Chiyaa Vikram : ನಟ ಎನಿಸಿಕೊಳ್ಳುವುದು ಸುಲಭದ ಮಾತಲ್ಲ, ಕೆಲವರು ತೆರೆ ಮೇಲೆ ಬಂದ ತಕ್ಷಣವೇ ತಮ್ಮನ್ನು ತಾವೇ ಸೂಪರ್‌ ಸ್ಟಾರ್‌ ಎಂದುಕೊಂಡು ಬಿಡುತ್ತಾರೆ. ನಟನೆ ಎಂಬುದು ಸಾಮಾನ್ಯವಲ್ಲ, ಪಾತ್ರಕ್ಕಾಗಿ ನಟ ತನ್ನನ್ನು ತಾನು ಬದಲಾಯಿಸಿಕೊಳ್ಳಬೇಗಾಗುತ್ತದೆ.


COMMERCIAL BREAK
SCROLL TO CONTINUE READING

ಅಂದಾಗ ಮಾತ್ರ ನಟ ಅಭಿಮಾನಿಗಳ ಮನಸ್ಸನ್ನು ಗೆಲ್ಲಲು ಸಾದ್ಯವಾಗುತ್ತದೆ. ಈ ಮಾತಿಗೆ ಉತ್ತಮ ನಿದರ್ಶನವೆಂದರೇ ನಟನೆಯಲ್ಲಿ ಪರಕಾಯ ಪ್ರವೇಶಮಾಡಿ ನಟಿಸಿ ತಮಿಳು ಚಿತ್ರರಂಗದಲ್ಲಿ ಸೈ ಎನಿಸಿಕೊಂಡ ಮಾಸ್‌ ನಟ ವಿಕ್ರಮ್‌ ಅಲಿಯಾಸ್‌ ಚಿಯಾ ವಿಕ್ರಮ್.‌


ಚಿಯಾನ್‌ ವಿಕ್ರಮ್‌ ಬರೀ ನಟನಲ್ಲ, ಗಾಯಕನೂ ಹೌದು. ಖ್ಯಾತ ಭಾರತೀಯ ನಟರಾದಂತಹ ಇವರು, ತಮಿಳು ಚಲಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡ ಜಾನ್‌ ವೊಕ್ಟರ್‌ ಅಲಿಯಾಸ್‌ ವಿನೋದ್‌ ರಾಜ್‌ ಹಾಗೂ ರಾಜೇಶ್ವರಿ ದಂಪತಿಗಳ ಮಗನಾಗಿ ತಮಿಳುನಾಡಿನಲ್ಲಿ ಜನಿಸಿದರು. ಅವರ ಕಷ್ಟದ ದಿನಗಳು ಯಾವರೀತಿ ಇದ್ದವು ಅನ್ನೋದರ ಸಣ್ಣ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ-SCAM (1770) ಚಿತ್ರದ ಟೀಸರ್ ರಿಲೀಸ್‌ ಮಾಡಿದ ಹಿರಿಯ ನಟ ದತ್ತಣ್ಣ


ಕಠಿಣ ಹಾದಿಯನ್ನು ಮೆಟ್ಟಿ ನಿಂತ ಧೀರ ನಟ 
ವಿಕ್ರಮ್​ಗೂ ಕೂಡ ಚಿಕ್ಕ ವಯಸ್ಸಿನಿಂದಲೂ ನಟನೆಯೆಂದರೆ ಎಲ್ಲಿಲ್ಲದೆ ಪ್ರೀತಿ.  ತಂದೆ ಎಷ್ಟೇ ಬೇಡ ಅಂದರೂ ನಟ ವಿಕ್ರಮ್ ಕೇಳುತ್ತಿರಲಿಲ್ಲ. ಕಾಲೇಜು ಓದುತ್ತಿರುವಾಗಲೇ ಸಾಕಷ್ಟು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಆ ಒಂದು ಘಟನೆ ನಡೆದಿದ್ದು, ವಿಕ್ರಮ್​ ಅವರ ಬದುಕಲ್ಲಿ ಬಿರುಗಾಳಿ ಎಬ್ಬಿಸಿತ್ತು. 


