ಬೆಂಗಳೂರು: ‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್(Love You Racchu Cinema Shooting) ವೇಳೆ ವಿದ್ಯುತ್ ಸ್ಪರ್ಶಿಸಿ ಸಾಹಸ ಕಲಾವಿದ ವಿವೇಕ್ ಸಾವು ಪ್ರಕರಣ ಸಂಬಂಧ ಸಿನಿಮಾ ಮಂದಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಸಿನಿಮಾ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಹೊಸ ಆದೇಶ ಜಾರಿ ಮಾಡಲಿದೆ ಅಂತಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಸಾಹಸ ಕಲಾವಿದ ವಿವೇಕ್ ಸಾವು(Fighter Vivek Death) ಬೇಸರ ತರಿಸಿದೆ. ಈ ರೀತಿ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಶೂಟಿಂಗ್ ವೇಳೆ ಕೆಲವರು ನಿಯಮಗಳನ್ನು ಸರಿಯಾಗಿ ಪಾಲುಸುತ್ತಿಲ್ಲ. ಚಿತ್ರೀಕರಣಕ್ಕೆ ಅನುಮತಿ ಪಡೆಯುವ ನಿಯಮಗಳಲ್ಲಿ ನಾವು ಬದಲಾವಣೆ ತರುತ್ತೇವೆ. ಇನ್ನುಮುಂದೆ ಅನುಮತಿ ಇಲ್ಲದೆ ಯಾವುದೇ ರೀತಿ ಚಿತ್ರೀಕರಣ ಮಾಡುವಂತಿಲ್ಲ. ಶೂಟಿಂಗ್ ಸಂಬಂಧಿಸಿದಂತೆ ನಾಳೆ, ನಾಡಿದ್ದು ಹೊಸ ಆದೇಶ ಮಾಡುತ್ತೇವೆ ಅಂತಾ ಹೇಳಿದ್ದಾರೆ.


ಇದನ್ನೂ ಓದಿ: Ashika Ranganath: ತಮಿಳಿನ ಚೊಚ್ಚಲ ಚಿತ್ರದಲ್ಲಿ ಕಬಡ್ಡಿ ಆಡಲಿರುವ ನಟಿ ಆಶಿಕಾ ರಂಗನಾಥ್..!


ಕಾನೂನಿನಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ


ಸಹಾಯಕ ಫೈಟರ್ ವಿವೇಕ್ ಸಾವು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ(Araga Jnanendra), ‘ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿವೆ. ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸುತ್ತೇನೆ. ಅಮಾಯಕರು ಮೃತಪಟ್ಟಾಗ ಮನಸ್ಸಿಗೆ ಬೇಸರವಾಗುತ್ತದೆ. ಚಿತ್ರಗಳನ್ನಷ್ಟೇ ನಾವು ವೀಕ್ಷಿಸುತ್ತೇವೆ, ಆದರೆ ತೆರೆ ಹಿಂದೆ ಏನೇನು ನಡೆಯುತ್ತದೆ ಎಂದು ಗೊತ್ತಾಗುವುದಿಲ್ಲ. ಈ ರೀತಿಯ ಘಟನೆಗಳು ನಡೆದಾಗ ಎಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಶೂಟಿಂಗ್ ನಡೆಸುತ್ತಾರೆ ಅನ್ನೋದು ತಿಳಿಯುತ್ತದೆ. ಹೀಗಾಗಿ ಸಿನಿಮಾ ಜಗತ್ತು ಸರಿಯಾದ ರೀತಿ ಅದನ್ನು ನಿರ್ವಹಿಸಬೇಕು’ ಅಂತಾ ಹೇಳಿದ್ದಾರೆ.


