ಇಂದು ಬಹು ಬೇಡಿಕೆಯ ನಟನಾಗಿ, ಬಾಕ್ಸ್‌ ಆಫೀಸ್‌ ಸುಲ್ತಾನ ಆಗಿ ಬೆಳೆದು ನಿಂತಿರುವ ದರ್ಶನ್‌ ಪ್ರಾರಂಬದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ, ಶ್ರಮಿಸಿದ್ದಾರೆ. ಖ್ಯಾತ ಕಲಾವಿದನ ಮಗನಾಗಿದ್ದರೂ ಬಣ್ಣದ ಲೋಕ ಅವಾರನ್ನು ರೆಡ್‌ ಕಾರ್ಪೆಟ್‌ ಹಾಕಿ ಸ್ವಾಗತಮಾಡಿಲ್ಲ. ಸಾಮಾನ್ಯ ಲೈಟ್‌ ಬಾಯ್‌ ಆಗಿ ಕೆಲಸ ಪ್ರಾರಂಭಿಸಿದ ದರ್ಶನ್‌ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಾ ಇಂದು ಸ್ಟಾರ್‌ ಕಲಾವಿದನಾಗಿ ಬೆಳೆದು ನಿಂತಿದ್ದಾರೆ. ದರ್ಶನ್‌ ತೂಗುದೀಪ ನಟನೆಯ ಮೊದಲ ಸಿನಿಮಾ ಮಹಾಭಾರತ ರೀಲಿಸ್‌ ಆಗಿದ್ದು 1997 ಆಗಸ್ಟ್‌  1 ರಂದು ಆಗಿತ್ತು ಈ ಮೂಲಕ ದರ್ಶನ್‌ ಸಿನಿರಂಗದಲ್ಲಿ 25ವರ್ಷವನ್ನು ಪೊರೈಸಿದ್ದಾರೆ. 


COMMERCIAL BREAK
SCROLL TO CONTINUE READING

ಲೈಟ್‌ ಬಾಯ್‌ ಆಗಿ ವೃತ್ತಿ ಜೀವನ ಆರಂಭ
ಲೈಟ್‌ ಬಾಯ್‌ ಆಗಿ ಕೆಲಸ ಪ್ರಾರಂಭ ಮಾಡಿದ್ದ ದರ್ಶನ್‌ ಬಳಿಕ ಕಿರುತೆತರರೆಯಲ್ಲಿ. ಬಣ್ಣ ಹಚ್ಚ್ಲು ಪ್ರಾರಂಭಿಸಿದರು. ಬಳಿಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಎಸ್.‌ ನಾರಾಯಣ ಅವರ ಮಹಾಭರತ ಸಿನಿಮಾದ ಮೂಲಕ ದೊಡ್ಡ ಪರದೆ ಮೇಲೆ ವಿಲನ್‌ ಪಾತ್ರದ ಮೂಲಕ ಸ್ಯಾಂಡಲ್ವುಡ್‌ ಗೆ ಎಂಟ್ರಿ ಕೊಟ್ಟರು. ಆನಂತರ ಹಲವಾರು ಸಣ್ಣ ಪುಟ್ಟ ಪಾತ್ರಗಳ ಮೂಲಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ದರ್ಶನ್‌ ಮೆಜೆಸ್ಟಿಕ್‌ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಒಂದು ಲಕ್ಷ ಸಂಭಾವಣೆ ಪಡೆಯಲು 9 ಸಿನಿಮಾಗಳನ್ನು ಮಾಡಿದ್ದೇನೆ  ಹಾಗೇ ನಾನು ಕೊನೆಯವರೆಗೂ ಕನ್ನಡ ಚಿತ್ರರಂಗದಲ್ಲಿಯೇ ಇರಲು ಇಷ್ಟಪಡುತ್ತೇನೆ ಎಂದು ದರ್ಶನ್‌ 


