Kuwait Fire Tragedy: ಕೊಚ್ಚಿ ತಲುಪಿದ 45 ಭಾರತೀಯರ ಮೃತದೇಹ ಹೊತ್ತ ಐಎಎಫ್ ವಿಮಾನ

Kuwait Fire Tragedy: ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಕೇರಳದಿಂದ 23, ತಮಿಳುನಾಡಿನ 7, ಆಂಧ್ರಪ್ರದೇಶದ 3, ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ 1 ಮಂದಿ ಸೇರಿದ್ದಾರೆ. 

Written by - Yashaswini V | Last Updated : Jun 14, 2024, 11:59 AM IST
  • ಕೇರಳದ ಕೊಚ್ಚಿಗೆ ಬಂದಿಳಿದ ವಿಶೇಷ ವಿಮಾನ
  • ಕುವೈತ್‌ನ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಭಾರತೀಯರ ಮೃತದೇಹಗಳು ತಾಯ್ನಾಡಿಗೆ
Kuwait Fire Tragedy: ಕೊಚ್ಚಿ ತಲುಪಿದ  45 ಭಾರತೀಯರ ಮೃತದೇಹ ಹೊತ್ತ ಐಎಎಫ್ ವಿಮಾನ  title=

Kuwait Fire Tragedy: ಕುವೈತ್‌ನ ಮಂಗಾಫ್ ಪ್ರದೇಶದ "ಲೇಬರ್ ಹೌಸಿಂಗ್" ನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 45 ಭಾರತೀಯರು ಮೃತಪಟ್ಟಿದ್ದಾರೆ.  ಇದೀಗ ಈ ಮಾರಣಾಂತಿಕ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನವು ಕೊಚ್ಚಿ ತಲುಪಿದೆ. ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ (India's Minister of State for External Affairs Kirti Vardhan Singh) ಕೂಡ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದ್ದಾರೆ. 

ಈ ಕುರಿತಂತೆ ಮಾಹಿತಿ ನೀಡಿರುವ ಎರ್ನಾಕುಲಂ ರೇಂಜ್ ಡಿಐಜಿ ಪುಟ್ಟ ವಿಮಲಾದಿತ್ಯ ಅವರು, ಕೊಚ್ಚಿ ವಿಮಾನ ನಿಲ್ದಾಣಕ್ಕೆ ಸಂತ್ರಸ್ತರ ಶವಗಳನ್ನು ತರಲಾಗಿದ್ದು, ಸಂತ್ರಸ್ತರ ಕುಟುಂಬ ಸದಸ್ಯರಿಗೆ ಮೃತದೇಹಗಳನ್ನು ಸ್ವೀಕರಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಮೃತದೇಹಗಳನ್ನು ಸ್ವೀಕರಿಸಿದ ನಂತರ, ಅವುಗಳನ್ನು ಸರಿಯಾದ ರೀತಿಯಲ್ಲಿ ಅವರ ಸ್ಥಳಗಳಿಗೆ ಕೊಂಡೊಯ್ಯಲಾಗುತ್ತದೆ. ಪ್ರತಿ ಮೃತದೇಹಕ್ಕೆ ಪ್ರತ್ಯೇಕ ವಾಹನವನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ- ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್‌ಟಿ ಕೌನ್ಸಿಲ್ ಜೂನ್ 22ರಂದು ಆರಂಭ

ಗಮನಾರ್ಹವಾಗಿ, ಕುವೈತ್ ಅಗ್ನಿ ದುರಂತದ (Kuwait Fire Disaster) ಬಳಿಕ ಕುವೈತ್ ಗೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಜೂನ್ 13ರಂದು, ಕುವೈತ್‌ನ ಆಸ್ಪತ್ರೆಗಳಿಗೆ ಭೇಟಿ ನೀಡಿ  ದುರಂತ ಬೆಂಕಿ ಘಟನೆಯಲ್ಲಿ ತೊಂದರೆಗೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಪ್ರಜೆಗಳೊಂದಿಗೆ ಮಾತನಾಡಿ, ಧೈರ್ಯ ತುಂಬಿದರು. 

ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟವರಲ್ಲಿ ಕೇರಳಿಗರೇ ಹೆಚ್ಚು! 
ಇನ್ನೂ ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರಲ್ಲಿ ಕೇರಳದ ಜನರೇ ಹೆಚ್ಚಿದ್ದು ಈ ದುರಂತದಲ್ಲಿ ಕೇರಳದ 23 ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೆ ತಮಿಳುನಾಡಿನ 7, ಆಂಧ್ರಪ್ರದೇಶದ 3, ಬಿಹಾರ, ಒಡಿಶಾ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್, ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ 1 ಮಂದಿ ಈ ದುರಂತದಲ್ಲಿ ಮೃತಪಟ್ಟಿದ್ದಾರೆ. 

ಇದನ್ನೂ ಓದಿ- Ghaziabad Fire: ಗಾಜಿಯಾಬಾದ್‌ನ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ, ಐವರು ಸಜೀವ ದಹನ

ಯುಎಇ ಮೂಲದ ಎನ್‌ಆರ್‌ಐ ಉದ್ಯಮಿಯಿಂದ ಪರಿಹಾರ: 
ಕುವೈತ್ ಬೆಂಕಿ ದುರಂತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ  ಯುಎಇ ಮೂಲದ ಎನ್‌ಆರ್‌ಐ ಉದ್ಯಮಿ ಲುಲು ಗ್ರೂಪ್‌ನ ಅಧ್ಯಕ್ಷರು  5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ. ಇದಲ್ಲದೆ,  ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ಪ್ರತಿ ಕುಟುಂಬಕ್ಕೆ 2 ಲಕ್ಷ ರೂಪಾಯಿ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. 

ಇದಲ್ಲದೆ, ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟಿರುವ ಕೇರಳಿಗರಿಗಾಗಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News