತೆರೆದಿಟ್ಟರು. ಸ್ವಂತಿಕೆಯನ್ನು ಸಾಬೀತು ಮಾಡಿದರು.
CrazyStar V Ravichandran Birthday: ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಮಣ್ಣಿನ ಹೆಮ್ಮೆಯ ಕಲಾವಿದ. ಸಿನಿಮಾಗಾಗಿ ಏನ್ ಬೇಕಾದ್ರೂ ಮಾಡ್ತೀನಿ ಅನ್ನೋ ಅದ್ಭುತ ವ್ಯಕ್ತಿತ್ವ. ನನ್ನ ಉಸಿರು ಇರೋವರೆಗೂ ಸಿನಿಮಾಗಾಗಿ ಜೀವಿಸುವೆ ಅನ್ನೋದು ಕ್ರೇಜಿಸ್ಟಾರ್ ರವಿಮಾಮನ ಮಾತು. ವಿಭಿನ್ನ ಸದಾಭಿರುಚಿಯ ಸಿನಿಮಾಗಳನ್ನ ಪ್ರೇಕ್ಷಕರಿಗೆ ಉಣಬಡಿಸಿದ ಕೀರ್ತಿ ಕ್ರೇಜಿಸ್ಟಾರ್ ಗೆ ಸಲ್ಲುತ್ತೆ.
ಇಂದು ಸ್ಯಾಂಡಲ್‌ವುಡ್ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರು ಹಾಗೂ ಆತ್ಮೀಯರೊಂದಿಗೆ ರವಿಚಂದ್ರನ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 1961ರಲ್ಲಿ ಜನಿಸಿದ ರವಿಚಂದ್ರನ್ ಇಂದು 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್‌ಡೇ ಬಾಯ್‌ಗೆ ಅಭಿಮಾನಿಗಳು, ಸ್ಯಾಂಡಲ್‌ವುಡ್ ಗಣ್ಯರು, ಆಪ್ತರು ನಿನ್ನೆ ರಾತ್ರಿಯಿಂದಲೇ ಶುಭ ಕೋರಲು ಆರಂಭಿಸಿದ್ದಾರೆ. 1968ರಲ್ಲಿ ರವಿಚಂದ್ರನ್ ಧೂಮಕೇತು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ನಂತರ ಕುಲಗೌರವ ಚಿತ್ರದಲ್ಲಿ ಕೂಡಾ ಬಾಲನಟನಾಗಿ ಅಭಿನಯಿಸಿದರು.
ಇದನ್ನೂ ಓದಿ- ಅಮ್ಮನ ತಾಳಿ ಮತ್ತು ಮೂಗುಬೊಟ್ಟನ್ನ ಪತ್ನಿಗೆ ಕೊಟ್ಟ ನಟ ವಸಿಷ್ಠ ಸಿಂಹ ! ಯಾಕೆ ಗೊತ್ತಾ?
ರವಿಚಂದ್ರನ್ ತಂದೆ ಎನ್. ವೀರಾಸ್ವಾಮಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಇದು ಕ್ರೇಜಿಸ್ಟಾರ್‌ಗೆ ಚಿತ್ರರಂಗಕ್ಕೆ ಎಂಟ್ರಿ ನೀಡಲು ಸಹಾಯವಾಯ್ತು. ಅದ್ಧೂರಿ ಹಾಡುಗಳು, ಅದ್ಭುತ ದೃಶ್ಯ ವೈಭವವನ್ನು ತೆರೆ ಮೇಲೆ ತೆರೆದಿಟ್ಟರು. ಸ್ವಂತಿಕೆಯನ್ನು ಸಾಬೀತು ಮಾಡಿದರು.
ಇದನ್ನೂ ಓದಿ- ಅರಳಿದ ಹೂವುಗಳು 'ಟೀಸರ್ ಬಿಡುಗಡೆ.. ಟೈಟಲ್ ಮೂಲಕವೇ ಸದ್ದು ಮಾಡುತ್ತಿದೆ ಈ ಸಿನಿಮಾ..!
ಅದ್ಧೂರಿ ಸಿನಿಮಾಗಳಿಂದ ಕನ್ನಡ ಚಿತ್ರರಂಗವನ್ನು ಮತ್ತಷ್ಟು ಶ್ರೀಮಂತಗೊಳಿಸಿದರು. ಚೆಂದಚೆಂದದ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ನೀಡಿ ಬೆಳೆಸಿದರು. ಸೋ ಕನಸುಗಾರನಿಗೆ ನಮ್ಮ ಕಡೆಯಿಂದಲೂ ಹ್ಯಾಪಿ ಬರ್ತ್ಡೇ. ಆದರೆ ಈ ಬಾರಿ ಅಭಿಮಾನಿಗಳಿಗೆ ಕನಸುಗಾರ ದರ್ಶನ ಕೊಡೋದು ಡೌಟ್. ಇದು ಅಭಿಮಾನಿಗಳ ಪಾಲಿಗೆ ಬೇಸರ ಮೂಡಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.