The Great Indian Kapil Show Trailer Launch: ಸ್ಟಾಂಡ್ ಅಪ್ ಕಾಮಿಡಿ ಮೂಲಕ ಕೋಟ್ಯಾಂತರ ಅಭಿಮಾನಿ ಬಳಗ ಹೊಂದಿರುವ ಕಪಿಲ್ ಶರ್ಮಾ (Kapil Sharma) ಇದೀಗ ಮತ್ತೊಮ್ಮೆ ತನ್ನ ಹೊಸ ಕಾಮಿಡಿ ಕಾರ್ಯಕ್ರಮದ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಇಡಲು ಮುಂದಾಗಿದ್ದಾರೆ. ಅವರು ತಮ್ಮ ಹಾಸ್ಯಪ್ರಜ್ಞೆಯ ಮೂಲಕ ಅಪಾರ ಖ್ಯಾತಿ ಗಳಿಸಿದ್ದಾರೆ. ವಿಶ್ವಾದ್ಯಂತದ ಜನರು ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ಅಭಿಮಾನಿಗಳಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲಾ ವಯೋಮಾನದವರೂ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಕಾಮಿಡಿ ಶೋಗಳಿಗೆ ಭರ್ಜರಿ ಟಿಆರ್‌ಪಿ ಕೂಡ ಸಿಗುತ್ತದೆ. ಹೀಗಾಗಿ ಇದೀಗ ಮತ್ತಮ್ಮೆ ಕಪಿಲ್ ತಮ್ಮ ಹೊಸ ಕಾರ್ಯಕ್ರಮದೊಂದಿಗೆ ಪ್ರೇಕ್ಷಕರ ನಡುವೆ ಇರಲಿದ್ದಾರೆ. ಕುತೂಹಲಕಾರಿಯಾಗಿ, ಆದರೆ, ಈ ಬಾರಿ ಅವರಿಗೆ ಮತ್ತೊಮ್ಮೆ ಗುಥ್ಥಿ ಅಲಿಯಾಸ್ ಸುನಿಲ್ ಗ್ರೋವರ್ ಬೆಂಬಲ ಸಿಕ್ಕಿದೆ. (Entertainment News In Kannada)


COMMERCIAL BREAK
SCROLL TO CONTINUE READING

6 ವರ್ಷಗಳ ನಂತರ ಗುಥ್ಥಿ ಕಪಿಲ್ ಶರ್ಮಾ ವೇದಿಕೆಗೆ ಮರಳುತ್ತಿದ್ದಾಳೆ (Comedian Kapil Sharma Show)
'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಕಾರ್ಯಕ್ರಮದೊಂದಿಗೆ ಕಪಿಲ್ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ (Kapil Sharma New Comedy Show). ಶನಿವಾರ ಕಾರ್ಯಕ್ರಮದ ಹಾಸ್ಯಭಾರಿತ ಟ್ರೇಲರ್ ಅನ್ನು ಕೂಡ ತಯಾರಕರು ಬಿಡುಗಡೆ ಮಾಡಿದ್ದಾರೆ. ಈ ಬಾರಿ ಹಳೇ ಕಲಾವಿದರಲ್ಲದೆ ಕಪಿಲ್ ಜೊತೆ ಕೆಲವು ಹಿರಿಯರು ಕೂಡ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.


ಹೌದು ನೀವು ಗೆಸ್ ಮಾಡಿದ್ದು ಕರೆಕ್ಟ್, ಟ್ರೇಲರ್‌ನಲ್ಲಿ ಸುನಿಲ್ ಮತ್ತೊಮ್ಮೆ ತಮ್ಮ ಸೂಪರ್‌ಹಿಟ್ ಪಾತ್ರ ಗುಥ್ಥಿ (Sunil Grower As Gutthi) ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದ ಮೂಲಕ ಕಪಿಲ್ ಮತ್ತು ಸುನೀಲ್ 6 ವರ್ಷಗಳ ನಂತರ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಕಪಿಲ್ ಅವರ ಶೋನಲ್ಲಿ ಸುನೀಲ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳು ಹಲವು ದಿನಗಳಿಂದ ಕೇಳಿ ಬರುತ್ತಿದ್ದು, ಇದೀಗ ಈ ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.


