Chetan Ahimsa: ಬಿಜೆಪಿಗೆ ಕಿಚ್ಚ ಸುದೀಪ್ ಬೆಂಬಲ.. ಚೇತನ್ ಅಹಿಂಸಾ ಏನ್ ಹೇಳಿದ್ರು ಗೊತ್ತಾ?
Chetan Ahimsa tweet after Sudeep support for BJP: ಇಂದು ಸಿಎಂ ಬಸವರಾಜ ಬೊಮ್ಮಾಯಿ ಜತೆ ಸುದ್ದಿಗೋಷ್ಠಿ ನಡೆಸಿದ ನಟ ಸುದೀಪ್ ತಮ್ಮ ರಾಜಕೀಯ ನಿಲುವನ್ನು ತಿಳಿಸಿದರು. ಆ ಬಳಿಕ ನಟ ಚೇತನ್ ಅಹಿಂಸಾ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು : ಚೇತನ್ ಅಹಿಂಸಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಮುನ್ನೆಲೆಗೆ ಬಂದೇ ಬರುತ್ತಾರೆ. ಅದರಲ್ಲೂ ಅವರು ಮಾಡುವ ಟ್ವೀಟ್‌ಗಳು ಸೆನ್ಸೇಷನ್ ಹುಟ್ಟು ಹಾಕುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಚೇತನ್, ಇದೀಗ ಕಿಚ್ಚ ಸುದೀಪ್ ಬಿಜೆಪಿಗೆ ಬೆಂಬಲ ನೀಡಿದ್ದರ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ. ಸುದೀಪ್ ಬಿಜೆಪಿ ಸೇರಲಿದ್ದಾರೆ, ಚುನಾವಣೆಗೂ ಸ್ಪರ್ಧಿಸಲಿದ್ದಾರೆ ಎಂಬ ಅನೇಕ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದವು. ಇದೆಲ್ಲದಕ್ಕೂ ಇಂದು ಸುದೀಪ್ ಸ್ಪಷ್ಟನೆ ಕೊಟ್ಟಾಗಿದೆ. ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಆದರೆ ತನ್ನ ಆಪ್ತರಾದ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತೇನೆ, ಅವರು ಹೇಳಿದವರ ಪರ ಪ್ರಚಾರ ಮಾಡುವೆ ಎಂದು ತಿಳಿಸಿದ್ದಾರೆ.
"ಸಿನಿಮಾ ತಾರೆ ಬಿಜೆಪಿ ಸೇರ್ಪಡೆಯಾದರೆ ಉದಾರವಾದಿಗಳು ಅದನ್ನು ಮಾರಾಟ ಎನ್ನುವುದು ಏಕೆ? ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್/ಜೆಡಿಎಸ್/ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ ಮಾರಾಟವಾಗಿದ್ದಾರೆ. ನೆನಪಿಡಿ, ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಸಹ ನಮ್ಮ ಶತ್ರುಗಳೇ. ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕಿದೆ" ಎಂದು ಚೇತನ್ ಅಹಿಂಸಾ ಬರೆದಿದ್ದಾರೆ.
Prakash Raj : "ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ" - ನಟ ಪ್ರಕಾಶ್ ರಾಜ್
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಮುಂಬರುವ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಊಹಾಪೋಹಗಳನ್ನು ತಳ್ಳಿಹಾಕಿದರು. ಕೆಲವರಿಗೆ ನಾನು ಬೆಂಬಲಿಸಬೇಕೆಂದು ಬೊಮ್ಮಾಯಿ ಮಾಮ ಬಯಸುತ್ತಾರೆ. ನಾನು ಅವರನ್ನು ಬೆಂಬಲಿಸುತ್ತೇನೆ. ಅವರು ಬಯಸಿದ ಮತ್ತು ಅವರ ಅವಶ್ಯಕತೆಗಳಿಗೆ ತಕ್ಕಂತೆ ನಾನು ಹೋಗುತ್ತೇನೆ. ನಾನು ಎಲ್ಲರಿಗೂ ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದು ಸುದೀಪ್ ಹೇಳಿದರು.
ಸುದೀಪ್ ಬಿಜೆಪಿಗೆ ಬೆಂಬಲಿಸುವ ಮುನ್ನ ಪ್ರಕಾಶ್ ರಾಜ್ ಕಿಚ್ಚ ಸುದೀಪ್ ಅವರ ಬಿಜೆಪಿ ಸೇರ್ಪಡೆಯನ್ನು "ನಕಲಿ ಸುದ್ದಿ" ಎಂದು ಕರೆದಿದ್ದರು. ಕರ್ನಾಟಕದಲ್ಲಿ ಹತಾಶ, ಸೋತ ಬಿಜೆಪಿಯಿಂದ ಹರಡಿದ ಸುಳ್ಳು ಸುದ್ದಿ ಇದು ಎಂದು ನಾನು ಬಲವಾಗಿ ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದರು. ಇದೀಗ ನಟ ಚೇತನ್ ಅಹಿಂಸಾ ಪರೋಕ್ಷವಾಗಿ ಪ್ರಕಾಶ್ ರಾಜ್ ಅವರಿಗೆ ಪ್ರತ್ಯುತ್ತರ ನೀಡಿದಂತಿದೆ.
ಇದನ್ನೂ ಓದಿ : Kichcha Sudeep : ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ - ನಟ ಸುದೀಪ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.