ವಿಕ್ರಮ್‌ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ ಭೀಕರ ಅಪಘಾತ 
ನಟ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ, MBA ಮುಗಿಸಿದರೂ ಕೂಡ ಅವರ ಮನಸ್ಸು ಬೆಳ್ಳಿ ಪರದೆಯ ಕಡೆಗೆ ಇತ್ತು. ಆದರೆ ಅವರ ದುರಾದೃಷ್ಟವು ಅವರಿಗಿಂತ ಮುಂದೆ ಇತ್ತು. ಅದೊಂದು ದಿನ ನಾಟಕ ಮುಗಿಸಿ ಬೈಕ್​ನಲ್ಲಿ ರಾತ್ರಿ ಮನೆಗೆ ಹೋಗುವಾಗ, ಲಾರಿಯೊಂದು ಬಂದು ಡಿಕ್ಕಿ ಹೊಡೆದು 100ಕ್ಕೂ ಹೆಚ್ಚು ಕಡೆಗಳಲ್ಲಿ ಗಾಯ ಮತ್ತು ಕಾಲಿನ ಮೂಳೆ ಪುಡಿಯಾಗಿತ್ತು. ವೈದ್ಯರು ಕಾಲನ್ನೇ ಕತ್ತರಿಸಬೇಕು ಎಂದು ಹೇಳಿದ್ದರು. 


ಇದನ್ನೂ ಓದಿ-ಮಾವು ಬೇವು ಪೋಷಿಸಿದ ನೀನಾಸಂ ಸಂದೀಪ್


ಮೂರು ವರ್ಷ ಶವದಂತೆ ಮಲಗಿದ್ದ ನಟ 
ವಿಕ್ರಮ್​ ದೇಹದಲ್ಲಿ 23 ಶಸ್ತ್ರಚಿಕಿತ್ಸೆ ನಡೆದಿತ್ತು. ಈ ನೋವನ್ನು ಇವರು ಹೇಗೆ ತಡೆದುಕೊಂಡರು ಎಂದು ಊಹಿಸಿಕೊಳ್ಳುವುದು ಕಷ್ಟ. ಮೂರು ವರ್ಷ ಆಸ್ಪತ್ರೆಯ ಹಾಸಿಗೆಯಲ್ಲಿ ಶವದ ಹಾಗೆ ಬಿದ್ದುಕೊಂಡಿದ್ದರು. ಆದರೆ ಇದೀಗ ನಟ ಎಲ್ಲವನ್ನು ಮೀರಿ ಬೆಳೆದು ನಿಂತಿದ್ದಾರೆ. 


ನಟ ವಿಕ್ರಮ್‌ ತನ್ನ ಸ್ಥಿತಿ ಆರೀತಿಯಾದರೂ ಛಲ ಬಿಡದೇ ತಾನು ಕಂಡಿರುವ ಕನಸ್ಸನ್ನು ನನಸುಮಾಡಲು ಜೀವನವನ್ನೇ ಚಾಲೆಂಜ್‌ ಆಗಿ ತೆಗೆದುಕೊಂಡರು. ನಂತರ ತಮ್ಮ ಕಾಲನ್ನು ಸರಿಪಡಿಸಿಕೊಂಡು ದುರದೃಷ್ಟವೇ ಸೋಲುವಂತೆ ಮಾಡಿದ್ದರು. 1999ರಲ್ಲಿ ವಿಕ್ರಮ್​ ಸೇತು ಎಂಬ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ರಿಲೀಸ್ ಆಗಿ ಸೂಪರ್​ ಹಿಟ್​ ಎನಿಸಿಕೊಂಡಿತ್ತು. ಅಲ್ಲಿಂದ ವಿಕ್ರಮ್​ ಯಶಸ್ಸಿನ ಮೆಟ್ಟಿಲನ್ನೇ ಏರತೊಡಗಿದರು.


ದುರಾದೃಷ್ಟವನ್ನೇ ಸೋಲಿಸಿನಿಂತ ಕಾಲಿವುಡ್‌ನ ಖ್ಯಾತ ನಟ ಸಾಕಷ್ಟು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಡಿದ್ದಾರೆ. ಅವುಗಳಲ್ಲಿ 7 ಫಿಲ್ಂ ಫೇರ್‌ ಪ್ರಶಸ್ತಿ, ರಾಷ್ಟ್ರೀಯ ಫಿಲಂ ಪ್ರಶಸ್ತಿ ಹಾಗೂ ತಮಿಳುನಾಡು ರಾಜ್ಯ ಫಿಲಂ ಪ್ರಶಸ್ತಿ ಸೇರಿದಂತೆ ಇನ್ನು ಹಲವಾರು ಪ್ರಶಸ್ತಿ ಮತ್ತು ಸನ್ಮಾನಗಳನ್ನು ತಮ್ಮದಾಗಿಸಿಕೊಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.