ಮಾವು ಬೇವು ಪೋಷಿಸಿದ ನೀನಾಸಂ ಸಂದೀಪ್

ಕಳೆದೊಂದು ವರ್ಷದಿಂದ ಈ ಮಾವು-ಬೇವು ಚಿತ್ರಕ್ಕಾಗಿ ನಿರ್ದೇಶಕ ಸುಚೇಂದ್ರ ಪ್ರಸಾದ್, ನಿರ್ಮಾಪಕ ರಾಜಶೇಖರ್ ಶ್ರಮಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಕಲಾವಿದರು ಮಾವು-ಬೇವನ್ನ ಪೋಷಿಸಿದ್ದಾರೆ. ಅದ್ರಲ್ಲಿ ಪ್ರಮುಖವಾಗಿ ನೀನಾಸಂ ಸಂದೀಪ್ ಕೂಡ ಒಬ್ಬರು. 

Written by - YASHODHA POOJARI | Edited by - Yashaswini V | Last Updated : Apr 17, 2023, 11:00 AM IST
  • ಮಾವು ಬೇವು ಚಿತ್ರದಲ್ಲಿ ನಾನು ಸಿದ್ದೇಶನ ಪಾತ್ರ ಮಾಡಿದ್ದೇನೆ.
  • ಈ ಸಿದ್ದೇಶ ನಿಮ್ಮೊಳಗೆ ಅಥವಾ ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಕಾಣ್ತಾನೆ.
  • ಜೀವನ ಎಂದರೆ ಬರೀ ಸಿಹಿಯಲ್ಲ, ಕಹಿಯ ಮಿಶ್ರಣವೂ ಇರುತ್ತೆ. ಅದನ್ನು ಸ್ವೀಕರಿಸಬೇಕು, ಸಂಬಂಧಗಳಿಂದ ಬೆಲೆಕೊಟ್ಟು ಬದುಕಬೇಕು ಅನ್ನೋದನ್ನ ತುಂಬಾ ಅಚ್ಚುಕಟ್ಟಾಗಿ ನಮ್ಮ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.
ಮಾವು ಬೇವು ಪೋಷಿಸಿದ ನೀನಾಸಂ ಸಂದೀಪ್  title=

ಯುಗಾದಿ ಹಬ್ಬದಂದು ಬೇವು ಬೆಲ್ಲ ಸವಿದವರು, ನಮಗೆ ಬೇವು ಬೇಡ ಬರೀ ಬೆಲ್ಲ ಮಾತ್ರ ಇರಲೆಂದು ಬಾಯಿ ಸಿಹಿ ಮಾಡಿಕೊಂಡವರು. ಬರೀ ಬೇವನ್ನೇ ತಿಂದು ಬದುಕುತ್ತಿರುವವರು ಸೇರಿದಂತೆ ಸಮಸ್ತರು ನೋಡಲೇಬೇಕಾಗಿರೋ ಚಿತ್ರ ಮಾವು-ಬೇವು. ಕಳೆದೊಂದು ವರ್ಷದಿಂದ ಈ ಮಾವು-ಬೇವು ಚಿತ್ರಕ್ಕಾಗಿ ನಿರ್ದೇಶಕ ಸುಚೇಂದ್ರ ಪ್ರಸಾದ್, ನಿರ್ಮಾಪಕ ರಾಜಶೇಖರ್ ಶ್ರಮಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಕಲಾವಿದರು ಮಾವು-ಬೇವನ್ನ ಪೋಷಿಸಿದ್ದಾರೆ. ಅದ್ರಲ್ಲಿ ಪ್ರಮುಖವಾಗಿ ನೀನಾಸಂ ಸಂದೀಪ್ ಕೂಡ ಒಬ್ಬರು. 

ನೀನಾಸಂ ಸಂದೀಪ್ ಅಂದರೆ ಎಲ್ಲರಿಗೂ ಗೊತ್ತಾಗಲ್ಲ. ಅದೇ ಉಗ್ರಂ ಸಂದೀಪ್ ಅಂದರೆ ಥಟ್ ಅಂತ ಕಣ್ಣಮುಂದೆ ಬರುತ್ತಾರೆ. ಕಲಾವಿದನಾಗಬೇಕು ಅಂತ ಕನಸೊತ್ತು ಕಳೆದ 22 ವರ್ಷಗಳ ಹಿಂದೆ ಹೊಸಪೇಟೆಯಿಂದ ಬೆಂಗಳೂರಿಗೆ ಬಂದಿಳಿದ ಸಂದೀಪ್, ಮಾಯಲೋಕದಲ್ಲಿ ಸಿಕ್ಕಾಪಟ್ಟೆ ಸೈಕಲ್ ಹೊಡೆದಿದ್ದಾರೆ. ನೀನಾಸಂನಲ್ಲಿ ತರಭೇತಿ ಪಡೆದು ಬಿದಿಗೆ ಚಂದ್ರಮ್ಮ ಧಾರವಾಹಿ ಮೂಲಕ ಕನ್ನಡ ಕಿರುತೆರೆ ಪ್ರವೇಶಿಸಿ ಸರಿಸುಮಾರು 100 ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. ಬಾಯ್ ಫ್ರೆಂಡ್ ಹೆಸರಿನ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟು ಸೈನೆಡ್, ಅಂಬಾರಿ, ರಾಜಧಾನಿ, ಉಗ್ರಂ, ಯಾರೇ ಕೂಗಾಡಲಿ ಸೇರಿದಂತೆ ಒಟ್ಟು 25 ಸಿನಿಮಾ ಮಾಡಿದ್ದಾರೆ. ಈಗ ಮಾವು ಬೇವು ಚಿತ್ರದಲ್ಲಿ ತಮ್ಮಿಷ್ಟದ ಪಾತ್ರ ಪೋಷಿಸಿರೋ ಖುಷಿಯಲ್ಲಿದ್ದಾರೆ. 