‘ಅಮಾಯಕರು, ಪ್ರತಿಭಾವಂತ ಕಲಾವಿದರು ಈ ರೀತಿ ದುರಂತ ಅಂತ್ಯ ಕಾಣಬಾರದು. ಕಾನೂನಿನಡಿಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ. ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಖಳನಟರಾದ ಅನಿಲ್ ಮತ್ತು ಉದಯ್ ಸಾವನ್ನಪ್ಪಿದ್ದರು. ಪದೇ ಪದೇ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಶೂಟಿಂಗ್ ಮಾಡುವ ವೇಳೆ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾಕಷ್ಟು ಎಚ್ಚರಿಕೆ ವಹಿಸುವು ತುಂಬಾ ಮುಖ್ಯ’ ಅಂತಾ ಹೇಳಿದ್ದಾರೆ.


ಇದನ್ನೂ ಓದಿ: Big B Amitabh Bachchan ನಿವಾಸ, Mumbai Railway Stationನಲ್ಲಿ ಬಾಂಬ್ ! ಮುಂದೇನಾಯ್ತು?


ಮೂವರು ಆರೋಪಿಗಳಿಗೆ ಆ.24ರವರೆಗೆ ನ್ಯಾಯಾಂಗ ಬಂಧನ


ಸಹಾಯಕ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಗುರುದೇಶಪಾಂಡೆ(Guru Deshpande) ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಫೈಟ್ ಮಾಸ್ಟರ್ ವಿನೋದ್, ನಿರ್ದೇಶಕ ಶಂಕರಯ್ಯ ಮತ್ತು ಕ್ರೇನ್ ಚಾಲಕ ಮಹದೇವ್ ಅವರಿಗೆ ಆಗಸ್ಟ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಜಡ್ಜ್ ಆದೇಶ ಹೊರಡಿಸಿದ್ದಾರೆ.


ಯಾವುದೇ ಸಹಾಯಕ್ಕೆ ಸಿದ್ಧವೆಂದ ನಟ ಅಜಯ್ ರಾವ್


ಶೂಟಿಂಗ್ ವೇಳೆ ಯುವ ಸಹಾಯಕ ಫೈಟರ್ ವಿವೇಕ್ ಸಾವನ್ನಪ್ಪಿರುವುದು ನನಗೆ ತುಂಬಾ ಬೇಸರವಾಗಿದೆ. ವಿವೇಕ್ ಚಿಕ್ಕಪ್ಪ ಮತ್ತು ಆತನ ಕುಟುಂಬಸ್ಥರ ಜೊತೆ ನಾನು ಮಾತನಾಡಿದ್ದೇನೆ. ನಾನು ನಿಮ್ಮ ಜೊತೆಗಿದ್ದೇನೆ ಅಂತಾ ಭರವಸೆ ನೀಡಿದ್ದೇನೆ. ಘಟನೆ ನಡೆದಾಗ ನಾನು ಶೂಟಿಂಗ್ ಸ್ಪಾಟ್ ನಲ್ಲಿದ್ದೆ. ನನಗೆ ಬ್ಲಾಸ್ಟ್ ಆದ ಶಬ್ದ ಕೇಳಿಸಿತ್ತು. ಕೂಡಲೇ ಸ್ಥಳಕ್ಕೆ ಬಂದು ವಿಚಾರಿಸಿ, ವಿವೇಕ್ ರನ್ನು ಆಸ್ಪತ್ರೆಗೆ ದಾಖಲಿಸಿದೇವು. ಆದರೆ ಅವರು ಸಾವನ್ನಪ್ಪಿದರು. ವಿವೇಕ್ ಕುಟುಂಬಸ್ಥರು ನಿರ್ಮಾಪಕರನ್ನು ಸಂಪರ್ಕಿಸಬೇಕು. ನಿರ್ಮಾಪಕರು ಜವಾಬ್ದಾರಿ ತೆಗೆದುಕೊಳ್ಳಬೇಕು. ಸದ್ಯ ನಿರ್ಮಾಪಕ ಗುರುದೇಶಪಾಂಡೆ ಮೊಬೈಲ್ ಸ್ವಿಚ್ ಆಫ್ ಆಗಿದೆ ಅಂತಾ ಅಜಯ್ ರಾವ್ ಹೇಳಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