Kantara box office: ರಿಷಬ್ ಶೆಟ್ಟಿ ಅಭಿನಯದ ಕನ್ನಡ ಚಿತ್ರ ಸೆಪ್ಟೆಂಬರ್ 30 ರಂದು ಬಿಡುಗಡೆಯಾಯಿತು. ಬಿಡುಗಡೆಯಾದ ದಿನದಿಂದಲೇ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಕಾಂತಾರ ಬಾಕ್ಸ್ ಆಫೀಸ್‌ನಲ್ಲೂ ಮಿಂಚುತ್ತಿದೆ. ವಿಶ್ವಾದ್ಯಂತದ ಕಲೆಕ್ಷನ್‌ನಲ್ಲಿ ₹100 ಕೋಟಿ ಮಾರ್ಕ್‌ನ ಸಮೀಪದಲ್ಲಿದೆ. ಬಾಕ್ಸ್ ಆಫೀಸ್ ಯಶಸ್ಸಿನ ನಂತರ ಚಿತ್ರ ಹಿಂದಿ ಮತ್ತು ಇತರ ಭಾಷೆಗಳಿಗೆ ಡಬ್ ಆಗಿದೆ.
ಇದನ್ನೂ ಓದಿ : Kantara vs Godfather : ಬಾಕ್ಸಾಫೀಸ್‌ನಲ್ಲಿ ಕಾಂತಾರ vs ಗಾಡ್‌ಫಾದರ್!
ಉತ್ತಮ ಪ್ರದರ್ಶನವನ್ನು ಮುಂದುವರೆಸಿದ್ದು, ಕರ್ನಾಟಕದಲ್ಲಿ ₹70 ಕೋಟಿ ರೂಪಾಯಿಯನ್ನು ಗಳಿಸಿದೆ. ನಟ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಕರ್ನಾಟಕದಲ್ಲಿ, ಚಿತ್ರವು ₹70 ಕೋಟಿ ಗಳಿಕೆಯನ್ನು ದಾಟಿದೆ ಮತ್ತು ಈ ವಾರಾಂತ್ಯದ ವೇಳೆಗೆ ಜಾಗತಿಕವಾಗಿ ₹100 ಕೋಟಿ ಕ್ಲಬ್ ಅನ್ನು ಸೇರುವ ನಿರೀಕ್ಷೆಯಿದೆ. ಕರ್ನಾಟಕದ ಹೊರಗೂ ಚಿತ್ರಕ್ಕೆ ಅದ್ಭುತವಾದ ಪ್ರತಿಕ್ರಿಯೆ ಬರುತ್ತಿದೆ. ಅದರ ಡಬ್ಬಿಂಗ್ ಹಿಂದಿ ಆವೃತ್ತಿಯು ಶುಕ್ರವಾರ ಬಿಡುಗಡೆಯಾಗಿದೆ. ತಮಿಳು, ತೆಲುಗು ಭಾಷೆಗಳಲ್ಲಿಯೂ ಕಾಂತಾರ ಅಬ್ಬರಿಸುತ್ತಿದೆ.
ಕಾಂತಾರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ನೂರು ಕೋಟಿ ಕ್ಲಬ್ ಸೇರುವ ಹಂತದಲ್ಲಿದೆ. ಕರ್ನಾಟಕದಲ್ಲಿ ಈಗಾಗಲೇ ₹70 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಕರ್ನಾಟಕದಲ್ಲಿ, ಪ್ರತಿದಿನ ಹೆಚ್ಚಿನ ಪ್ರದರ್ಶನಗಳನ್ನು ಸೇರಿಸಲಾಗುತ್ತಿದೆ. ಟಿಕೆಟ್‌ಗೆ ಬೇಡಿಕೆ ಹೆಚ್ಚಾಗಿರುವುದರಿಂದ ಹೆಚ್ಚಿನ ಪ್ರದರ್ಶನಗಳನ್ನು ನಿಗದಿಪಡಿಸಲು ಥಿಯೇಟರ್ ಮಾಲೀಕರು ಕಷ್ಟಪಡುತ್ತಿದ್ದಾರೆ. ಚಿತ್ರದ ರಾಜ್ಯ ಗಳಿಕೆ ₹70 ಕೋಟಿ ಮತ್ತು ಜಾಗತಿಕವಾಗಿ ಇದು ₹100 ಕೋಟಿ ಮಾರ್ಕ್‌ನ ಸಮೀಪದಲ್ಲಿದೆ. ಇದು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಚಿತ್ರ ಬಿಡುಗಡೆಯಾಗಿರುವುದರಿಂದ ಈ ವಾರಾಂತ್ಯದಲ್ಲಿ ₹100 ಕೋಟಿ ದಾಟಬಹುದು ಎನ್ನುತ್ತಾರೆ ವಿಶ್ಲೇಷಕರು.
ಇದನ್ನೂ ಓದಿ : Nayanatara : 6 ವರ್ಷಗಳ ಹಿಂದೆಯೇ ಮದುವೆಯಾಗಿದ್ರು ನಯನತಾರಾ!?
ಜಾಗತಿಕವಾಗಿ ₹100 ಕೋಟಿ ಕ್ಲಬ್ ಸನಿಹದಲ್ಲಿರುವ ಕನ್ನಡ ಚಿತ್ರ ಕಾಂತಾರ ವಾರಾಂತ್ಯದಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆಯಾಗಿದೆ. ವರದಿಗಳ ಪ್ರಕಾರ, ಚಿತ್ರವು ಇತರ ಭಾಷೆಗಳಲ್ಲಿಯೂ ನಿರೀಕ್ಷೆಗಳನ್ನು ಮೀರಿ ಪ್ರದರ್ಶನ ಕಾಣುತ್ತಿದೆ. ತೆಲುಗು ರಾಜ್ಯಗಳಲ್ಲಿ ಚಿತ್ರ ಕೇವಲ ಎರಡೇ ದಿನಗಳಲ್ಲಿ ₹10 ಕೋಟಿ ಗಳಿಕೆ ಮಾಡಿದ್ದು, ಈಗಾಗಲೇ ಲಾಭದ ವಲಯಕ್ಕೆ ಪ್ರವೇಶಿಸಿದೆ. ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ.
ಮೂಲಗಳ ಪ್ರಕಾರ ಚಿತ್ರದ ತೆಲುಗು ಮತ್ತು ಹಿಂದಿ ಆವೃತ್ತಿಗಳು ನಿರೀಕ್ಷೆಗಳನ್ನು ಮೀರಿ ಪ್ರದರ್ಶನ ನೀಡಿವೆ. ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಕಾಂತಾರಾ ಹಿಂದಿ ಆವೃತ್ತಿಯು ಎರಡನೇ ದಿನದಲ್ಲಿ ಭಾರಿ ಬೆಳವಣಿಗೆಯನ್ನು ಕಂಡಿದೆ ಎಂದು ಬರೆದಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಎರಡು ದಿನಗಳಲ್ಲಿ ₹4.2 ಕೋಟಿ ಗಳಿಸಿದೆ. ತೆಲುಗು ರಾಜ್ಯಗಳಲ್ಲಿ, ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಪೋರ್ಟಲ್ ಆಂಧ್ರ ಬಾಕ್ಸ್ ಆಫೀಸ್ ಪ್ರಕಾರ, ಚಿತ್ರದ ತೆಲುಗು ಆವೃತ್ತಿಯು ಎರಡು ದಿನಗಳಲ್ಲಿ ಸುಮಾರು ₹10 ಕೋಟಿ ಗಳಿಸಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.