Aamir Khan Live Video: ಜಾಮ್‌ನಗರದಲ್ಲಿ ಅಂಬಾನಿ ಪಾರ್ಟಿಯಲ್ಲಿ ಮೂವರು ಖಾನ್‌ಗಳು ಒಟ್ಟಿಗೆ ಡ್ಯಾನ್ಸ್ ಮಾಡಲು ಹೇಗೆ ಒಪ್ಪಿಕೊಂಡರು ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಸಮಾರಂಭದಲ್ಲಿ ಡ್ಯಾನ್ಸ್ ವಿಚಾರವಾಗಿ ಅಮೀರ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಅಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಅವರ 'ಲಾಪತಾ ಲೇಡಿಸ್' ಚಿತ್ರದ ಪ್ರಚಾರಕ್ಕಾಗಿಯೇ ಅಮಿರ್ ಖಾನ್ ಲೈವ್ ಬಂದಿದ್ದರು. Instagram ನಲ್ಲಿ ಲೈವ್ ಬಂದ ಅಮೀರ್ ಖಾನ್ ಈ ವೇಳೆ ಸ್ಮೋಕಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ಉಗ್ರರ ಕರಿನೆರಳಿಗೆ ರದ್ದಾದ ʻಸರಿಗಮಪʼ ಗ್ರ್ಯಾಂಡ್ ಫಿನಾಲೆ!!
ಲೈವ್ ಬಂದ ಅಮಿರ್ ಖಾನ್ ಅವರನ್ನು ವ್ಯಕ್ತಿಯೊಬ್ಬರು ಮುಕೇಶ್ ಅಂಬಾನಿ ಪುತ್ರನ ಪ್ರಿ ವೆಡ್ಡಿಂಗ್ ಸಮಾರಂಭದಲ್ಲಿ ಏಕೆ ಡ್ಯಾನ್ಸ್ ಮಾಡಿದ್ದೀರಿ ಎಂದು ಕೇಳಿದ್ದಾರೆ. ಅಮೀರ್ ಈ ಪ್ರಶ್ನೆಯನ್ನು ನಿರ್ಲಕ್ಷಿಸದೆ ಉತ್ತರಿಸಿದ್ದಾರೆ.
ನನ್ನ ಮಗಳು ಐರಾ ಖಾನ್ ಅವರ ಮದುವೆಯಲ್ಲೂ ನಾನು ನೃತ್ಯ ಮಾಡಿದ್ದೇನೆ. ಹಾಗೆಯೇ ಮುಖೇಶ್ ಮಗನ ಮದುವೆಯಲ್ಲೂ ನೃತ್ಯ ಮಾಡಿದ್ದೇನೆ. ಯಾಕೆಂದರೆ ಮುಖೇಶ್ ನನಗೆ ತುಂಬಾ ಆತ್ಮೀಯ ಗೆಳೆಯ. ನೀತಾ, ಮುಖೇಶ್ ಮತ್ತು ಅವರ ಮಕ್ಕಳು ನನಗೆ ಕುಟುಂಬದವರಂತೆ.
"#ShahRukhKhan is making #Pathaan, while I create #LaapataaLadies for you to enjoy - #AamirKhan pic.twitter.com/ZDnQqTU4fN
— Amit Karn (@amitkarn99) March 7, 2024
ಅಮೀರ್ ಖಾನ್ ಲೈವ್ ವಿಡಿಯೋದಲ್ಲಿ ಸಿಗರೇಟ್ ಸೇದುತ್ತಾ ಸಿಕ್ಕಿಬಿದ್ದಿದ್ದಾರೆ. ಅಮೀರ್ ಖಾನ್ ಸಿಗಾರ್ ಸೇದುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲೈವ್ ವಿಡಿಯೋದಲ್ಲಿ ಲೈಟರ್ ನಿಂದ ಸಿಗರೇಟ್ ಹಚ್ಚುತ್ತಿರುವ ದೃಶ್ಯ ಕಂಡು ಬಂದಿದೆ. ಅಮಿರ್ ಖಾನ್ ಈ ಕೆಲಸಕ್ಕೆ ಜನರು ಆಕ್ರೋಶ ಹೊರಹಾಕಿದ್ದಾರೆ. ಕೆಲವರು ಅಮಿರ್ ಖಾನ್ ಲೈವ್ ಬಂದಾಗ ಡ್ರಗ್ಸ್ ಸೇವನೆ ಮಾಡಿದರು ಎನ್ನುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.