ಬೆಂಗಳೂರು: ವಿಭಿನ್ನತೆಗೆ ಹೆಸರಾದಂತ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಿಲಾಡಿಗಳು ಸಹ ಒಂದು. ನಿತ್ಯದ ಜಂಜಾಟದಲ್ಲಿ ಒದ್ದಾಡುವ ಅದೆಷ್ಟೋ ಮನಸ್ಸುಗಳಿಗೆ ಹಾಸ್ಯದ ಮೂಲಕ ಸಾಂತ್ವಾನದ ಕಚಗುಳಿಯನ್ನಿಡುವ ಉದ್ದೇಶದಿಂದ ಹುಟ್ಟಿಕೊಂಡ ಮಹಾವೇದಿಕೆ ಕಾಮಿಡಿ ಕಿಲಾಡಿಗಳು. "ನಿಮ್‌ ಟೆನ್ಶನ್‌ಗಳನ್ನು ಬದಿಗೊತ್ತಿ ಮುಖದಲ್ಲಿ ನಗು ತರಿಸಲು ಮತ್ತೇ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು" ಅನ್ನೋ ಸ್ಲೋಗನ್‌ ಮೂಲಕ ವಾರಾಂತ್ಯದಲ್ಲಿ  ಕರುನಾಡನ್ನೇ ನಗೆಗಡಲಲ್ಲಿ ತೇಲಿಸಿ, ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಸ್ಥಾನ ಗಳಿಸಿಕೊಂಡ ಕೀರ್ತಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಸಲ್ಲುತ್ತದೆ. 


COMMERCIAL BREAK
SCROLL TO CONTINUE READING

ಪ್ರತಿ ಸೀಸನ್ನಿನ ವಾಡಿಕೆಯಂತೆ ಕರ್ನಾಟಕದ 31 ಜಿಲ್ಲೆಗಳಿಗೆ ಹೋಗಿ, 60 ಸಾವಿರಕ್ಕು ಹೆಚ್ಚು ಪ್ರತಿಭೆಗಳನ್ನ ಆಡಿಷನ್‌ ಮಾಡಿ, ಅವರಲ್ಲಿ ಅತ್ಯುತ್ತಮರಾದಂತ 16 ಹಾಸ್ಯ ರತ್ನಗಳನ್ನ ನಮ್ಮ ತ್ರಿವಳಿ ತೀರ್ಪುಗಾರರು ಮೆಗಾ ಆಡಿಷನ್‌ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿ ವೇದಿಕೆಗೆ ಪ್ರೀತಿಯ ಸ್ವಾಗತ ಕೋರಿದರು. 


ಇನ್ನು "ನಗುವೇ ನಮ್ಮ ಸಿದ್ದಾಂತ, ನಗ್ಸೋದಷ್ಟೇ ನಮ್ಮ ವೇದಾಂತ" ಅನ್ನೋ ಸೂತ್ರಕ್ಕೆ ಬದ್ದರಾದಂತ 16 ಜನ ಕಿಲಾಡಿಗಳು, ರಂಗಭೂಮಿಯ ನುರಿತ ನಿರ್ದೇಶಕರುಗಳ ಸಾರಥ್ಯದೊಂದಿಗೆ ಪ್ರತಿದಿನ ರಂಗ ತಾಲೀಮಿನಲ್ಲಿ ತೊಡಗಿಸಿಕೊಂಡು, ನಟನೆಯ ವೈಖರಿ, ಭಾಷೆಯ ಮೇಲಿನ ಹಿಡಿತಗಳು, ಆಂಗೀಕ ಅಭಿನಯದ ಆಯಾಮಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಅಭಿನಯದ ಮೂಲಕ ಹಾಸ್ಯಕ್ಕೆ ಮತ್ತಷ್ಟು ಮೆರುಗನ್ನ ನೀಡಿ, ಕರುನಾಡಿನ ವೀಕ್ಷಕರೆಲ್ಲರು ಇದು ನಮ್ಮ ನೆಚ್ಚಿನ ಕಾರ್ಯಕ್ರಮ ಎಂದು ಕಾತುರದಿಂದ ಕಾಯುವಂತೆ ಮಾಡುವಲ್ಲಿ ಸೈ ಎನಿಸಿಕೊಂಡಿದ್ದಾರೆ ನಮ್ಮ ಸೀಸನ್‌ 4ನ ಕಿಲಾಡಿಗಳು. 


