Rahat Fateh Ali Khan Shocking Video: ಪಾಕಿಸ್ತಾನದ ಖ್ಯಾತ ಗಾಯಕ ರಾಹತ್ ಫತೇಹ್ ಅಲಿ ಖಾನ್ ಅವರನ್ನು ಪರಿಚಯಿಸುವ ಅಗತ್ಯವಿಲ್ಲ. ಅವರು ಪಾಕಿಸ್ತಾನದಿಂದ ಹಿಡಿದು ಬಾಲಿವುಡ್‌ನಲ್ಲಿ  ಅನೇಕ ಚಲನಚಿತ್ರಗಳಲ್ಲಿ ತಮ್ಮ ಧ್ವನಿ ಕೌಶಲ್ಯವನ್ನು ಮೆರೆದಿದ್ದಾರೆ. ತಮ್ಮ ಹಾಡುಗಳಿಗಾಗಿ ಆಗಾಗ್ಗೆ ಮುಖ್ಯಾಂಶಗಳಲ್ಲಿ ಇರುವ ರಾಹತ್ ಫತೆಹ್ ಅಲಿ ಖಾನ್ ಇಂದು ಬೇರೊಂದು ಅಮಾನವೀಯ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ, ಹೌದು, ಇತ್ತೀಚೆಗಷ್ಟೇ ರಾಹತ್ ಫತೆಹ್ ಅಲಿ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು, ಇದೀಗ ಅದು ಭಾರಿ ವೈರಲ್ ಆಗುತ್ತಿದೆ.  (Entertainment News In Kannada / Bollywood News In Kannada)


COMMERCIAL BREAK
SCROLL TO CONTINUE READING

ಈ ಹಿಂದೆ ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ಗಾಯಕ ಥಳಿಸುತ್ತಿರುವ ವ್ಯಕ್ತಿ ಅವರ ಮನೆಯ ಕೆಲಸಗಾರ ಎಂದು ಹೇಳಲಾಗಿತ್ತು, ಇದಾದ ಬಳಿಕ, ಗಾಯಕನ ಮತ್ತೊಂದು ವೀಡಿಯೊ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು ಈ ವೈರಲ್ ವೀಡಿಯೊದ ಬಗ್ಗೆ ಮಾತನಾಡಿದ್ದಾರೆ, ಅದರಲ್ಲಿ ಇನ್ನೂ ಇಬ್ಬರು ಜನರು ರಾಹತ್ ಜೊತೆಗೆ ಕಾಣಿಸಿಕೊಂಡಿದ್ದಾರೆ ಮತ್ತು ಅವರು ತಮ್ಮ ಮನೆ ಕೆಲಸಗಾರನಿಗೆ ಹೊಡೆಯುತ್ತಿಲ್ಲ ಥಳಿತಕ್ಕೆ ಒಳಗಾದ ವ್ಯಕ್ತಿ ತಮ್ಮ ಶಿಷ್ಯನಾಗಿದ್ದು, ಆತ ಸರಿಯಾಗಿ ಪಾಠ ಕಲಿಯುತ್ತಿರಲಿಲ್ಲ ಎಂದಿದ್ದಾರೆ. 


ರಾಹತ್ ಫತೇಹ್ ಅಲಿ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡ ಚಿನ್ಮಯಿ ಶ್ರೀಪದಾ
ಏತನ್ಮಧ್ಯೆ, ದಕ್ಷಿಣ ಚಿತ್ರರಂಗದ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪದಾ ಅವರು ಪಾಕಿಸ್ತಾನಿ ಗಾಯಕನನ್ನು ಟೀಕಿಸುತ್ತ ಬ್ಯಾಕ್ ಟು ಬ್ಯಾಕ್ ಎರಡು ಟ್ವೀಟ್ ಗಳನ್ನು ಮಾಡಿದ್ದು,  ಅವೂ ಕೂಡ ಇದೀಗ ಭಾರಿ ವೈರಲ್ ಆಗುತ್ತಿವೆ. , ಇದು ವೇಗವಾಗಿ ವೈರಲ್ ಆಗುತ್ತಿದೆ. ಚಿನ್ಮಯಿ ಮಾಡಿರುವ ಟ್ವೀಟ್ ಗೆ ಇದೀಗ ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ. ಈ ಕುರಿತು ತಮ್ಮ ಮೊದಲ ಟ್ವೀಟ್ ನಲ್ಲಿ ಬರೆದುಕೊಂಡ ಚಿನ್ಮಯಿ ಶ್ರೀಪದಾ, 'ಸಾರ್ವಜನಿಕರ ಮುಂದೆ ಸಿಹಿ ಮಾತುಗಳನ್ನು ಮಾತನಾಡುವ ಈ ಜನರು, ಇಂತಹ ಕೃತ್ಯವನ್ನು ಮಾಡಬಲ್ಲರು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಈ ಮೊದಲು ಕ್ಯಾಮೆರಾಗಳು ಅಸ್ತಿತ್ವದಲ್ಲಿದ್ದರೆ, ನಾವು ಶ್ರೇಷ್ಠರೆಂದು ಕರೆಯುವ ಹೆಚ್ಚಿನ ಜನರು ನಿಜವಾಗಿಯೂ ಹೇಗಿದ್ದಾರೆ ಎಂಬುದು ಬಹಿರಂಗವಾಗುತ್ತಿದ್ದವು' ಎಂದಿದ್ದಾರೆ. 


