KGF 2 ಸಿನಿಮಾ ಕಲಾವಿದರ ಸಂಭಾವನೆ ಎಷ್ಟು ಗೊತ್ತಾ?

KGF 2: ಯಾರೂ ಕಂಡು ಕೇಳರದಿಯಂತೆ ಕನ್ನಡದ ಸಿನಿಮಾವೊಂದು ಬಿಗ್‌ ಹಿಟ್‌ ಕೊಟ್ಟಿದೆ. ರಿಲೀಸ್‌ ಆದ ಕೆಲವೇ ದಿನಗಳಲ್ಲಿ 1000 ಕೋಟಿ ಕ್ಲಬ್ ಸೇರಲು ರೆಡಿಯಾಗಿದೆ. 

Written by - Chetana Devarmani | Last Updated : Apr 26, 2022, 03:00 PM IST
  • ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ
  • ಪ್ರತಿ ದಿನವೂ ಹೊಸ ದಾಖಲೆಯನ್ನು ಬರೆಯುತ್ತಿರುವ ಚಿತ್ರ
  • ಕೆಜಿಎಫ್ 2 ಸಿನಿಮಾ ಕಲಾವಿದರ ಸಂಭಾವನೆ ಎಷ್ಟು ಗೊತ್ತಾ
KGF 2 ಸಿನಿಮಾ ಕಲಾವಿದರ ಸಂಭಾವನೆ ಎಷ್ಟು ಗೊತ್ತಾ?  title=
ಕೆಜಿಎಫ್ 2

ಯಶ್ ಅಭಿನಯದ ಕೆಜಿಎಫ್ 2 ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಪ್ರತಿ ದಿನವೂ ಹೊಸ ದಾಖಲೆಯನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ. ಅಷ್ಟರ ಮಟ್ಟಿಗೆ ಈ ಸಿನಿಮಾವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿಯೇ 720.31 ಕೋಟಿ ಗಳಿಸಿ ದೇಶಾದ್ಯಂತ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಅದರ ಎರಡನೇ ವಾರದಲ್ಲಿ, ಇದು ಶುಕ್ರವಾರದ ವೇಳೆಗೆ ರೂ 776.58 ಕೋಟಿ ಗಳಿಸಿತು. ಈಗ ಈ ಸಿನಿಮಾ 1000 ಕೋಟಿ ಕ್ಲಬ್ ಸೇರಲು ರೆಡಿಯಾಗಿದೆ. ಸುಮಾರು 300 ಕೋಟಿ ಬಜೆಟ್‌ನ ಈ ಸಿನಿಮಾ ಮೂರರಷ್ಟು ಹಣವನ್ನು ಕೇವಲ ಚಿತ್ರಮಂದಿರಗಳಿಂದಲೇ ಬಾಚಿಕೊಂಡಿದೆ. ಟಿವಿ ರೈಟ್ಸ್, ಒಟಿಟಿ ರೈಟ್ಸ್, ಆಡಿಯೋ ರೈಟ್ಸ್ ಇತರೆಗಳನ್ನು ಸೇರಿಸಿದರೆ ಲಾಭದ ಮೊತ್ತ ಏರುತ್ತಲೇ ಸಾಗುತ್ತಿದೆ. ಈ ಎಲ್ಲ ದಾಖಲೆಗಳ ಬೆನ್ನಲ್ಲೇ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದಲ್ಲಿ ನಟಿಸಿದ ಕಲಾವಿದರ ಸಂಭಾವನೆ ಎಷ್ಟು ಎಂಬುದು ಎಲ್ಲರ ಪ್ರಶ್ನೆಯಾಗಿದೆ. 

ಇದನ್ನೂ ಓದಿ: ಕಿಚ್ಚನ ಕೈ ರುಚಿ ಸವಿದ ಡಾಲಿ, ವಾಸುಕಿ ವೈಭವ್‌! ಈ ಟ್ರೀಟ್‌ ಮೀಟ್‌ನ ಸ್ಪೆಷಲ್‌ ಏನು?