ಇದನ್ನೂ ಓದಿ- Salaar movie : ʼಸಲಾರ್‌ʼ ಸಿಕ್ರೇಟ್‌ ರಿವೀಲ್‌..! ʼಪಾರ್ಟ್‌ 2ʼ ಕೂಡ ಬರುತ್ತೆ ಎಂದ ಡೈನಾಮಿಕ್‌ ಸ್ಟಾರ್‌

ರಂಗಭೂಮಿ ಕಲಾವಿದನಾಗಿರೋ ಸಂದೀಪ್, ಭಾವನೆಗಳಿಗೆ ಒತ್ತುಕೊಟ್ಟು ಅಭಿನಯಿಸುವಂತಹ ಪಾತ್ರಕ್ಕಾಗಿ ಹಂಬಲಿಸುತ್ತಿದ್ದರು. ಚೀರಾಟ, ಹಾರಾಟ ಇಲ್ಲದೇ, ಡೈಲಾಗ್‍ಗಳ ದರ್ಬಾರ್ ಇಲ್ಲದೇ ತಮ್ಮ ಮನಸ್ಸಿನ ಭಾವನೆಗಳನ್ನ ಮುಖಭಾವದ ಮೂಲಕ ವ್ಯಕ್ತಪಡಿಸೋಕೆ, ಅಭಿನಯವನ್ನ ಕಣ್ಣಲ್ಲೇ ತೋರಿಸೋದಕ್ಕೆ ಕಾಯ್ತಾಯಿದ್ದರು. ಕೊನೆಗೂ ಸಂದೀಪ್ ಬಯಸಿದ್ದ ಪಾತ್ರ ಮಾವು-ಬೇವು ಚಿತ್ರದಲ್ಲಿ ಸಿಕ್ಕೇಬಿಡ್ತು. ನಿರ್ದೇಶಕ ಸುಚೇಂದ್ರ ಪ್ರಸಾದ್ ಸೃಷ್ಟಿಸಿದ್ದ ಪಾತ್ರಕ್ಕೆ ಸಂದೀಪ್ ಜೀವತುಂಬೇಬಿಟ್ಟರು. 

ಮಾವು ಬೇವು ಚಿತ್ರದಲ್ಲಿ ನಾನು ಸಿದ್ದೇಶನ ಪಾತ್ರ ಮಾಡಿದ್ದೇನೆ. ಈ ಸಿದ್ದೇಶ ನಿಮ್ಮೊಳಗೆ ಅಥವಾ ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಕಾಣ್ತಾನೆ. ಜೀವನ ಎಂದರೆ ಬರೀ ಸಿಹಿಯಲ್ಲ, ಕಹಿಯ ಮಿಶ್ರಣವೂ ಇರುತ್ತೆ. ಅದನ್ನು ಸ್ವೀಕರಿಸಬೇಕು, ಸಂಬಂಧಗಳಿಂದ ಬೆಲೆಕೊಟ್ಟು ಬದುಕಬೇಕು ಅನ್ನೋದನ್ನ ತುಂಬಾ ಅಚ್ಚುಕಟ್ಟಾಗಿ ನಮ್ಮ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. 40 ವರ್ಷದ ಹಿಂದಿನ ಮಾವು-ಬೇವು ಅನ್ನೋ ಹಿಟ್ ಆಲ್ಬಂಗೆ ಹೊಂದುವಂತೆ, ಈಗಿನ ಜನರ ಮೆಂಟಾಲಿಟಿಗೆ ತಕ್ಕಂತೆ ಸುಂದರವಾದ ಕಥೆ ಎಣೆದಿದ್ದಾರೆ. ಥ್ರೂ ಔಟ್ ದಿ ಸಿನಿಮಾ ನಾನು ಕಾಣಿಸಿಕೊಂಡಿದ್ದೇನೆ. ಬ್ರೀತ್ ಇನ್ ಇಂದ ಬ್ರೀತ್ ಔಟ್ ವರೆಗೆ ಹಿಂಗೇ ಬರಬೇಕು ಸೀನ್ ಅಂತ ಸುಚೇಂದ್ರ ಪ್ರಸಾದ್ ಸರ್ ನನ್ನಿಂದ ಕೆಲಸ ತೆಗೆಸಿದ್ದಾರೆ. ಅವರೊಂದು ಅದ್ಭುತ, ಅವರೊಂದು ಗ್ರಂಥ ಭಂಡಾರ ಅಂತ ಹೆಮ್ಮೆಯಿಂದ ಹೇಳಿಕೊಳ್ತಾರೆ ನಟ ಸಂದೀಪ್. 

