Kichcha Sudeep : ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ - ನಟ ಸುದೀಪ್‌

Kiccha Sudeep press conference with CM Bommami : ಸಿಎಂ ಬಸವರಾಜ ಬೊಮ್ಮಾಯಿ ಅವರ ಜತೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ನಟ ಸುದೀಪ್‌, ನನ್ನ ಕಷ್ಟದಲ್ಲಿ ಜೊತೆಯಾದ ವ್ಯಕ್ತಿಗೆ ಬೆಂಬಲ ಕೊಡುತ್ತೇನೆ. ನನ್ನ ಬೆಂಬಲ ಪಕ್ಷಕ್ಕಲ್ಲ, ವ್ಯಕ್ತಿಗೆ ಎಂದು ಸ್ಪಷ್ಟನೆ ನೀಡಿದ್ದಾರೆ.   

Written by - Chetana Devarmani | Last Updated : Apr 5, 2023, 04:02 PM IST
  • ಸಿಎಂ ಬೊಮ್ಮಾಯಿ ಜತೆ ಸುದೀಪ್‌ ಸುದ್ದಿಗೋಷ್ಠಿ
  • ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ
  • ನಟ ಕಿಚ್ಚ ಸುದೀಪ್‌ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟನೆ
Kichcha Sudeep : ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ - ನಟ ಸುದೀಪ್‌  title=
Kiccha Sudeep

ಬೆಂಗಳೂರು : ಕರ್ನಾಟಕದಲ್ಲಿ ಸದ್ಯ ಎಲೆಕ್ಷನ್‌ ಬಿಸಿ ಜೋರಾಗಿದೆ. ಚುನಾವಣೆ ಅಖಾಡ ರಂಗೇರುತ್ತಿದೆ. ಶತಾಯಗತಾಯ ಅಧಿಕಾರದ ಗದ್ದುಗೆ ಏರಲೇಬೇಕೆಂದು ರಾಜಕೀಯ ಪಕ್ಷಗಳು ರಣತಂತ್ರ ಹೆಣೆಯುತ್ತಿವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಳೆದ ಕೆಲವು ದಿನಗಳಿಂದ ನಟ ಕಿಚ್ಚ ಸುದೀಪ್‌ ರಾಜಕೀಯ ಪ್ರವೇಶದ ಮಾತುಗಳು ಬಲು ಜೋರಾಗಿ ಹರಿದಾಡುತ್ತಿದ್ದವು. ಕೆಲವು ರಾಜಕೀಯ ನಾಯಕರು ಸುದೀಪ್‌ರನ್ನು ಭೇಟಿಯಾಗಿದ್ದೂ ಇದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳಿಂದ ಕಿಚ್ಚನಿಗೆ ಆಹ್ವಾನ ಬಂದಿತ್ತು ಎಂದು ಕೂಡ ಹೇಳಲಾಗಿತ್ತು. ಈ ವಿಚಾರವಾಗಿ ಎಲ್ಲರಲ್ಲೂ ತೀವ್ರ ಕುತೂಹಲ ಮೂಡಿತ್ತು. 

ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸುದೀಪ್ ಬೆಂಬಲ ಆ ಪಕ್ಷದ ಬಲವನ್ನು ಹೆಚ್ಚಿಸುವುದು ಪಕ್ಕಾ. ಇದನ್ನು ಅರಿತ ನಾಯಕರು ಕಿಚ್ಚನ ಮನೆಯ ಬಾಗಿಲು ತಟ್ಟಿದ್ದರೆಂಬ ಸುದ್ದಿ ಹರಿದಾಡಿತ್ತು. ಆದರೆ ಸುದೀಪ್​ ಅವರು ನೇರವಾಗಿ ರಾಜಕೀಯಕ್ಕೆ ಪ್ರವೇಶ ಮಾಡ್ತಾರೋ ಅಥವಾ ಕೇವಲ ಪಕ್ಷದ ಪರ ಪ್ರಚಾರ ರಾಯಭಾರಿ ಆಗಿರುತ್ತಾರೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಇಂದು ಈ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಿದೆ. ಖುದ್ದು ಸುದೀಪ್‌ ಅವರೇ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ. 