ಇದನ್ನೂ ಓದಿ-Viral Video: ಹೆಚ್ಚು ಗಾಳಿ ಬೇಕೆಂದು ಬಸ್ ಕಿಟಕಿಯಿಂದ ತಲೆ ಹೊರಕ್ಕೆ ಚಾಚಿದ ಪ್ರಯಾಣಿಕ, ನಂತರ ಆಗಿದ್ದೇನು ನೀವೇ ನೋಡಿ!


ಸ್ಪಷ್ಟನೆ ನೀಡಿದ ನಂತರವೂ ತರಾಟೆಗೆ ತೆಗೆದುಕೊಂಡ ಚಿನ್ಮಯಿ 
ಇದಲ್ಲದೆ, ರಾಹತ್ ಫತೇಹ್ ಅಲಿ ಖಾನ್ ಅವರ ಸ್ಪಷ್ಟೀಕರಣದ ವೀಡಿಯೊವನ್ನು ಹಂಚಿಕೊಂಡು ಬರೆದುಕೊಂಡ ಚಿನ್ಮಯಿ, 'ಇಲ್ಲಿನ ಉದ್ದೇಶವೆಂದರೆ ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದಾಗ, ಶಿಕ್ಷಕರು ಅವರ ಮೇಲೆ ಪ್ರೀತಿಯನ್ನು ಹರಿಸುತ್ತಾರೆ ಮತ್ತು ಅವರು ಯಾವುದೇ ತಪ್ಪು ಮಾಡಿದಾಗ, ಶಿಕ್ಷೆಯು ಅಷ್ಟೇ ಕಠಿಣವಾಗಿರುತ್ತದೆ. ಗುರು ತಮ್ಮ ಸ್ಥಾನದ ಕಾರಣ ರಕ್ಷಿಸಲ್ಪಡುತ್ತಾರೆ, ಅವರು ಯಾವ ನಂಬಿಕೆ/ಧರ್ಮವನ್ನು ಅನುಸರಿಸುತ್ತಾರೆ - ಅವರ ಎಲ್ಲಾ ಅಪರಾಧಗಳು, ಹಿಂಸೆ, ಭಾವನಾತ್ಮಕ ಕಿರುಕುಳದಿಂದ ಲೈಂಗಿಕ ಕಿರುಕುಳದವರೆಗೆ, ಅವರ 'ಕಲೆ', 'ಪ್ರತಿಭೆ' ಮತ್ತು ಮುಂತಾದವುಗಳಿಂದ ಕ್ಷಮಿಸಲಾಗುತ್ತದೆ. ಇದನ್ನು ನಿಲ್ಲಿಸುವ ಅವಶ್ಯಕತೆ ಇದೆ' ಎಂದು ಚಿನ್ಮಯಿ ಹೇಳಿದ್ದಾರೆ.


ಇದನ್ನೂ ಓದಿ-Viral Video: ವಿವಾಹದಲ್ಲಿ ದೊರೆತ ಉಡುಗೊರೆ ತೆರೆಯಲು ಹರಸಾಹಸ ಪಟ್ಟ ವಧು-ವರ, ಅಷ್ಟಕ್ಕೂ ಸಿಕ್ಕಿದ್ದೇನು? ತಿಳಿಯಲು ವಿಡಿಯೋ ನೋಡಿ

ವೈರಲ್ ಆಗುತ್ತಿರುವ ವಿಡಿಯೋ ಮತ್ತು ಟ್ವೀಟ್ ಗಳು ಇಲ್ಲಿವೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