ಇದನ್ನೂ ಓದಿ- "ಪುಡ್‌ ಡೆಲಿವರಿ ಬಾಯ್‌ ಜೊತೆ ಅಮಾನವೀಯವಾಗಿ ನಡೆದುಕೊಂಡ ಹೃತಿಕ್ ರೋಷನ್ ಬಾಡಿಗಾರ್ಡ್‌"

ಗುರುಗಳಾದ ಸುಚೇಂದ್ರ ಪ್ರಸಾದ್ ಅವರಿಂದ ತುಂಬಾ ಕಲಿತುಕೊಂಡಿದ್ದೇನೆ. ಮುಂದಿನ ಚಿತ್ರಗಳಲ್ಲಿ ಪರ್ಫಾಮೆನ್ಸ್ ವೈಸ್ ಯಾವ್ ರೀತಿ ಬೆಟರ್ ಮಾಡ್ಬೋದು ಅನ್ನೋದನ್ನು ಮಾವು-ಬೇವು ಚಿತ್ರದಿಂದ ಅರಿತುಕೊಂಡಿದ್ದೇನೆ. ಇಷ್ಟು ದಿನ ಮಾಡಿರೋ ಎಲ್ಲಾ ಪಾತ್ರಗಳಿಂದ ತೃಪ್ತಿ ಸಿಕ್ಕಿದೆ. ಅವಕಾಶಗಳು ಸಿಕ್ಕಿಲ್ಲ, ನಮ್ಮವರು ನಮ್ಮನ್ನ ಸರಿಯಾಗಿ ಬಳಸಿಕೊಳ್ತಿಲ್ಲ ಅಂತ ದೂಷಿಸೋದಕ್ಕಿಂತ ನಮ್ಮ ಟೈಮ್ ಇನ್ನೂ  ಬಂದಿಲ್ಲ ಅಂತ ಕಾಯೋದು ಬೆಸ್ಟ್ . ಒಳ್ಳೆ ಕಲಾವಿದ ಆಗಬೇಕು ಅಂತ ಬಂದವನು. ಯಾವುದೇ ಪಾತ್ರ ಕೊಟ್ಟರೂ ಅದನ್ನ ಜೀವಿಸೋ ಶಕ್ತಿ ಆ ಭಗವಂತ ಕೊಡಲಿ ಸಾಕು ಎನ್ನುವ ನಟ ಸಂದೀಪ್, ಕನ್ನಡದ ಸೊಗಡು ಇರುವ, ಕನ್ನಡಿಗರಿಗಾಗಿಯೇ ನಿರ್ಮಾಣಗೊಂಡಿರೋ ಮಾವು ಬೇವು ಸಿನಿಮಾ ಗೆಲ್ಲಬೇಕು. ಕಮರ್ಷಿಯಲ್ ಸಿನಿಮಾಗಳ ಅಬ್ಬರ ಆರ್ಭಟದ ನಡುವೆ ಕಲಾತ್ಮಕ ಚಿತ್ರಕ್ಕೆ ಬಂಡವಾಳ ಸುರಿದಿರೋ ನಿರ್ಮಾಪಕ ರಾಜಶೇಖರ್ ಅವರಿಗೆ ಒಳ್ಳೆದಾಗಬೇಕು ಅಂತ ಹೇಳಿಕೊಂಡರು. 

ಕಂಟೆಂಟ್ ಒರಿಯೆಂಟೆಡ್ ಸಿನಿಮಾಗಳನ್ನ ನಮ್ಮ ಪ್ರೇಕ್ಷಕರು ಯಾವತ್ತೂ ಕೈಬಿಟ್ಟಿಲ್ಲ. ಹೀಗಾಗಿ ನಮ್ಮ ಚಿತ್ರವನ್ನು ಕೈಬಿಡೋದಿಲ್ಲ ಎನ್ನುವ ಆತ್ಮವಿಶ್ವಾಸ ಹೊರಹಾಕಿದರು. ಅಂದ್ಹಾಗೇ ಮಾವು ಬೇವು ಇದೇ ಏಪ್ರಿಲ್ 21ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಎಲ್ಲರು ಫಸ್ಟ್ ಡೇ ಫಸ್ಟ್ ಶೋ ಥಿಯೇಟರ್ ಗೆ ಹೋಗಿ ಸಿನಿಮಾ ನೋಡೋಣ. ಮಾವು ಬೇವು ಚಿತ್ರತಂಡಕ್ಕೆ ಶುಭ ಹಾರೈಸುತ್ತಾ ಕನ್ನಡ ಸಿನಿಮಾಗಳನ್ನು ಬೆಳೆಸೋಣ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News