ಚಂದ್ರಯಾನ-3 ಕುರಿತು ಟ್ವೀಟ್ : ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು
Chandrayaan 3 : ಚಂದ್ರಯಾನ-3 ಮಿಷನ್ ಕುರಿತು ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಭಾನುವಾರದಂದು ನಟ ವ್ಯಂಗ್ಯಚಿತ್ರವನ್ನು ಟ್ವೀಟ್ ಮಾಡಿದ್ದು, ಅದರಲ್ಲಿ ವ್ಯಕ್ತಿಯೊಬ್ಬರು ವೆಸ್ಟ್ ಮತ್ತು ಲುಂಗಿಯಲ್ಲಿ ಚಹಾವನ್ನು ಸುರಿಯುತ್ತಿರುವ ದೃಶ್ಯವಿತ್ತು.
Prakash raj on Chandrayaan 3 : ಚಂದ್ರಯಾನ-3 ಮಿಷನ್ ಕುರಿತು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದ ನಟ ಪ್ರಕಾಶ್ ರಾಜ್ ವಿರುದ್ಧ ಹಿಂದೂ ಸಂಘಟನೆಗಳ ಮುಖಂಡರು ಮಂಗಳವಾರ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಾನುವಾರ ಪ್ರಕಾಶ್ ರಾಜ್ ವ್ಯಂಗ್ಯಚಿತ್ರವೊಂದನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ವ್ಯಕ್ತಿಯೊಬ್ಬರು ಟವಲ್ ಮತ್ತು ಲುಂಗಿ ತೊಟ್ಟು ಚಹಾವನ್ನು ಸುರಿಯುತ್ತಿರುವುದನ್ನು ಕಾಣಬಹುದು. ಈ ಫೋಟೋ ಹಂಚಿಕೊಂಡಿದ್ದ ನಟ, "ಬ್ರೇಕಿಂಗ್ ನ್ಯೂಸ್:- #VikramLander Wowww #justasking ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ವ್ಯಂಗ್ಯವಾಡಿದ್ದರು.
ಇದನ್ನೂ ಓದಿ: ಕಲರ್ ಕಲರ್ ಸೀರೆಯಲ್ಲಿ ʼಅನುಪಮಾʼ : ಕ್ಯೂಟ್ ಕುಟ್ಟಿ ಫೋಟೋಸ್ ಇಲ್ಲಿವೆ
ಇನ್ನು ಚಂದ್ರಯಾನ ಮಿಷನ್ ಕುರಿತು ನಟ ಮಾಡಿದ್ದ ಪೋಸ್ಟ್ ನೋಡಿ ನೆಟ್ಟಿಗರು ಸೇರಿದಂತೆ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದವು. ಅಲ್ಲದೆ, ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಕೂಡ ನಟನ ಟ್ವೀಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. "ಈ ನಾಚಿಕೆಗೇಡಿನ ಟ್ವೀಟ್‌ಗಾಗಿ ನಾನು ಪ್ರಕಾಶ್ ರಾಜ್ ಅವರನ್ನು ಖಂಡಿಸುತ್ತೇನೆ. ಇಸ್ರೋದ ಯಶಸ್ಸು ಭಾರತದ ಯಶಸ್ಸು" ಎಂದು ಅವರು ಬರೆದುಕೊಂಡಿದ್ದಾರೆ.
ತಮ್ಮ ಪೋಸ್ಟ್‌ಗೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೆ, ಗಾದೆ ಮಾತನ್ನು ಹಂಚಿಕೊಂಡಿದ್ದಾರೆ 'ದ್ವೇಷ ಮಾತ್ರ ದ್ವೇಷವನ್ನು ನೋಡುತ್ತದೆ' ಎಂದು ಹೇಳಿಕೊಳ್ಳುವ ಮೂಲಕ ತಮ್ಮ ಪೋಸ್ಟ್ ಅನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ನಟನ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಇಸ್ರೋದ ಸಾಧನೆಗಳಿಂದ ರಾಜಕೀಯ ದ್ವೇಷವನ್ನು ದೂರವಿಡುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.