1 ರೂಪಾಯಿಗೆ ʼಯದಾ ಯದಾಹಿʼ ಪ್ರೀಮಿಯರ್‌ ಶೋ.!

Yadha Yadha Hi : ಮರ್ಡರ್‌ ಮಿಸ್ಟ್ರಿ ಸುತ್ತ ನಡೆಯುವ ಕುತೂಹಲ ಕೆರಳಿಸುವ ಕಥಾಹಂದರ ಹೊಂದಿರುವ ಸಿನಿಮಾ ʼಯದಾ ಯದಾ ಹಿʼ. ಈ ಚಿತ್ರ ಇದೇ ಶುಕ್ರವಾರ ರಾಜ್ಯದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ. ಯುವ ತಾರಾಜೋಡಿ ವಸಿಷ್ಠಸಿಂಹ ಹಾಗೂ ಹರಿಪ್ರಿಯ ತೆರೆಯ ಮೇಲೆ ಜೋತೆಯಾಗಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದೆ.   

Written by - Zee Kannada News Desk | Last Updated : May 30, 2023, 11:07 AM IST
  • ʼಯದಾ ಯದಾ ಹಿʼ ಚಿತ್ರ ಇದೇ ಶುಕ್ರವಾರ ರಾಜ್ಯದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ
  • ತಾರಾಜೋಡಿ ವಸಿಷ್ಠಸಿಂಹ ಹಾಗೂ ಹರಿಪ್ರಿಯ ತೆರೆಯ ಮೇಲೆ ಜೋತೆಯಾಗಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದೆ.
  • ಚಿತ್ರಮಂದಿರಗಳಲ್ಲಿ 1 ರೂ ಪ್ರವೇಶ ದರ ನೀಡಿ ಸಿನಿಮಾ ನೋಡುವ ಅವಕಾಶವಿದೆ
1 ರೂಪಾಯಿಗೆ ʼಯದಾ ಯದಾಹಿʼ ಪ್ರೀಮಿಯರ್‌ ಶೋ.!  title=

Sandalwood : ಈ ಜೋಡಿ ಒಂದಾಗಿ ನಟಿಸಿರುವುರಿಂದ ಈ ಚಿತ್ರ ಒಂದಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ. ಅಲ್ಲದೇ ಹರಿಪ್ರಿಯಾ ನೆಗೆಟಿವ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಇಡೀ ಚಿತ್ರವೇ ಅವರ ಪಾತ್ರದ ಮೇಲೆ ನಿಂತಿದೆ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರುವ ಈ ಸಿನಿಮಾದ ಪ್ರೀಮಿಯರ್‌ ಶೋವನ್ನು ಕೇವಲ ಒಂದು ರೂಪಾಯಿಯಲ್ಲಿ ನೋಡಬಹುದು.

ಹೌದು ಬುಧವಾರ(ಮೇ31) ಸಂಜೆ ನಡೆಯಲಿರುವ ಯದಾ ಯದಾ ಹಿ ಸಿನಿಮಾದ ಪ್ರೀಮಿಯರ್‌ ಶೋವನ್ನು ಬೆಂಗಳೂರಿನ ವೀರೇಶ ಚಿತ್ರಮಂದಿರ ಹಾಗೂ ಹುಬ್ಬಳ್ಳಿಯ ಸುಧಾ ಚಿತ್ರಮಂದಿರಗಳಲ್ಲಿ 1 ರೂ ಪ್ರವೇಶ ದರ ನೀಡಿ ಸಿನಿಮಾ ನೋಡುವ ಅವಕಾಶವನ್ನು ನಿರ್ಮಾಪಕರು ಒದಗಿಸಿದ್ದಾರೆ. 

ಇದನ್ನೂ ಓದಿ-ಅಂದು ವಿಷ್ಣುವರ್ಧನ್ ಗೆ ವೀರೇಂದ್ರ ಹೆಗ್ಡೆ ಕೊಟ್ಟ ಚಿನ್ನದ ಸರವನ್ನ ವಿಷ್ಣು ಸರ್ ಏನು ಮಾಡಿದ್ರು ಗೊತ್ತಾ..?

ಶಾಲಿನಿ ಎಂಟರ್‌ಪ್ರೈಸಸ್‌ ಮೂಲಕ ಜಾಕ್‌ ಮಂಜು ಅವರು ಈ ಚಿತ್ರವನ್ನು ರಿಲೀಸ್‌ ಮಾಡುತ್ತಿದ್ದ, ಇನ್ನೂ ವಿಶೇಷ ಎಂದರೆ ಈ ಚಿತ್ರ ಟೈಟಲ್‌ ಸಾಂಗ್‌ನ್ನು ವಸಿಷ್ಠಸಿಂಹ ಹಾಗೂ ಹರಿಪ್ರಿಯಾ ಹಾಡಿದ್ದಾರೆ. ತೆಲುಗು ಮೂಲದ ಅಶೋಕ ತೇಜ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಗೈಸ್‌ ಅಂಡ್‌ ಡಾಲ್ಸ್‌ ಕ್ರಿಯೇಶನ್ಸ್‌ ಮೂಲಕ ಹೈದ್ರಾಬಾದ್‌ನ ರಾಜೇಶ್‌ ಅಗರ್‌ವಾಲ್‌ ಅವರು ನಿರ್ಮಿಸಿದ್ದಾರೆ. 

ಇದನ್ನೂ ಓದಿ-The Kerala Story: ದಿ ಕೇರಳ ಸ್ಟೋರಿ ಪ್ರದರ್ಶಿಸಿದರೆ ಥಿಯೇಟರ್‌ ಸ್ಫೋಟಿಸುವುದಾಗಿ ISIS ಬೆದರಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News