Ashika Ranganath: ತಮಿಳಿನ ಚೊಚ್ಚಲ ಚಿತ್ರದಲ್ಲಿ ಕಬಡ್ಡಿ ಆಡಲಿರುವ ನಟಿ ಆಶಿಕಾ ರಂಗನಾಥ್..!

ಕಾಲಿವುಡ್ ಗೆ ಎಂಟ್ರಿ ಕೊಟ್ಟು ಕಬಡ್ಡಿ ಆಡಲಿರುವ ಆಶಿಕಾ ರಂಗನಾಥ್.

Written by - Zee Kannada News Desk | Last Updated : Aug 8, 2021, 12:32 PM IST
  • ಕಾಲಿವುಡ್ ನಲ್ಲಿಯೂ ಸೌಂಡ್ ಮಾಡಲು ಸಜ್ಜಾದ ಸ್ಯಾಂಡಲ್‌ವುಡ್‌ನ ‘ಚುಟು ಚುಟು ಬೆಡಗಿ’
  • ತಮಿಳು ನಟ ಅಥರ್ವ ಮುರಳಿ ನಟನೆಯ ಸಿನಿಮಾದಲ್ಲಿ ಕಬಡ್ಡಿ ಆಟಗಾರ್ತಿಯಾಗಿ ಆಶಿಕಾ ರಂಗನಾಥ್
  • ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಡೇಟ್ಸ್‌ ಹೊಂದಾಣಿಕೆ ಮಾಡಿಕೊಂಡ ತಮಿಳು ಚಿತ್ರತಂಡಕ್ಕೆ ಮೆಚ್ಚುಗೆ
Ashika Ranganath: ತಮಿಳಿನ ಚೊಚ್ಚಲ ಚಿತ್ರದಲ್ಲಿ ಕಬಡ್ಡಿ ಆಡಲಿರುವ ನಟಿ ಆಶಿಕಾ ರಂಗನಾಥ್..! title=
ಕಾಲಿವುಡ್ ಗೆ ಎಂಟ್ರಿ ಕೊಟ್ಟ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಚುಟು ಚುಟು ಬೆಡಗಿ’ ಆಶಿಕಾ ರಂಗನಾಥ್ ಕಾಲಿವುಡ್(Ashika Ranganath)ಗೆ ಎಂಟ್ರಿ ಕೊಡುತ್ತಿದ್ದಾರೆ. ಇದೇ ಆಗಸ್ಟ್ 5ರಂದು 25ನೇ ವಸಂತಕ್ಕೆ ಕಾಲಿಟ್ಟ ಆಶಿಕಾ ತಮ್ಮ ಜನ್ಮದಿನದಂದು ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಹವಾ ಸೃಷ್ಟಿಸಿರುವ ಆಶಿಕಾ ಚೊಚ್ಚಲ ತಮಿಳು ಚಿತ್ರರಂಗದಲ್ಲೂ ಸೌಂಡ್ ಮಾಡಲು ಸಜ್ಜಾಗಿದ್ದಾರೆ.

ಹೌದು, ತಮಿಳು ನಟ ಅಥರ್ವ ಮುರಳಿ(Atharvaa Murali)ಯವರ ಮುಂದಿನ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಬೆಡಗಿ ಆಶಿಕಾ(Ashika Ranganath) ನಾಯಕಿಯಾಗಿದ್ದಾರೆ. ಈ ಮೂಲಕ ಅವರು ಕಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಕಬಡ್ಡಿ ಆಟಗಾರ್ತಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾವನ್ನು ಎ.ಸರ್ಕುಣಂ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Sunny Leone: ಸನ್ನಿ ಲಿಯೋನ್ ಅತ್ಯಂತ ಇಷ್ಟಪಟ್ಟಿರುವ ಸಿನಿಮಾ ಯಾವುದು ಗೊತ್ತಾ..?