ಬೆಂಗಳೂರಿನ ಅಶೋಕ ಹೋಟೆಲ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ನಟ ಕಿಚ್ಚ ಸುದೀಪ್‌, ನಾನು ಚಿತ್ರರಂಗ ಪ್ರವೇಶಿಸುವಾಗ ನನಗೆ ಯಾರೂ ಗಾಡ್ ಫಾದರ್ ಅಂತ ಇರಲಿಲ್ಲ. ಆ ಸಮಯದಲ್ಲಿ ನನ್ನ ಪರ ಅವರು ಇದ್ದರು. ಅಂದು ನನ್ನ ಕಷ್ಟದಲ್ಲಿ ಜೊತೆಯಾದ ವ್ಯಕ್ತಿಯ ಪರ ಬೆಂಬಲ ಕೊಡೋಕೆ ಇಂದು ನಾನು ಇಲ್ಲಿ ಬಂದಿದ್ಧೇನೆ. ಬೊಮ್ಮಾಯಿ ಬೇರೆ ಪಕ್ಷದಲ್ಲಿ ಇದ್ದಿದ್ರು ಅವರ ಜೊತೆ ನಾನು‌ ನಿಲ್ತಿದ್ದೆ. ನಾನು ಅವರ ವಿಷಯದಲ್ಲಿ ಪಕ್ಷ ನೋಡುತ್ತಿಲ್ಲ ವ್ಯಕ್ತಿ ನೋಡ್ತೀನಿ ಎಂದು ಹೇಳಿದ್ದಾರೆ. 

 

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನನ್ನ ಬೆಂಬಲ. ನನ್ನ ಕಷ್ಟದ ದಿನಗಳಲ್ಲಿ ಜೊತೆಗೆ ನಿಂತಿದ್ದರು. ಚಿಕ್ಕವಯಸ್ಸಿನಿಂದ ಅವರನ್ನು ನೋಡಿದ್ದೀನಿ. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತವರು, ಆ ಸಾಲಿನಲ್ಲಿ ನನ್ನ ಮಾಮ ಸಿಎಂ ಬೊಮ್ಮಾಯಿ ಕೂಡ ಒಬ್ಬರು ಎಂದು ಸುದೀಪ್‌ ಹೇಳಿದ್ದಾರೆ. 

ನನ್ನ ಲೈಫ್ ನಲ್ಲಿ ಒಳ್ಳೆಯ ಜಾಗದಲ್ಲಿ ಬೊಮ್ಮಾಯಿ ಮಾಮ ಇದ್ದಾರೆ. ಅವರು ಹೇಳಿದಲ್ಲಿ, ಹೇಳಿದವರ ಪರ ನಾನು ಕೆಲಸ ಮಾಡೋಕೆ ನಾನು ರೆಡಿ. ನನ್ನ ಬೆಂಬಲ ಪಕ್ಷಕ್ಕಲ್ಲ ವ್ಯಕ್ತಿಗೆ. ಬೊಮ್ಮಾಯಿ ಅವರು ಬೇರೆ ಪಕ್ಷದಲ್ಲಿ ಇದ್ದಿದ್ದರೂ ಅವರಿಗೆ ನಾನು ಬೆಂಬಲ ಕೊಡ್ತಿದ್ದೆ. ನಾನು ಚುನಾವಣೆಗೆ ನಿಲ್ಲುವುದಿಲ್ಲ. ಅನಿವಾರ್ಯವಾಗಿ ನಾನು ಚುನಾವಣೆಗೆ‌ ನಿಲ್ಲಲ್ಲ. ನನಗೆ ತುಂಬಾ ಸಿನಿಮಾಗಳು ಇವೆ ಎಂದು ಸುದೀಪ್‌ ತಮ್ಮ ರಾಜಕೀಯ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News