ಇದನ್ನೂ ಓದಿ- ಜೀ ಕನ್ನಡದ ಬೃಹತ್ ರಿಯಾಲಿಟಿ ಶೋ DKD-7 ಹಾಗೂ ಛೋಟಾ ಚಾಂಪಿಯನ್-3 ಆಡಿಷನ್ : ಇಲ್ಲಿದೆ ಮಾಹಿತಿ


ಈ ಸೀಸನ್‌ನ ಮತ್ತೊಂದು ವಿಶೇಷತೆಯ ಹೊಸ ಪ್ರಯೋಗ ಸ್ಟ್ಯಾಂಡಪ್‌ ಕಾಮಿಡಿ. ತಮ್ಮ ಮಾತಿನ ವೈಖರಿಯ ಮೂಲಕ ವೀಕ್ಷಕರನ್ನ ತಾಸುಗಟ್ಟಲೇ ರಂಜಿಸುವ ನೈಪುಣ್ಯತೆಯಿರುವುದು ಸ್ಟ್ಯಾಂಡಪ್‌ ಕಮೆಡಿಯನ್‌ಗಳಿಗೆ, ಅದರಂತೆ ಈ ಒಂದು ಸಂಚಿಕೆಯಲ್ಲಿ ನಮಗೆ ಸಿಕ್ಕಂತ ಅಪರೂಪದ ಪ್ರತಿಭೆ ರಾಯಚೂರಿನ ಹಾಟ್‌ ಹುಡುಗ ರಾಘವೇಂದ್ರ ಆಚಾರ್ಯ. 


ಮೆಗಾ ಆಡಿಷನ್‌ ಮೂಲಕ ಶುರುವಾದಂತ ಕಾರ್ಯಕ್ರಮ ಸರಿ ಸುಮಾರು 22 ವಾರಗಳ ಸುಧೀರ್ಘ ಸಂಚಿಕೆಯಲ್ಲಿ, ಸೆಮಿಫಿನಾಲೆ ಹಂತದವರೆಗೆ ಒಟ್ಟು 150ಕ್ಕೂ ಹೆಚ್ಚು ಸ್ಕಿಟ್‌ಗಳ ಮೂಲಕ ಭಿನ್ನ, ವಿಭಿನ್ನ ಗೆಟಪ್‌ಗಳ ಮೂಲಕ, ಹಾಸ್ಯದ ಜೊತೆಗೆ ಸಾಮಾಜಿಕ ಸಂದೇಶಗಳು ಹಾಗೂ ಪ್ರಯೋಗಾತ್ಮಕ ಸ್ಕಿಟ್‌ಗಳನ್ನ ಅಭಿನಯಿಸುವುದರ ಮೂಲಕ ಕನ್ನಡಿರನ್ನ ರಂಜಿಸುವಲ್ಲಿ ನಮ್ಮ ಕಿಲಾಡಿಗಳು ಹಾಗೂ ನಗುವಿನ ಮಹಾವೇದಿಕೆ ಸೈ ಎನಿಸಿಕೊಂಡು, ಮನರಂಜನೆಯ ಮೂಲಕ ನಾಡಿನ ಮೆಚ್ಚುಗೆಗೆ ಪಾತ್ರವಾದ ಕಾಮಿಡಿ ಕಿಲಾಡಿಗಳು ಸೀಸನ್‌ 4 ಮಹಾವೇದಿಕೆ ಈಗ ಗ್ರ್ಯಾಂಡ್‌ ಫಿನಾಲೆ ಹಂತಕ್ಕೆ ಬಂದು ನಿಂತಿದೆ. 


ಇನ್ನು ಎಂದಿನಂತೆ ನಮ್ಮ ಕಾರ್ಯಕ್ರಮದ ಹೆಮ್ಮೆಯ ತೀರ್ಪುಗಾರರಾದ ನವರಸ ನಾಯಕ ಜಗ್ಗೇಶ್‌, ಕ್ರೇಜಿಕ್ವೀನ್‌ ರಕ್ಷಿತಾ ಹಾಗೂ ಲವ್ಲೀ ಸ್ಟಾರ್‌ ಪ್ರೇಮ್‌ರವರು ಗ್ರ್ಯಾಂಡ್‌ ಫಿನಾಲೆಯ ಮೆರುಗನ್ನು ಹೆಚ್ಚಿಸಿದರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಾರಥಿ, ಕರ್ನಾಟಕದ ನೆಚ್ಚಿನ ನಿರೂಪಕ ಮಾಸ್ಟರ್‌ ಆನಂದ್‌ರವರು ಗ್ರ್ಯಾಂಡ್‌ ಫಿನಾಲೆಯನ್ನು ಮುನ್ನಡೆಸಲಿದ್ದಾರೆ. 


