Actor Rajinikanth : ರಜನಿಕಾಂತ್ ಭಾರತೀಯ ಚಲನಚಿತ್ರೋದ್ಯಮದ ಪ್ರಮುಖ ನಟರಲ್ಲಿ ಒಬ್ಬರು. ಸುಮಾರು 40 ವರ್ಷಗಳಿಂದ ಹೀರೋ ಆಗಿ ನಟಿಸುತ್ತಿರುವ ತಲೈವಾ ತಮ್ಮ 70ರ ಹರೆಯದಲ್ಲಿಯೂ ಅದೇ ಕ್ರೇಜ್‌ ಅದೇ ರೆಂಜ್‌ನಿಂದ ನಟಿಸುತ್ತಿದ್ದಾರೆ... ಸಧ್ಯ ಅವರ ಹುಟ್ಟು ಹಬ್ಬದ ಪ್ರಯುಕ್ತ ಫ್ಯಾನ್ಸ್‌ಗೆ ಮೂರು ಬಿಗ್‌ ಸರ್ಪ್ರೈಸ್‌ ಕಾದಿವೆ... 


COMMERCIAL BREAK
SCROLL TO CONTINUE READING

ನಟ ರಜನಿಕಾಂತ್ ಸದ್ಯ ಎರಡು ಚಿತ್ರಗಳಿಗೆ ಕಮಿಟ್ ಆಗಿದ್ದಾರೆ. ಅದರಲ್ಲಿ ಸದ್ಯ ನಟಿಸುತ್ತಿರುವ ಕೂಲಿ ಕೂಡ ಒಂದು. ಈ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ. ಕೆಲವು ತಿಂಗಳ ಹಿಂದೆ ಈ ಚಿತ್ರದ ಘೋಷಣೆ ಹೊರಬಿದ್ದಿತ್ತು. ಇದರಲ್ಲಿ ರಜನಿಕಾಂತ್ ಜೊತೆಗೆ ನಾಗಾರ್ಜುನ, ಶ್ರುತಿ ಹಾಸನ್, ಸತ್ಯರಾಜ್, ಉಪೇಂದ್ರ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. 


ಕೂಲಿ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ನೀಡುತ್ತಿದ್ದಾರೆ. ಹೈದರಾಬಾದ್, ಚೆನ್ನೈ ಮುಂತಾದ ಕಡೆ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಮುಖ ಅಪ್‌ಡೇಟ್ ಏನೆಂದರೆ, ಇದು ರಜನಿಕಾಂತ್ ಅವರ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ. ಅಷ್ಟೇ ಅಲ್ಲ, ಮತ್ತೊಂದು ಚಿತ್ರದ ಗ್ಲಿಂಪ್ಸ್ ವಿಡಿಯೋ ಹಾಗೂ ರಜನಿಕಾಂತ್ ಅವರ ವಿಶೇಷ ಪೋಸ್ಟರ್ ಹೊರ ಬರುತ್ತಿದೆ. 


ಇದನ್ನೂ ಓದಿ:ಎಲಿಮಿನೇಷನ್‌ ಅಲ್ಲ.. ʼಈʼ ಕಾರಣದಿಂದ ಕನ್ನಡ ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಾರಾ ಸ್ಟ್ರಾಂಗ್‌ ಲೇಡಿ ಸ್ಪರ್ಧಿ!?


ಜೈಲರ್ ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾದ ರಜನಿಕಾಂತ್ ಅವರ ಅತಿದೊಡ್ಡ ಹಿಟ್ ಆಗಿತ್ತು. ಈ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದರು. ರಜನಿಕಾಂತ್ ಜೊತೆಗೆ ರಮ್ಯಾ ಕೃಷ್ಣನ್, ಮಿರ್ನಾ ಮೆನನ್, ವಸಂತ್ ವರಿ, ತಮನ್ನಾ, ಜಾಕಿ ಶ್ರಾಫ್, ಮೋಹನ್ ಲಾಲ್, ಶಿವರಾಜ್‌ಕುಮಾರ್ ಮುಂತಾದವರು ನಟಿಸಿದ್ದರು. ಈ ಚಿತ್ರದ ಎರಡನೇ ಭಾಗ ಸಿದ್ಧವಾಗಿದೆ ಎಂದು ಈಗಾಗಲೇ ಹಲವು ವರದಿಗಳು ಹರಿದಾಡುತ್ತಿವೆ. 


