ನೀಟ್ ಪೇಪರ್ ಸೋರಿಕೆ ವಿಚಾರ ಮಾತನಾಡುತ್ತಿದ್ದಂತೆ ರಾಹುಲ್ ಗಾಂಧಿ ಮೈಕ್ ಆಫ್..! ಕಾಂಗ್ರೆಸ್ ಆರೋಪ
Rahul Gandhi`s mic mute : ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ನೀಟ್ ಪೇಪರ್ ಸೋರಿಕೆ ವಿಚಾರವಾಗಿ ಪ್ರಸ್ತಾಪಿಸಿದ ವೇಳೆ ಅವರ ಮೈಕ್ ಆಫ್ ಮಾಡಲಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಕಾಂಗ್ರೆಸ್ ಈ ಕುರಿತ ವಿಡಿಯೋ ಹಂಚಿಕೊಂಡು ಆಕ್ರೋಶ ಹೊರ ಹಾಕಿದೆ..
Rahul Gandhi mic off : ಲೋಕಸಭೆಯಲ್ಲಿ ನೀಟ್ ಪೇಪರ್ ಸೋರಿಕೆ ವಿಚಾರವಾಗಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಸ್ತಾಪಿಸಿದ ವೇಳೆ ಅವರ ಮೈಕ್ ಆಫ್ ಮಾಡಲಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಅಲ್ಲದೆ, ಈ ಕುರಿತು ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ರಾಹುಲ್ ಗಾಂಧಿಯವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಮೈಕ್ರೊಫೋನ್ ಆನ್ ಮಾಡುವಂತೆ ವಿನಂತಿಸುತ್ತಿರುವ ದೃಶ್ಯವಿದೆ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರ ಮೈಕ್‌ಗಳನ್ನು ಸ್ವಿಚ್ ಆಫ್ ಮಾಡುವುದಿಲ್ಲ ಮತ್ತು ಅಂತಹ ನಿಯಂತ್ರಣವನ್ನು ತಾವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ಚರ್ಚೆಯು ರಾಷ್ಟ್ರಪತಿಗಳ ಭಾಷಣದ ಮೇಲೆ ಇರಬೇಕು. ಇತರ ವಿಷಯಗಳನ್ನು ಸದನದಲ್ಲಿ ದಾಖಲಿಸಲಾಗುವುದಿಲ್ಲ ಎಂದು ಬಿರ್ಲಾ ಹೇಳಿದರು.
ಇದನ್ನೂ ಓದಿ: ಕೊಚ್ಚಿ ತಲುಪಿದ 45 ಭಾರತೀಯರ ಮೃತದೇಹ ಹೊತ್ತ ಐಎಎಫ್ ವಿಮಾನ
ಒಂದೆಡೆ ನರೇಂದ್ರ ಮೋದಿ ನೀಟ್ ಬಗ್ಗೆ ಪ್ರಸ್ತಾಪ ಮಾಡದಿದ್ದಾಗ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸದನದಲ್ಲಿ ಯುವಕರ ಪರ ದನಿ ಎತ್ತುತ್ತಿದ್ದಾರೆ. ಆದರೆ, ಇಂತಹ ಗಂಭೀರ ವಿಚಾರವನ್ನು ಹತ್ತಿಕ್ಕಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಮೈಕ್ ಸ್ವಿಚ್ ಆಫ್ ಮಾಡುವಂತಹ ಅಗ್ಗದ ಕಾರ್ಯಗಳನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.