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಆಕ್ಷನ್‌ ಕಟ್‌ ಹೇಳಿದ್ದು, ರಾಕಿಭಾಯ್‌ ಪಾತ್ರದಲ್ಲಿ ಯಶ್‌ ಅತ್ಯದ್ಭುತವಾಗಿ ಅಭಿನಯಿಸಿದ್ದಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಕೆಜಿಎಫ್ 2 ಸಿನಿಮಾಕ್ಕಾಗಿ ನಟರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ಇವರೆಲ್ಲರ ಶ್ರಮದ ಫಲವೇ ಕೆಜಿಎಫ್‌2 ಚಿತ್ರದ ಯಶಸ್ಸು. ಈ ಸಿನಿಮಾದಲ್ಲಿ ನಟಿಸಿದ ನಟರಿಗೆ, ತಂತ್ರಜ್ಞರಿಗೆ ಎಷ್ಟು ಸಂಭಾವನೆ ದೊರೆಯಿತು? ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಕೆಜಿಎಫ್ 2 ಸಿನಿಮಾದ ಸ್ಟಾರ್ ಯಶ್‌ ಅವರಿಗೆ ಅತಿ ಹೆಚ್ಚಿನ ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಸಂಭಾವನೆ ವಿಷಯದಲ್ಲಿ ಕೆಜಿಎಫ್ 2 ತಂಡದಲ್ಲಿ ಅತಿ ಹೆಚ್ಚು ನೀಡಲಾಗಿರುವುದು ಯಶ್‌ಗೆ ಎನ್ನಲಾಗುತ್ತದೆ.  ಯಶ್‌ಗೆ ಬರೋಬ್ಬರಿ 35 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. 

ಇನ್ನೂ ಅಧೀರನ ಪಾತ್ರದಲ್ಲಿ ಮಿಂಚಿದ ಬಾಲಿವುಡ್‌ ನಟ ಸಂಜಯ್ ದತ್‌ ಮಾತ್ರ ದೊಡ್ಡ ಮೊತ್ತವನ್ನೇ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ. ಸಂಜಯ್ ದತ್‌ಗೆ ಬರೋಬ್ಬರಿ 9 ಕೋಟಿ ರುಪಾಯಿಗಳನ್ನು ನಿರ್ಮಾಣ ಸಂಸ್ಥೆ ನೀಡಿದೆಯಂತೆ. ರವೀನಾ ಟಂಡನ್ ನಿರ್ವಹಿಸಿರುವ ರಮಿಕಾ ಸೇನ್ ಪಾತ್ರ ಸಿನಿಮಾದಲ್ಲಿ ಹೆಚ್ಚು ಹೊತ್ತೇನು ಕಾಣಿಸಿಕೊಳ್ಳುವುದಿಲ್ಲ. ಆದರೆ ಈ ಪಾತ್ರದ ಪ್ರಾಮುಖ್ಯತೆ ಮಾತ್ರ ಬಹಳ ಫವರ್‌ಫುಲ್. ರವೀನಾ ಟಂಡನ್‌ಗೆ 1.5 ರಿಂದ 2 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಚಿತ್ರದ ನಾಯಕಿ ಪಾತ್ರದಲ್ಲಿ ಎಲ್ಲರ ಗಮನ ಸೆಳೆದ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಕೆಜಿಎಫ್ 2 ತುಸು ಹೆಚ್ಚು ಸ್ಕ್ರೀನ್ ಟೈಮ್ ಇದೆ. ಅಲ್ಲದೆ, 'ಕೆಜಿಎಫ್' ಸಿನಿಮಾ ಸರಣಿಯ ಹೊರತಾಗಿ ಕೇವಲ ಒಂದು ಸಿನಿಮಾದಲ್ಲಷ್ಟೆ ಈ ನಟಿ ನಟಿಸಿದ್ದಾರೆ. ಹಾಗಾಗಿ ಇವರಿಗೂ ಸುಮಾರು 2 ಕೋಟಿ ಸಂಭಾವನೆಯನ್ನು ಚಿತ್ರತಂಡ ನೀಡಿದೆ ಎಂಬ ಮಾತಿದೆ.

ಇದನ್ನೂ ಓದಿ: 

ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ

ಪ್ರತಿ ದಿನವೂ ಹೊಸ ದಾಖಲೆಯನ್ನು ಬರೆಯುತ್ತಿರುವ ಚಿತ್ರ

ಕೆಜಿಎಫ್ 2  ಸಿನಿಮಾ ಕಲಾವಿದರ ಸಂಭಾವನೆ ಎಷ್ಟು ಗೊತ್ತಾ

 

'ಕೆಜಿಎಫ್' ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್‌ ಸಹ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದಿದ್ದಾರಂತೆ. ಕೆಜಿಎಫ್ 2 ಸಿನಿಮಾಕ್ಕೆ ಪ್ರಶಾಂತ್ ನೀಲ್ ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ನಟ ಪ್ರಕಾಶ್ ರೈ ಹಾಗೂ ಮಾಳವಿಕಾ ಅವಿನಾಶ್ ಸಹ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು, ಪ್ರಕಾಶ್ ರೈ 80 ಲಕ್ಷದಿಂದ ಒಂದು ಕೋಟಿ ಹಾಗೂ ಮಾಳವಿಕಾ 50 ಲಕ್ಷ ಸಂಭಾವನೆ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News