ಇದನ್ನೂ ಓದಿ- Dhanush SIR trailer : ಧನುಷ್‌ ʼಸರ್‌ʼ ಟ್ರೈಲರ್‌ ರಿಲೀಸ್‌, ʼಇಳಯ ಸೂಪರ್‌ಸ್ಟಾರ್‌ʼ ಯಂಗ್‌ ಲುಕ್‌ ಸೂಪರ್‌..!


ಇವರೆಲ್ಲರ ಜೊತೆಗೆ ನೂರಾರು ಜನ ತಂತ್ರಜ್ಞರು ಹಾಗೂ ಶ್ರಮಿಕರ ನಿರಂತರ ಪರಿಶ್ರಮದಲ್ಲಿ ಸಜ್ಜಾಗುತ್ತಿರುವ   "ಕಾಮಿಡಿ ಕಿಲಾಡಿಗಳು ಸೀಸನ್‌ 4 ಗ್ರ್ಯಾಂಡ್‌ ಫಿನಾಲೆ ಮಹಾವೇದಿಕೆ" ಕೂಡ ಸೀಸನ್‌ 4ನ ವಿನ್ನರ್‌ ಯಾರಾಗಬಹುದೆಂಬ ಕುತೂಹಲದ ಕ್ಷಣಗಣನೆಗೆ ಎದಿರು ನೋಡುತ್ತಿದೆ. ಒಟ್ಟು 12 ಜನ ಟಾಫ್‌ ಫೈನಲಿಸ್ಟ್‌ ಕಿಲಾಡಿಗಳ ವಿಭಿನ್ನ ಹಾಸ್ಯ ನಾಟಕಗಳ ಜೊತೆ ಜೊತೆಗೆ ಉಳಿದ ಕಿಲಾಡಿಗಳು ಡ್ಯಾನ್ಸ್‌ ಪರ್ಫಾರ್ಮೆನ್ಸ್‌ ಮೂಲಕ ಕರುನಾಡನ್ನ ರಂಜಿಸಲು ಸಿದ್ದರಾಗಿದ್ದಾರೆ. 


ಈ ಎಲ್ಲಾ ಅವಿಸ್ಮರಣೀಯ ಕ್ಷಣಗಳಿಗೆ ಕಾಮಿಡಿ ಕಿಲಾಡಿಗಳು ಸೀಸನ್‌ 4 ಗ್ರ್ಯಾಂಡ್‌ ಫಿನಾಲೆ ಮಹಾವೇದಿಕೆ" ಸಕ್ಕರೆನಾಡು ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲ್ಲೂಕು [ಕೆ.ಆರ್.ಪೇಟೆ] ಪುರಸಭೆ ಮೈದಾನದಲ್ಲಿ ಸಜ್ಜಾಗುತ್ತಿದ್ದು, ಇದೇ ಫೆಬ್ರವರಿ 11ರ ಸಂಜೆ ಕಾರ್ಯಕ್ರಮ ಆರಂಭವಾಗಲಿದ್ದು, ಕಾರ್ಯಕ್ರಮಕ್ಕೆ ಕರುನಾಡಿನ ವೀಕ್ಷಕರೆಲ್ಲರಿಗು ತುಂಬು ಹೃದಯದ ಸ್ವಾಗತವನ್ನು ಕೋರುತ್ತಾ ನಿಮ್ಮ ಆಗಮನದ ನಿರೀಕ್ಷಯಲ್ಲಿದೆ ನಿಮ್ಮ ನೆಚ್ಚಿನ ವಾಹಿನಿ ಜೀ ಕನ್ನಡ.  


ವಾರಾಂತ್ಯದ ಮನರಂಜನೆಯ ಮಹಾಪೂರ ಕಾಮಿಡಿ ಕಿಲಾಡಿಗಳು ಸೀಸನ್‌ 4 ಗ್ರ್ಯಾಂಡ್‌ ಫಿನಾಲೆ ಸಂಚಿಕೆ ಇದೇ ಫೆಬ್ರವರಿ 19 ರಂದು ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.