Raju Srivastava Cardiac Arrest : ದೇಶದ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೂಲಗಳ ಪ್ರಕಾರ ಬೆಳಗ್ಗೆ ವ್ಯಾಯಾಮ ಮಾಡುತ್ತಿದ್ದ ವೇಳೆ ರಾಜು ಅವರಿಗೆ ಹೃದಯಾಘಾತವಾಗಿದೆ. ಹೃದಯಾಘಾತವಾದಾಗ, ಅವರು ಥ್ರೆಡ್  ಮಿಲ್‌ನಲ್ಲಿದ್ದರು ಎಂದು ಹೇಳಲಾಗಿದೆ. ಏಮ್ಸ್  ನಲ್ಲಿ ಹಿರಿಯ ವೈದ್ಯರ ತಂಡ  ರಾಜು ಆರೋಗ್ಯದ ಮೇಲೆ ನಿಗಾ ಇರಿಸಿದೆ.


COMMERCIAL BREAK
SCROLL TO CONTINUE READING

ಥ್ರೆಡ್  ಮಿಲ್ ನಲ್ಲಿ ಓಡುತ್ತಿದ್ದಾಗ ರಾಜು ಶ್ರೀವಾಸ್ತವ ಅವರಿಗೆ  ಎದೆನೋವು ಕಾಣಿಸಿಕೊಂಡಿದೆ. ಬಳಿಕ ಅವರು ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ವರದಿಯಾಗಿದೆ.  ಕೂಡಲೇ ಅವರನ್ನು ಏಮ್ಸ್ ಆಸ್ಪತ್ರೆಗೆ  ದಾಖಲಿಸಲಾಯಿತು. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಏಮ್ಸ್ ವೈದ್ಯ ನಿತೀಶ್ ನ್ಯಾಯ್ ಅವರ ತಂಡ ರಾಜು ಶ್ರೀವಾಸ್ತವ್ ಆರೋಗ್ಯದ ಮೇಲೆ ನಿಗಾ ಇರಿಸಿದೆ. ವರದಿಗಳ ಪ್ರಕಾರ, ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. 


ಇದನ್ನೂ ಓದಿ : Puneeth Rajkumar Rakhi: ರಕ್ಷಾ ಬಂಧನಕ್ಕೆ ಮಾರುಕಟ್ಟೆಗೆ ಬಂತು "ಅಪ್ಪು ರಾಖಿ"


59 ನೇ ವಯಸ್ಸಿನಲ್ಲಿ ಹೃದಯಾಘಾತ : 
ರಾಜು ಶ್ರೀವಾಸ್ತವ್ ಅವರಿಗೆ ಈಗ 59 ವರ್ಷ ವಯಸ್ಸು. ಅವರು ಈಗಾಗಲೇ ಹೃದ್ರೋಗಿ. ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಇವರಿಗೆ ವರ್ಕ್ ಔಟ್ ವೇಳೆ ಹೃದಯಾಘಾತವಾಗಿದೆ. ರಾಜು ಶ್ರೀವಾಸ್ತವ್ ಅವರು ತಮ್ಮ ಸರಳ ಮತ್ತು ವಿಶಿಷ್ಟ ಶೈಲಿಯಿಂದ ಎಲ್ಲರನ್ನೂ ನಗಿಸುತ್ತಿದ್ದ ದೇಶದ ಅತ್ಯುತ್ತಮ ಹಾಸ್ಯನಟರಲ್ಲಿ ಒಬ್ಬರು. ಅವರು ಅನೇಕ ಚಲನಚಿತ್ರಗಳನ್ನು ಸಹ ಕಾಣಿಸಿಕೊಂಡಿದ್ದಾರೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‌ ಕಾರ್ಯಕ್ರಮದಿಂದಲೇ ಅವರು  ಪ್ರಸಿದ್ದಿ ಪಡೆದಿದ್ದಾರೆ. 


ಇದನ್ನೂ ಓದಿ : ಲಾಲ್‌ಬಾಗ್‌ನಲ್ಲಿ ಅಪ್ಪು ಸಂಸ್ಮರಣಾ ಫಲಪುಷ್ಪ ಪ್ರದರ್ಶನ- ಎಲ್ಲರ ಪ್ರೀತಿಗೆ ಸದಾ ಚಿರಋಣಿ ಎಂದ ಅಶ್ವಿನಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.