ಜೈಲರ್ 2 ಚಿತ್ರದ ಪ್ರೋಮೋ ವಿಡಿಯೋವನ್ನು ಡಿಸೆಂಬರ್ 5 ರಂದು ಚಿತ್ರೀಕರಿಸಲಾಗುವುದು ಎಂದು ಹೇಳಲಾಗಿದ್ದು, ರಜನಿಕಾಂತ್ ಪಾಲ್ಗೊಳ್ಳುವ ನಿರೀಕ್ಷೆಯೂ ಇದೆ. ರಜನಿ ಹುಟ್ಟುಹಬ್ಬದಂದು ಈ ವಿಡಿಯೋ ಬಿಡುಗಡೆಯಾಗಲಿದೆ. ಜೈಲರ್ 2 ಚಿತ್ರಕ್ಕೆ "ಹುಕುಂ" ಎಂದು ಹೆಸರಿಡಲಾಗಿದೆ. 


ಮೂರನೆ ಸರ್ಪ್ರೈಸ್‌.. ಅಂದ್ರೆ, 1991 ರಲ್ಲಿ ತೆರೆಕಂಡ ರಜನಿ ಅಭಿನಯದ "ದಳಪತಿ" ಸಿನಿಮಾ ಮರು-ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಮಮ್ಮುಟ್ಟಿ, ಅರವಿಂದ್ ಸಾಮಿ, ಶೋಬನಾ ಸೇರಿ ಮುಂತಾದವರು ನಟಿಸಿದ್ದಾರೆ. ಮಣಿರತ್ನಂ ನಿರ್ದೇಶನದ ಈ ಚಿತ್ರ ಭಾರೀ ಹಿಟ್ ಆಗಿತ್ತು. ರಜನಿ ಹುಟ್ಟುಹಬ್ಬದಂದು ಚಿತ್ರ ಮತ್ತೆ ಥಿಯೇಟರ್‌ಗೆ ಬರಲಿದೆ. 


ಇದನ್ನೂ ಓದಿ:ಶೀಘ್ರದಲ್ಲೇ ‘ಜೈಲರ್ 2’ ಚಿತ್ರದ ಅಧಿಕೃತ ಘೋಷಣೆ: ಶಿವಣ್ಣ ಇರುವ ಬಗ್ಗೆ ಸಸ್ಪೆನ್ಸ್!


ನಟ ರಜನಿಕಾಂತ್ ಅವರ ಕೊನೆಯ ಬಿಡುಗಡೆಯಾದ ಚಿತ್ರ ವೇಟ್ಟೈಯಾನ್. ಈ ಚಿತ್ರವನ್ನು ಡಿಜೆ ಜ್ಞಾನವೇಲ್ ನಿರ್ದೇಶಿಸಿದ್ದಾರೆ. ಚಿತ್ರವು ಸಾಮಾನ್ಯ ಚಿತ್ರಗಳಿಗಿಂತ ಸ್ವಲ್ಪ ಭಿನ್ನವಾಗಿತ್ತು. ಅಭಿಮಾನಿಗಳಿಂದ ಸ್ವಲ್ಪಮಟ್ಟಿಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ರಜನಿಗೆ ವಿಲನ್ ಆಗಿ ನಟಿಸಿದ್ದರು. 


ವೇಟ್ಟೈಯಾನ್‌ನಲ್ಲಿ ಮಂಜು ವಾರಿಯರ್ ಮತ್ತು ಅಭಿರಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಈ ಚಿತ್ರವು ವಿಶ್ವದಾದ್ಯಂತ 250 ಕೋಟಿ ರೂ. ಕೆಲೆಹಾಕಿತು. ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ರಜನಿ ತಮ್ಮ ಮುಂದಿನ ಚಿತ್ರ ಕೂಲಿಯಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.