Viral Video: ವಿವಾಹದಲ್ಲಿ ದೊರೆತ ಉಡುಗೊರೆ ತೆರೆಯಲು ಹರಸಾಹಸ ಪಟ್ಟ ವಧು-ವರ, ಅಷ್ಟಕ್ಕೂ ಸಿಕ್ಕಿದ್ದೇನು? ತಿಳಿಯಲು ವಿಡಿಯೋ ನೋಡಿ

Viral Video: ಮದುವೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ವಿವಾಹ ಸಮಾರಂಭವೊಂದರಲ್ಲಿ ವಧು-ವರರಿಗೆ ಓಡುಗೊರೆಯೊಂದು ಸಿಕ್ಕಿದ್ದು, ಅದನ್ನು ತೆರೆದು ನೋಡಲು ಅವರು ಹರಸಾಹಸ ಪಟ್ಟಿದ್ದಾರೆ  ಮತ್ತು ಉಡುಗೊರೆಯನ್ನು ಸ್ವೀಕರಿಸಿದಾಗ ಅಳಬೇಕೋ ಅಥವಾ ನಗಬೇಕೋ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ. (Viral News In Kannada)  

Written by - Nitin Tabib | Last Updated : Jan 27, 2024, 09:04 PM IST
  • ವೀಡಿಯೊವನ್ನು ಜನವರಿ 12 ರಂದು ಹಂಚಿಕೊಳ್ಳಲಾಗಿದೆ,
  • ಅಂದಿನಿಂದ ಇದನ್ನು 63 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 2.7 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ಸ್ ಬಂದಿವೆ.
  • ಈ ವಿಡಿಯೋಗೆ ಜನರು ತಮಾಷೆಯ ಪ್ರತಿಕ್ರಿಯೆಗಳನ್ನು ಕೂಡ ನೀಡುತ್ತಿದ್ದಾರೆ.
Viral Video: ವಿವಾಹದಲ್ಲಿ ದೊರೆತ ಉಡುಗೊರೆ ತೆರೆಯಲು ಹರಸಾಹಸ ಪಟ್ಟ ವಧು-ವರ, ಅಷ್ಟಕ್ಕೂ ಸಿಕ್ಕಿದ್ದೇನು? ತಿಳಿಯಲು ವಿಡಿಯೋ ನೋಡಿ title=

ನವದೆಹಲಿ:  ಸಾಮಾನ್ಯವಾಗಿ ಮದುವೆಗಳಲ್ಲಿ ವಿಧಿವಿಧಾನಗಳ ಜೊತೆಗೆ ಮೋಜು ಮಸ್ತಿಯೂ ಸಾಕಷ್ಟು ಇರುತ್ತದೆ. ಅದು ವಧುವಿನ ಸಹೋದರಿಯರು-ಗೆಳತಿಯರು ಮತ್ತು ವರನ ಸ್ನೇಹಿತರು ಅಥವಾ ಸಹೋದರರಾಗಲಿ, ಅವರ ಸಿಹಿ ಮತ್ತು ಹುಳಿ ತಮಾಷೆ ಮದುವೆಗೆ ರಂಗು ನೀಡುತ್ತದೆ. ಇದೇ ವೇಳೆ, ಕೆಲವು ಸ್ನೇಹಿತರು ಕೆಲವೊಮ್ಮೆ ವಧು-ವರರು ಬೆವರಿಳಿಸುವಂತೆ ಮಾಡುವ ಕೆಲ ತಮಾಷೆಗಳನ್ನು ಕೂಡ ಮಾಡುತ್ತಾರೆ. ಅಂತಹುದೇ ಒಂದು ಮದುವೆಯಲ್ಲಿನ ತಮಾಷೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವಧು-ವರರಿಗೆ ಉಡುಗೊರೆಯೊಂದು ಸಿಕ್ಕಿದ್ದು ಅದನ್ನು ತೆರೆದು ನೋಡಲು ಅವರು ಸಾಕಷ್ಟು ಬೆವರು ಸುರಿಸಿದ್ದಾರೆ. ಬಳಿಕ ಅವರಿಗೆ ಅಳಬೇಕೋ ಅಥವಾ ನಗಬೇಕೋ ಎಂಬುದೇ ಅರ್ಥವಾಗುತ್ತಿಲ್ಲ. (Viral News In Kannada)

ಇದನ್ನೂ ಓದಿ-Viral Video: ಜೆಸಿಬಿ ಮೇಲೆ ಕುಳಿತು ಮದುವೆ ಮಂಟಪಕ್ಕೆ ವರನ ಎಂಟ್ರಿ, 'ಇದ್ಯಾವ ಪದ್ಧತಿ ಬ್ರೋ' ಎಂದ ನೆಟ್ಟಿಗರು