ಸುನಿಲ್ ಗ್ರೋವರ್ ಜೊತೆ ತಮಾಷೆ
ಸುನೀಲ್ ಮತ್ತು ಕಪಿಲ್ (The Great Indian Kapil Show) ಮೊದಲ ಬಾರಿಗೆ ವೇದಿಕೆಯ ಮೇಲೆ ಒಬ್ಬರನ್ನೊಬ್ಬರು ನೋಡಿದ ತಕ್ಷಣ, ಅವರು 6 ವರ್ಷಗಳ ಹಿಂದೆ ಇಬ್ಬರೂ ಬೇರ್ಪಟ್ಟ ಸ್ಥಳದಿಂದಲೇ ಕಾರ್ಯಕ್ರಮ ಆರಂಭಿಸುವುದನ್ನು ನೀವು ಟ್ರೈಲರ್ ನಲ್ಲಿ ನೋಡಬಹುದು. ಇಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಆಶ್ಚರ್ಯಪಟ್ಟಂತೆ ನಟಿಸುತ್ತಾರೆ, ಆದರೆ 'ಗುಥ್ಥಿ'ಯ ಒಂದು ಪಂಚ್‌ ಗೆ ಕಪಿಲ್ ಕೂಡ ತಮಾಷೆ ಮಾಡುತ್ತಾ ಆಕೆಯನ್ನು ತೆಗಳುತ್ತಾರೆ ಮತ್ತು ಇಲ್ಲಿ ಮತ್ತೆ ಜಗಳ ಶುರುವಾಗುತ್ತದೆ ಎಚ್ಚರ ಎಂದು ಗುಥ್ಥಿಗೆ ಹೇಳುತ್ತಾರೆ. ಆದರೆ, ಅವರ ಜಗಳದಲ್ಲಿಯೂ ಪ್ರೇಕ್ಷಕರಿಗೆ ಅವರ ನಗು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.


ಇದನ್ನೂ ಓದಿ-Janhavi Kapoor Video: ಜಾಹ್ನವಿ ಕಪೂರ್ ಇಂಥಾ ವಿಡಿಯೋ ನೀವು ಈ ಮೊದಲು ಎಂದೂ ನೋಡಿರಲಿಕ್ಕಿಲ್ಲ!


ಟ್ರೇಲರ್‌ನಲ್ಲಿ ಕಂಡು ಬಂದ ಅತಿಥಿಗಳ ಝಲಕ್ 
ಬಿಡುಗಡೆಯಾದ ಟ್ರೇಲರ್ ನಲ್ಲಿ ಕಪಿಲ್ ಅವರ ಹೊಸ ಷೋಗೆ ಆಗಮಿಸಲಿರುವ ಅತಿಥಿಗಳ ಒಂದು ಝಲಕ್ ಕೂಡ ನೋಡಲು ಸಿಗುತ್ತಿದೆ. ರಣಬೀರ್ ಕಪೂರ್ ತಮ್ಮ ತಾಯಿ ಮತ್ತು ಹಿರಿಯ ನಟಿ ನೀತು ಕಪೂರ್ ಮತ್ತು ಸಹೋದರಿ ರಿದ್ಧಿಮಾ ಅವರೊಂದಿಗೆ ವೇದಿಕೆಗೆ ಆಗಮಿಸಿದ್ದಾರೆ. ಇದೇ ವೇಳೆ ಖ್ಯಾತ ಕ್ರಿಕೆಟ್ ತಾರೆಗಳಾದ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಕೂಡ ಕಾಣಿಸಿಕೊಂಡಿದ್ದಾರೆ. ಇವರಲ್ಲದೆ, ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಇದೇ ಮೊದಲ ಬಾರಿಗೆ ಅಮೀರ್ ಖಾನ್ ಕೂಡ ಕಪಿಲ್ ಜೊತೆ ಪ್ರೇಕ್ಷಕರನ್ನು ತುಂಬಾ ನಗಿಸುತ್ತಿದ್ದಾರೆ.


ಇದನ್ನೂ ಓದಿ-Aamir Khan Live Video: ಲೈವ್‌ ವಿಡಿಯೋದಲ್ಲೇ ಡ್ರಗ್ಸ್​ ತಗೊಂಡ್ರಾ ಅಮಿರ್‌ ಖಾನ್‌?


ಈ ದಿನದಿಂದ Netflix ನಲ್ಲಿ ಸ್ಟ್ರೀಮ್ ಹೊಸ ಷೋ
ಬಿಡುಗಡೆಯಾದ ಟ್ರೇಲರ್ ಕಪಿಲ್ ಅಭಿಮಾನಿಗಳಲ್ಲಿ ಕಾರ್ಯಕ್ರಮದ ಉತ್ಸಾಹವನ್ನು ಹೆಚ್ಚಿಸಿದೆ, ಕಾಯುವಿಕೆ ಸ್ವಲ್ಪ ಕಷ್ಟವಾಗಿದ್ದರೂ ಕೂಡ ಈ ಕಾಯುವಿಕೆ ಶೀಘ್ರದಲ್ಲೇ ಅಂತ್ಯವಾಗಲಿದೆ. ಇದೇ ವೇಳೆ, ಈ ಬಾರಿ ಕಪಿಲ್ ಹೊಸ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ,  'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ' ಮಾರ್ಚ್ 30, 2024 ರಿಂದ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಇದು ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.


ಬಿಡುಗಡೆಯಾದ ಟ್ರೇಲರ್ ಇಲ್ಲಿದೆ


 

 

 

 



 

 

 

 

 

 

 

 

 

 

 

A post shared by Netflix India (@netflix_in)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