Chetan Ahimsa about Kantara : ಸೌತ್‌ ಸಿನಿ ಇಂಡಸ್ಟ್ರಿ ಮಾತ್ರವಲ್ಲ ಭಾರತೀಯ ಸಿನಿರಂಗದ ಸ್ಟಾರ್‌ಗಳ ಗಮನ ಸೆಳೆದಿದೆ ಕಾಂತಾರ ಸಿನಿಮಾ. ಕನ್ನಡದ ಈ ಸಿನಿಮಾದ ಹಿಂದಿ ಆವೃತ್ತಿ ಬಾಲಿವುಡ್‌ನಲ್ಲಿ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ. ಇನ್ನೂ ತೆಲುಗು ತಮಿಳು ಮತ್ತು ಮಲಯಾಳಂನಲ್ಲಿಯೂ ಸಿನಿಮಾದ ಅಬ್ಬರಿಸುತ್ತಿದೆ. ಎಲ್ಲ ಸಿನಿಪ್ರಿಯರ ಮನಗೆದ್ದಿರುವ ಕಾಂತಾರ ಬಾಕ್ಸ್‌ಆಫೀಸ್‌ನಲ್ಲಿಯೂ ಭರ್ಜರಿ ಕೊಳ್ಳೆ ಹೊಡೆಯುತ್ತಿದೆ. ಈ ಮಧ್ಯೆ ತುಳುನಾಡ ಸಂಸ್ಕೃತಿ ಭೂತಕೋಲದ ಬಗ್ಗೆ ನಟ ಚೇತನ್‌ ಅಹಿಂಸಾ ಹೇಳಿದ ಮಾತು ಎಲ್ಲೆಡೆ ಪರ ವಿರೋಧಕ್ಕೆ ಕಾರಣವಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Rishab Shetty Love Story : ಶೆಟ್ರಿಗೆ ಸ್ಕೂಲಲ್ಲೇ ಲವ್‌ ಆಗಿತ್ತಂತೆ! ರಿಷಬ್‌ ಪ್ರೀತಿಸಿದ ಮೊದಲ ಹುಡುಗಿ ಇವರೇ ಅಂತೆ!!


ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷ, ಪುರಾತನತೆ, ತುಳುನಾಡ ಜನರ ಜೀವನ, ಸಂಸ್ಕೃತಿ ಜೊತೆಗೆ  ಭೂತಕೋಲದ ಬಗ್ಗೆ ನಿರ್ದೇಶಕ ರಿಷಬ್‌ ಈ ಸಿನಿಮಾದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ರಿಷಬ್‌ ಶೆಟ್ಟಿ ದೈವ ನರ್ತಕ ಪಾತ್ರದಲ್ಲಿ ಎಲ್ಲರಿಗೂ ಅಚ್ಚರಿಯಾಗುವಂತೆ ಅಭಿನಯಿಸಿದ್ದಾರೆ. ಕರಾವಳಿ ಭಾಗದ ದೈವಾರಾಧನೆ ಹೇಗಿರುತ್ತದೆ ಎಂಬುದನ್ನೂ ಮನಮುಟ್ಟುವಂತೆ ತೋರಿಸಿದ್ದಾರೆ. ಆದರೆ ನಟ ಚೇತನ್‌ ಅಹಿಂಸಾ ಈ ಬಗ್ಗೆಯೇ ಚಕಾರ ಎತ್ತಿದ್ದಾರೆ. 


ಕಾಂತಾರ ಸಿನಿಮಾ ಬಗ್ಗೆ ಹಾಗೂ ರಿಷಬ್‌ ಶೆಟ್ಟಿ ಬಗ್ಗೆ ಟ್ವೀಟ್‌ ಮಾಡಿರುವ ಚೇತನ್‌ ಅಹಿಂಸಾ, "ನಮ್ಮ ಕನ್ನಡ ಚಿತ್ರ ‘ಕಾಂತಾರ’ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ. ಭೂತಕೋಲ ಹಿಂದೂ ಸಂಸ್ಕೃತಿ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. ಆದರೆ ಅದು ಸುಳ್ಳು. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ" ಎಂದು ಬರೆದುಕೊಂಡಿದ್ದಾರೆ. 


 


ʼಕಾಂತಾರʼದ ಮೂಲಕ ಬಿಗ್‌ ಬಜೆಟ್‌ ಸಿನಿಮಾದವರಿಗೆ ಪಾಠ ಕಲಿಸಿದ್ದಕ್ಕೆ ಥ್ಯಾಂಕ್ಸ್‌ ರಿಷಬ್‌..!


ಕನ್ನಡದಲ್ಲಿ ಬಿಡುಗಡೆಯಾಗಿ ಜನಮನ ಸೆಳೆದು ಗಲ್ಲಾಪೆಟ್ಟಿಗೆಯಲ್ಲೂ ಅಬ್ಬರಿಸುತ್ತಿರುವ ಕಾಂತಾರದ ಕಂಪು ಬೇರೆ ಭಾಷೆಗೂ ಪಸರಿಸಿದೆ. ಕೇವಲ 10 ರಿಂದ 15 ಕೋಟಿ ಬಜೆಟ್‌ನ ಈ ಸಿನಿಮಾ ಬಿಡುಗಡೆಯಾದ 18 ದಿನಗಳಲ್ಲಿ ಬರೋಬ್ಬರಿ 150 ಕೋಟಿ ರೂ. ಗಳಿಕೆ ಮಾಡಿದೆ. ಭಾರತದಲ್ಲಿ 142 ಕೋಟಿ ರೂ. ಗಳಿಕೆ ಮಾಡಿದರೆ, ವಿದೇಶದಲ್ಲಿ 10.50 ಕೋಟಿ ರೂ. ಕಬಳಿಸುವಲ್ಲಿ ಯಶಸ್ವಿಯಾಗಿದೆ. ಕಾಂತಾರ ಸಿನಿಮಾ ಇದೀಗ ಇಡೀ ವಿಶ್ವವೇ ಮತ್ತೊಮ್ಮೆ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