2022ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ನಟ ರಕ್ಷಿತ್‌ ಶೆಟ್ಟಿ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘777 ಚಾರ್ಲಿ’ ವಿಶ್ವದಾದ್ಯಂತ ಜೂನ್‌ 10ರಂದು ಬಿಡುಗಡೆಯಾಗಲಿದೆ. ಇದೀಗ ಚಿತ್ರದ ಕನ್ನಡ ಆವೃತ್ತಿಯ ಡಿಜಿಟಲ್‌ ಹಾಗೂ ಸ್ಯಾಟಲೈಟ್‌ ಪ್ರಸಾರದ ರೈಟ್‌ನ್ನು ಕಲರ್ಸ್‌ ಕನ್ನಡ ಹಾಗೂ ವೂಟ್‌ ಡಿಜಿಟಲ್‌ ಪ್ಲ್ಯಾಟ್‌ಫಾರ್ಮ್‌ ಪಡೆದುಕೊಂಡಿದೆ. ದೊಡ್ಡ ಮೊತ್ತಕ್ಕೆ ಖರೀದಿಯಾಗಿದೆ ಎಂದು ಮೂಲಗಳು ತಿಳಿಸಿದ್ದರೂ ಸಹ ಪರಂವಃ ಸ್ಟುಡಿಯೋಸ್‌ ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.


COMMERCIAL BREAK
SCROLL TO CONTINUE READING

ಇದನು ಓದಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಬ್ಯಾನ್... ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ


ಚಾರ್ಲಿ 777 ಚಿತ್ರವನ್ನು ವೀಕ್ಷಿಸಿದ ಕಲರ್ಸ್‌ ಕನ್ನಡ ಬಿಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌ ಫೇಸ್‌ಬುಕ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.  ‘ಕಿರಣ್ ರಾಜ್ ಎಂಬ ಕತೆಗಾರ, ನಿರ್ದೇಶಕ ಕನ್ನಡದಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಕೊಡಬಹದು ಎಂಬ ಭರವಸೆ ಕೊಟ್ಟಿದ್ದು ಚಾರ್ಲಿ. ಐದು ವರ್ಷಗಳ ಶ್ರಮ, ಸಿನಿಮಾ ಪ್ರೀತಿ, ಸೂಕ್ಷ್ಮ ಅವಲೋಕನ ಮತ್ತು ನನಗೆ ಅನಿಸಿದ್ದನ್ನೇ ಮಾಡುತ್ತೇನೆ ಎಂಬ ಸ್ಪಷ್ಟತೆ ಕಾಸರಗೋಡಿನ ಈ ಹುಡುಗನನ್ನು ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗಲಿಕ್ಕಿದೆ ಅನಿಸಿತು. ರಕ್ಷಿತ್ ಅಭಿನಯ ಮತ್ತು ಚಾರ್ಲಿ ಎಂಬ ನಾಯಿ ತಂದ ಜೀವಂತಿಕೆ ಜೊತೆ ಮನಸ್ಸು ತಟ್ಟುವ ಸಂಭಾಷಣೆ ಈ ಸಿನಿಮಾದ ಪ್ಲಸ್ ಪಾಯಿಂಟ್ಸ್’ ಎಂದಿದ್ದಾರೆ.


ಸೆನ್ಸಾರ್‌ ಮಂಡಳಿ ‘777 ಚಾರ್ಲಿ’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್‌ ನೀಡಿದೆ. ಚಿತ್ರವು ಕಳೆದ ವರ್ಷ ಡಿಸೆಂಬರ್‌ 3ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಚಿತ್ರ ಬಿಡುಗಡೆಯನ್ನು ಚಿತ್ರತಂಡವು ಮುಂದೂಡಿತ್ತು. 


ಇದನ್ನು ಓದಿ: KGF 2 ಸಿನಿಮಾ ಕಲಾವಿದರ ಸಂಭಾವನೆ ಎಷ್ಟು ಗೊತ್ತಾ?


ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣಲಿದ್ದು, ಸಂಗೀತಾ ಶೃಂಗೇರಿ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಟ, ನಿರ್ದೇಶಕ ರಾಜ್‌ ಬಿ.ಶೆಟ್ಟಿ, ಡ್ಯಾನಿಶ್‌ ಸೇಠ್‌ ಅಭಿನಯಿಸಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.