ಈ ಬಗ್ಗೆ ಮಾತನಾಡಿರುವ ಆಶಿಕಾ, ‘ತಮಿಳು ಮತ್ತು ತೆಲುಗು ಚಿತ್ರಗಳಿಂದ ಹಿಂದಿನಿಂದಲೂ ನನಗೆ ಸಾಕಷ್ಟು ಆಫರ್ ಗಳು ಬಂದಿದ್ದವು. ಆದರೆ ನಾನು ಕನ್ನಡದ ಚಿತ್ರಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದೆ. ಹೀಗಾಗಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸದ್ಯ ನನ್ನ ಕನ್ನಡ ಸಿನಿಮಾ ಕೆಲಸಗಳು ಮುಕ್ತಾಯಗೊಂಡಿವೆ. ಸರಿಯಾದ ಸಮಯಕ್ಕೆ ನನಗೆ ತಮಿಳು ಚಿತ್ರ(Kollywood)ದ ಉತ್ತಮ ಪ್ರಾಜೆಕ್ಟ್ ಸಿಕ್ಕಿದ್ದರಿಂದ ಓಕೆ’ ಅಂತಾ ಹೇಳಿದೆ ಎಂದು ಹೇಳಿದ್ದಾರೆ.

‘ನನ್ನ ಶೆಡ್ಯೂಲ್ ಬ್ಯುಸಿ ಇದ್ದರೂ ಕೂಡ ಡೇಟ್ಸ್‌ ಹೊಂದಾಣಿಕೆ ಮಾಡಿಕೊಳ್ಳಲು ತಮಿಳು ಚಿತ್ರತಂಡ ಸಿದ್ಧವಾಗಿತ್ತು. ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ನಾನು ಕಬಡ್ಡಿ ಆಟಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಚಿತ್ರತಂಡವು ನನ್ನ ವರ್ಕೌಟ್ ವಿಡಿಯೋ(WorkOut Video)ಗಳನ್ನು ನೋಡಿದೆ. ನಾನು ಫಿಟ್ನೆಸ್ ಫ್ರೀಕ್ ಕೂಡ ಆಗಿದ್ದೇನೆ. ನಾನೇ ಆ ಪಾತ್ರಕ್ಕೆ ಸೂಕ್ತ ಎಂದು ನಿರ್ಧಾರ ಮಾಡಿ ನನ್ನನ್ನು ಅವರ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ’ ಅಂತಾ ಆಶಿಕಾ ಹೇಳಿದ್ದಾರೆ.

ಇದನ್ನೂ ಓದಿ: Videos : ಡ್ಯಾನ್ಸರ್ ಸಪ್ನಾ ಚೌಧರಿಗೆ 'ಠಕ್ಕರ್' ನೀಡಲು ಬಂದ ಹರಿಯಾಣವಿ ಡ್ಯಾನ್ಸರ್!

ಕನ್ನಡದ ನಾಯಕಿಯರು ಬೇರೆ ಚಿತ್ರರಂಗಕ್ಕೆ ಹೋದರೆ ಮತ್ತೆ ಸ್ಯಾಂಡಲ್ ವುಡ್(Sandalwood)ಕಡೆ ತಿರುಗಿ ನೋಡುವುದಿಲ್ಲವಲ್ಲ ಅಂತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಶಿಕಾ, ‘ಪರಭಾಷೆಯಲ್ಲಿ ನಟಿಸಿದರೂ ನಾನು ಯಾವತ್ತೂ ಕನ್ನಡವಳೇ.., ಕನ್ನಡ ಚಿತ್ರರಂಗವನ್ನು ಮರೆಯುವುದಿಲ್ಲ’ವೆಂದು ಹೇಳಿದ್ದಾರೆ. ‘ನಾನು ಎಂದೆಂದಿಗೂ ಕನ್ನಡದವಳೆ. ನನಗೆ ಇಲ್ಲಿ ಹೆಚ್ಚಿನ ಕೆಲಸವಿದೆ. ಆದರೆ ತಮಿಳು ಚಿತ್ರರಂಗದವರು ಕನ್ನಡದ ಹುಡುಗಿಯನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿರುವುದಕ್ಕೆ ನನ್ನ ಅಭಿಮಾನಿಗಳು ಸಂತೋಷಪಡುತ್ತಾರೆ. ಈ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ನಾನು ಭಾವಿಸುತ್ತೇನೆ’ ಅಂತಾ ಆಶಿಕಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News