ದರ್ಶನ್‌ ಕೈ ಹಿಡಿದ ಮೆಜೆಸ್ಟಿಕ್‌, ಕರಿಯಾ
ಮೆಜೆಸ್ಟಿಕ್‌..... 2002 ರಲ್ಲಿ ತೆರೆಗೆ ಬಂದ ಸಿನಿಮಾ ದರ್ಶನ್‌ ಸಿನಿ ಪಯಣವನ್ನೇ ಬದಲಾಯಿಸಿತು. ಶಿವಣ್ಣನ ಓಂ ಸಿನಿಮಾದ ನಂತರ ಮತ್ತಂದು ಲಾಂಗ್‌ ಹಿಡಿದ ಸಿನಿಮಾ ಅಂದರೇ ಅದು ಮೆಜೆಸ್ಟಿಕ್.‌
ಲಾಂಗ್‌ ಹಿಡಿದು ಅಬ್ಬರಿಸಿದ್ದ ದರ್ಶನ್‌ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಕರಿಯಾ .... ಪ್ರೇಮ್‌ ನಿರ್ದೇಶನದಲ್ಲಿ ಮೂಡಿ ಬಂದ ಕರಿಯಾ ಸಿನಿಮಾ ದರ್ಶನ್‌ ಸಿನಿ ರಂಗದ ಜರ್ನಿಯಲ್ಲಿ ಮತ್ತೋಂದು ದೊಡ್ಡ ಸಕ್ಸಸ್‌ ತಂದು ಕೊಟ್ಟಿತು. ದರ್ಶನ್‌ ಜೀವನದಲ್ಲಿ ಅತೀ ಹೆಚ್ಚು ಬಾರಿ ರಿ-ರೀಲಿಸ್‌ ಆದ ಸಿನಿಮಾ ಅಂದರೇ ಅದು ಕರಿಯಾ ಸಿನಿಮಾ. ಸಾಕಷ್ಟು ಏಳು ಬೀಳಿನ ನಡುವೆ ದರ್ಶನ್‌ ಇಂದು ಸ್ಟಾರ್‌ ನಟನಾಗಿ ಬೆಳೆದು ನಿಂತಿದ್ದಾರೆ. 


ಲಾಲಿಹಾಡಿನ ಸವಿನೆನಪು 
ಹಿರಿಯ ಕಲಾವದೆ ಉಮಾಶ್ರಿ ಅವರ ಜೊತೆ ಮಗನಾಗಿ ದರ್ಶನ್‌ ಲಾಲಿಹಾಡು ಸಿನಿಮಾದಲ್ಲಿ ಕುರುಡನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು, ಈ ಚಿತ್ರದಲ್ಲಿನ ಅವರ ನಟನೆಗೆ ಬೆರಗಾಗದ ಮನಸ್ಸೆ ಇಲ್ಲ. ದರ್ಶನ್‌ ಆ ಪಾತ್ರದಲ್ಲಿ ಪರಕಾಯ ಪ್ರವೇಶಿಸಿ ನೋಡುಗರನ್ನು ಹಿಡಿದಿಟ್ಟುಕೊಂಡಿದ್ದರು. 


ಇದನ್ನೂ ಓದಿ-ಪಾಕ್‌ ಕ್ರಿಕೆಟಿಗನೊಂದಿಗೆ ತಮನ್ನಾ ಭಾಟಿಯಾ ಸಂಬಂಧ? ಲೀಕ್ ಆಯ್ತು ಹಳೆಯ ಫೋಟೋ!


ರಾಬರ್ಟ್‌ ಸೂಪರ್‌ ಹಿಟ್ 
 ರಾಬರ್ಟ್‌ ಸಿನಿಮಾ ಕೂಡ ಸಖತ್‌ ಕಮಾಯಿ ಮಾಡಿದ್ದು ಅಬೀಮಾನಿಗಳು ದರ್ಶನ್‌ ಹೊಸ ಲುಕ್‌ ಗೆ ಫಿದಾ ಆಗಿದ್ದಾರೆ. ಇದೊಂದು ಪ್ರೇಂಡ್ಶಿಪ್‌ ರಿಲೇಟೆಡ್‌ ಸಿನಿಮಾ ಆಗಿದ್ದು  ಟೈಗರ್‌ ಪ್ರಭಾಕರ್‌ ಪುತ್ರನೊಂದಿಗೆ 
ತೆರೆ ಹಂಚಿಕೊಂಡಿದ್ರು. 


ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ ಕ್ರಾಂತಿ ಸದ್ದು 
ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡುತ್ತಿರುವ ದರ್ಶನ್‌ ವೃತ್ತಿ ಜೀವನದಲ್ಲಿ ಕ್ರಾಂತಿ ಸಿನಿಮಾ ಹೊಸ ಅಲೆಯನ್ನೇ ಎಬ್ಬಿಸಿತು ಅಂದ್ರೆ ತಪ್ಪಾಗುವುದಿಲ್ಲ, ಈ ಚಿತ್ರವು ಸಾಕಷ್ಟು ಅಡೆತಡೆಗಳನ್ನು ಮೀರಿ ತನ್ನ  ಮೊದಲ ಎರಡು ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಚೆನ್ನಾಗಿ ಗಳಿಸಿತು. ಈ ಚಿತ್ರವು ಕಮರ್ಷಿಯಲ್‌ ಮಸಾಲಾ ಎಂಟರರ್ಟೈನರ್‌ಗೆ ಅಗತ್ಯವಾದ ಅಂಶಗಳನ್ನು ಹೊಂದಿದೆ ಎಂದು ಸಾಕಷ್ಟು ಸಿನಿಮಾ ರೀವೀವ್ಗಳಿಂದ ತಿಳಿದು ಬಂದಿದೆ. ಕಷ್ಟದ ದಿನಗಳಿಂದಲೇ ಮನುಷ್ಯ ಜೀವನದಲ್ಲಿ ಗೆಲುವು ಸಾಧಿಸಲು ಸಾದ್ಯ ಅನ್ನೋ ಮಾತಿಗೆ ದರ್ಶನ್‌ ಉದಾಹರಣೆಯಾಗಿದ್ದಾರೆ. ಕಷ್ಟದ ಹಾದಿಯಿಂದ ತೆರೆ ಮೇಲೆ ಎಂಟ್ರಿ ಕೊಟ್ಟ  ಡಿ ಬಾಸ್‌ ಇಂದು ಬಾಕ್ಸ್‌ ಆಪೀಸ್‌ ಸುಲ್ತಾನನಾಗಿ ಮಿಂಚುತ್ತಿದ್ದಾರೆ. ಒಂದು ಲಕ್ಷ ಸಂಭಾವಣೆ ಪಡೆಯಲು 9 ಸಿನಿಮಾಗಳನ್ನು ಮಾಡಿದ್ದೇನೆ  ಹಾಗೇ ನಾನು ಕೊನೆಯವರೆಗೂ ಕನ್ನಡ ಚಿತ್ರರಂಗದಲ್ಲಿಯೇ ಇರಲು ಇಷ್ಟಪಡುತ್ತೇನೆ ಎಂದು ದರ್ಶನ್‌ ಸಂದರ್ಶನದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಮೊದಲ ಆದ್ಯತೆ ನೀಡುವ ತೂಗುದೀಪ ಇನ್ನಷ್ಟು ಹೆಚ್ಚು ಹಿಟ್‌ ಸಿನಿಮಾಗಳನ್ನು ನೀಡಬೇಕು ಅನ್ನೋದೆ. ಅಭಿಮಾನಿಗಳ ಆಸೆ.

 


ಇದನ್ನೂ ಓದಿ-Rakhi Sawant: "ನನ್ನ ಬೆತ್ತಲೆ ವಿಡಿಯೋ ಮಾರಾಟ ಮಾಡಿದ್ದಾನೆ" ರಾಖಿ ಸಾವಂತ್​ ಶಾಕಿಂಗ್​ ಹೇಳಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.