ಪಾಕ್‌ ಕ್ರಿಕೆಟಿಗನೊಂದಿಗೆ ತಮನ್ನಾ ಭಾಟಿಯಾ ಸಂಬಂಧ? ಲೀಕ್ ಆಯ್ತು ಹಳೆಯ ಫೋಟೋ!

Tamannaah Bhatia And Abdul Razzak : ಸೆಲೆಬ್ರಿಟಿಗಳ ಲಿಂಕ್ ಅಪ್ ವದಂತಿ ಹೊಸದೇನಲ್ಲ, ಆದರೆ ಈ ಕೆಲವು ಸುದ್ದಿಗಳು ದೀರ್ಘಕಾಲದವರೆಗೆ ಉಳಿದು ಬಿಡುತ್ತವೆ. ಅವುಗಳಲ್ಲಿ ಒಂದು ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ತಳಕು ಹಾಕಿಕೊಡ ನಟಿ ತಮನ್ನಾ ಭಾಟಿಯಾ ಹೆಸರು.

Written by - Chetana Devarmani | Last Updated : Feb 11, 2023, 10:01 AM IST
  • ಸೆಲೆಬ್ರಿಟಿಗಳ ಲಿಂಕ್ ಅಪ್ ವದಂತಿ ಹೊಸದೇನಲ್ಲ
  • ಪಾಕ್‌ ಕ್ರಿಕೆಟಿಗನೊಂದಿಗೆ ತಮನ್ನಾ ಭಾಟಿಯಾ ಸಂಬಂಧ?
  • ಲೀಕ್ ಆಯ್ತು ಹಳೆಯ ಫೋಟೋ!
ಪಾಕ್‌ ಕ್ರಿಕೆಟಿಗನೊಂದಿಗೆ ತಮನ್ನಾ ಭಾಟಿಯಾ ಸಂಬಂಧ? ಲೀಕ್ ಆಯ್ತು ಹಳೆಯ ಫೋಟೋ! title=
Tamannah Bhatia And Abdul Razzak

Tamannah Bhatia And Abdul Razzak : ಸೆಲೆಬ್ರಿಟಿಗಳ ಲಿಂಕ್ ಅಪ್ ವದಂತಿ ಹೊಸದೇನಲ್ಲ, ಆದರೆ ಈ ಕೆಲವು ಸುದ್ದಿಗಳು ದೀರ್ಘಕಾಲದವರೆಗೆ ಉಳಿದು ಬಿಡುತ್ತವೆ. ಅವುಗಳಲ್ಲಿ ಒಂದು ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ತಳಕು ಹಾಕಿಕೊಡ ನಟಿ ತಮನ್ನಾ ಭಾಟಿಯಾ ಹೆಸರು. ಪ್ರಸ್ತುತ ನಟ ವಿಜಯ್ ವರ್ಮಾ ಅವರೊಂದಿಗೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಹೊಸ ವರ್ಷದ ಲಿಪ್‌ಲಾಕ್ ವಿಡಿಯೋ ಕೂಡ ವೈರಲ್ ಆಗಿತ್ತು. ಆದರೆ ಇದಕ್ಕೂ ಮುನ್ನ ಪಾಕ್ ಕ್ರಿಕೆಟಿಗನ ಜೊತೆ ತಮನ್ನಾ ಹೆಸರು ತಳಕು ಹಾಕಿಕೊಂಡಿತ್ತು.

ಇದನ್ನೂ ಓದಿ : Tamannah: ಸನ್ಯಾಸತ್ವ ಸ್ವೀಕರಿಸಿದ್ರಾ ತಮನ್ನಾ!! ಮಿಲ್ಕಿ ಬ್ಯೂಟಿ ಕಾವಿ ಬಟ್ಟೆ ಧರಿಸಿದ್ದೇಕೆ?

ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಕಾವಿ ಧರಿಸಿ ಎಲ್ಲರ ಗಮನಸೆಳೆದಿದ್ದರು. ಇದೀಗ ತಮನ್ನಾ ಅವರ ಹಳೆಯ ಫೋಟೋವೊಂದು ವೈರಲ್‌ ಆಗುತ್ತಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರೊಂದಿಗೆ ಆಭರಣ ಅಂಗಡಿಯಲ್ಲಿ ನಿಂತಿರುವ ತಮನ್ನಾ ಅವರ ಹಳೆಯ ಚಿತ್ರವು ವೈರಲ್‌ ಆಗುತ್ತಿದೆ. ಪಾಕ್‌ ಕ್ರಿಕೆಟಿಗ ಅಬ್ದುಲ್ ರಜಾಕ್ ಜೊತೆ ತಮನ್ನಾ ಹೆಸರು ಕೆಲ ವರ್ಷಗಳ ಹಿಂದೆ ಭಾರೀ ಚರ್ಚೆಯಲ್ಲಿತ್ತು.  

ವರದಿಯ ಪ್ರಕಾರ, ಈ ಫೋಟೋ 2017 ರಲ್ಲಿ ದುಬೈನಲ್ಲಿ ನಡೆದ ಆಭರಣ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ತೆಗೆದಿರುವುದು. ಇಬ್ಬರನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ವೈರಲ್ ಫೋಟೋದಲ್ಲಿ, ತಮನ್ನಾ ಮತ್ತು ರಜಾಕ್ ಫೋಟೋಗೆ ಪೋಸ್ ನೀಡುವಾಗ ಕೆಲವು ಆಭರಣಗಳನ್ನು ಹಿಡಿದಿರುವುದನ್ನು ಕಾಣಬಹುದು. ಕೆಲವು ಅಭಿಮಾನಿ ಪುಟಗಳು ಇದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿವೆ. 

ಇದನ್ನೂ ಓದಿ : ನಲ್ಮೆಯ ಫ್ಯಾನ್ಸ್ ಗೆ ಡಿಬಾಸ್ ಗೌರವಾರ್ಪಣೆ ಸಲ್ಲಿಸಿದ್ದು ಹೇಗೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News