ಇದು ಉಡುಗೊರೆ ಅಥವಾ ಗೊಂದಲ?
ಅಂಕಿತಾ.ಗುರು ಎಂಬ ಬಳಕೆದಾರರು ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ವೇದಿಕೆಯ ಮೇಲೆ ಕುಳಿತ ವಧು-ವರರು ತುಂಬ ಉತ್ಸಾಹ ಹಾಗೂ ಚೈತನ್ಯದಿಂದ ಗಿಫ್ಟ್ ಬಾಕ್ಸ್ ತೆರೆಯುವಲ್ಲಿ ನಿರತರಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವರು ಪೆಟ್ಟಿಗೆಯನ್ನು ತೆರೆದಾಗ, ಒಳಗಿನಿಂದ ವೃತ್ತಪತ್ರಿಕೆಯಲ್ಲಿ ಸುತ್ತಿದ ಉಡುಗೊರೆ ಹೊರಬರುತ್ತದೆ. ಇದರಿಂದ ಕಾಗದದ ಅನೇಕ ಪದರಗಳು ಮತ್ತು ನಂತರ ಅನೇಕ ಇತರ ಪೆಟ್ಟಿಗೆಗಳು ಹೊರಬರುತ್ತವೆ. ಈ ಉಡುಗೊರೆಯನ್ನು ಬಿಚ್ಚಿ ನೋಡುವಾಗ ಇಬ್ಬರೂ ಬೆವರುತ್ತಿದ್ದಾರೆ. ಕೊನೆಗೆ ಪೇಪರ್ ಪ್ಯಾಕಿಂಗ್ ಒಳಗಿನಿಂದ ಬಂದ ಉಡುಗೊರೆಯನ್ನು ನೋಡಿ ಎಲ್ಲರೂ ನಿಬ್ಬೆರಗಾಗಿದ್ದಾರೆ. ಸಸ್ಪೆನ್ಸ್ ಬಹಿರಂಗಗೊಂಡಾಗ, ಒಳಗಿನಿಂದ ಎರಡು ಲಾಲಿಪಾಪ್‌ಗಳು ಹೊರಬರುತ್ತವೆ. ವೀಡಿಯೊದ ಕೊನೆಯಲ್ಲಿ, ವಧು ಮತ್ತು ವರರು ತಮ್ಮ ಕೈಗಳಲ್ಲಿ  ಈ ಲಾಲಿಪಾಪ್‌ಗಳನ್ನು ಹಿಡಿದು ತಿನ್ನುತ್ತಿರುವುದನ್ನು ನೀವು ನೋಡಬಹುದು.

ಇದನ್ನೂ ಓದಿ-Viral Video: ಬೈಕ್ ಮೇಲೆ ಮೈ ಕೊರೆಯೋ ಚಳಿಯಿಂದ ಪಾರಾಗಲು ಮಹಿಳೆ ಮಾಡಿದ ಈ ಉಪಾಯ...! ವಿಡಿಯೋ ನೋಡಿ

ವೀಡಿಯೊವನ್ನು ಜನವರಿ 12 ರಂದು ಹಂಚಿಕೊಳ್ಳಲಾಗಿದೆ, ಅಂದಿನಿಂದ ಇದನ್ನು 63 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 2.7 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ಸ್ ಬಂದಿವೆ. ಈ ವಿಡಿಯೋಗೆ ಜನರು ತಮಾಷೆಯ ಪ್ರತಿಕ್ರಿಯೆಗಳನ್ನು ಕೂಡ ನೀಡುತ್ತಿದ್ದಾರೆ.  ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, ಲಾಲಿಪಾಪ್ ಖರೀದಿಸಲು ಮಾಡಲಾದ ವೆಚ್ಚಕ್ಕಿಂತ ಅದರ ಪ್ಯಾಕಿಂಗ್ ಗೆ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ಬರೆದಿದ್ದಾರೆ. ಮತ್ತೊರ್ವ ಬಳಕೆದಾರ 'ಇಡೀ ಬೆಟ್ಟ ಅಗೆದು ನೋಡಿದಾಗ ಅದರಿಂದ ಇಲಿ ಹೊರಬಂತು' ಎಂದು ಬರೆಯಿದ್ದಾರೆ. ಮೂರನೇ ಬಳಕೆದಾರ ಒಂದು ವೇಳೆ ನೀವು ಪ್ಯಾಕಿಂಗ್ ತೆರೆಯುವ ಕೆಲಸ ರಾತ್ರಿ ಮಾಡಿದ್ದರೆ, ಗಿಫ್ಟ್ ನೋಡಲು ಬೆಳಗಾಗುತ್ತಿತ್ತು ಎಂದು ಬರೆದಿದ್ದಾರೆ. 

ವೈರಲ್ ವಿಡಿಯೋ ಇಲ್ಲಿದೆ ನೋಡಿ-

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News