ಮಹೇಶ್-ರಾಜಮೌಳಿ ಚಿತ್ರದಲ್ಲಿ ಇಂಡೋನೇಷ್ಯಾ ಬೆಡಗಿ ನಾಯಕಿ...! ಮುಗಿಲು ಮುಟ್ಟುತ್ತೆ ಸಿನಿಮಾ ಬಜೆಟ್
SSMB29 : ಖ್ಯಾತ ನಿರ್ದೇಶಕ ರಾಜಮೌಳಿ ಅವರ ಸಿನಿಮಾಗಳು ಭಾರತೀಯರಿಗೆ ಅಷ್ಟೇ ಅಲ್ಲ, ವಿದೇಶಿ ಪ್ರೇಕ್ಷಕರಿಗೂ ಬಲು ಇಷ್ಟ. ಅಲ್ಲದೆ, ರಾಜಮೌಳಿ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದಾಗ ಸಿನಿ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದ್ದು, ಜಗತ್ತಿನಾದ್ಯಂತ ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಈ ಸಿನಿಮಾದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.
Mahesh - Rajamouli movie : ಮಹೇಶ್ ಬಾಬು ಪ್ರಸ್ತುತ ತ್ರಿವಿಕ್ರಮ್ ಶ್ರೀನಿವಾಸ್ ಅವರ ʼಗುಂಟೂರು ಕಾರʼ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಸಂಕ್ರಾಂತಿಯ ಉಡುಗೊರೆಯಾಗಿ ಜನವರಿ 12 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ನಾಯಕಿಯರಾಗಿ ನಟಿಸುತ್ತಿದ್ದು, ರಮ್ಯಾ ಕೃಷ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾ ಮುಗಿದ ನಂತರ ಮಹೇಶ್ ಬಾಬು ರಾಜಮೌಳಿ ಜೊತೆಗಿನ ಮುಂದಿನ ಪ್ರಾಜೆಕ್ಟ್ನಲ್ಲಿ ಬ್ಯುಸಿಯಾಗಲಿದ್ದಾರೆ. ರಾಜಮೌಳಿ ಅವರ ಆರ್ಆರ್ಆರ್ ಚಿತ್ರ ಬಿಡುಗಡೆಯಾಗಿ ಸುಮಾರು ಎರಡು ವರ್ಷಗಳಾಗಿವೆ. ಆಸ್ಕರ್ ಪ್ರಶಸ್ತಿಯನ್ನೂ ಪಡೆದಿರುವ ಈ ಚಿತ್ರ ರಾಜಮೌಳಿ ಮೇಲಿರುವ ಕ್ರೇಜ್ ಅನ್ನು ಜಗತ್ತಿನಾದ್ಯಂತ ಊಹಿಸಲಾಗದ ಮಟ್ಟಕ್ಕೆ ಕೊಂಡೊಯ್ದಿದೆ.
ಇದನ್ನೂ ಓದಿ:ರಾಜಧಾನಿಯಲ್ಲಿ ʼಹನುಮಾನ್ʼ..! ಸಂಕ್ರಾತಿಗೆ ಚಿತ್ರಮಂದಿರಲ್ಲಿ ಶ್ರೀರಾಮ ಬಂಟನ ದರ್ಶನ
ಇನ್ನು ಮೊದಲ ಬಾರಿಗೆ ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಸ್ಕ್ರಿಪ್ಟ್ ಬಹುತೇಕ ಮುಗಿದಿದೆ. ಏಪ್ರಿಲ್ ನಿಂದ ಶೂಟಿಂಗ್ ಶುರುವಾಗಲಿದೆ ಎಂದು ವರದಿಯಾಗಿದೆ. ಆದರೆ ಈ ಚಿತ್ರದಲ್ಲಿ ನಾಯಕಿ ಯಾರು ಎಂಬ ಚರ್ಚೆ ಹಲವು ದಿನಗಳಿಂದ ನಡೆಯುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಕೇಳಿ ಬಂದಿತ್ತು. ಈಗ ಈ ಚಿತ್ರಕ್ಕೆ ಇಂಡೋನೇಷ್ಯಾದ ನಟಿ ಚೆಲ್ಸಿಯಾ ಇಸ್ಲಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಯಾಗಿದೆ. ಇಂಡೋನೇಷಿಯಾದ ಈ ನಟಿ ಕೆಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಆಕೆಯ ಸ್ಕ್ರೀನ್ ಟೆಸ್ಟ್ ಕೂಡ ನಡೆದಿದ್ದು, ಈ ಚಿತ್ರಕ್ಕೆ ವಿದೇಶಿ ಬೆಡಗಿಯ ಆಗಮನ ಬಹುತೇಕ ಖಚಿತವಾಗಿದೆಯಂತೆ.
ಇದನ್ನೂ ಓದಿ: ಒಟಿಟಿಗೆ ದಿಢೀರ್ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್ ಟೈಗರ್ 3 ಸಿನಿಮಾ..! ಎಲ್ಲಿ.. ಯಾವಾಗ..
ಆದರೆ ಚೆಲ್ಸಿಯಾ ನಾಯಕಿಯ ಪಾತ್ರಕ್ಕೆ ಆಯ್ಕೆಯಾಗಿದ್ದಾರಾ ಅಥವಾ ಬೇರೆ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರಾ ಎಂಬ ಮಾಹಿತಿ ಸ್ಪಷ್ಟವಾಗಬೇಕಿದೆ. ಸದ್ಯದ ಮಾಹಿತಿ ಪ್ರಕಾರ, ಈ ಚಿತ್ರ ಇಂಡಿಯಾನಾ ಜೋನ್ಸ್ ಶೈಲಿಯ ಕಥೆಯಾಗಿರುವುದರಿಂದ ಮೂರು ದೇಶಗಳಲ್ಲಿ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ.
ಸಿನಿಮಾದ ಅರ್ಧದಷ್ಟು ಭಾಗ ಒಂದೇ ಸೆಟ್ನಲ್ಲಿ ಸಾಗಲಿದೆ. ಅದಕ್ಕಾಗಿ ವಿಶಾಲವಾದ ಸೆಟ್ ನಿರ್ಮಾಣ ಕಾರ್ಯದಲ್ಲಿ ಚಿತ್ರತಂಡ ತೊಡಗಿದೆ. ಆರ್ಆರ್ಆರ್ಗಿಂತ ಈ ಚಿತ್ರದ ಬಜೆಟ್ ಜಾಸ್ತಿಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಸುಮಾರು 1000 ಕೋಟಿ ರೂ. ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ ಎನ್ನಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.