ಬೆಂಗಳೂರು: ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಗಾಳಿ ಮಾತು, ನ್ಯಾಯ ಎಲ್ಲಿದೆ ಸಿನಿಮಾದ ಹಾಡು ಬಳಕೆಯಾಗಿದೆ ಎಂದು ಕಾಪಿರೈಟ್ ನಿಯಮದಡಿ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮೇಲೆ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ರಕ್ಷಿತ್ ಶೆಟ್ಟಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇದೀಗ ರಕ್ಷಿತ್ ವಿಚಾರಣೆಗೆ ಹಾಜರಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ನಿವೃತ್ತಿ ಹಿಂಪಡೆಯಲಿದ್ದಾರೆ ರೋಹಿತ್‌ ಶರ್ಮಾ!? ಅಚ್ಚರಿಯ ಹೇಳಿಕೆ ನೀಡಿದ ಹಿಟ್ ಮ್ಯಾನ್‌


ಯಶವಂತಪುರ ಪೊಲೀಸರು 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇನ್ನು ಬಳಿಕ ಹೇಳಿಕೆ ನೀಡಿದ ನಟ, "ನನ್ನ ಪ್ರಕಾರ ಇದು ಕಾಪಿರೈಟ್ ಉಲ್ಲಂಘನೆ ಅಲ್ಲ. ಇಂಡಸ್ಟ್ರಿಯಲ್ಲಿ ಕಾಪಿರೈಟ್ ವೈಯಲೇಷನ್ ಬಗ್ಗೆ ಇಂಡಸ್ಟ್ರಿಯಲ್ಲಿ ಯಾರಿಗೂ ಜ್ಞಾನ ಇಲ್ಲ. ಕನ್ನಡ ಸಿನಿಮಾ ಹಾಡುಗಳನ್ನ ಕನ್ನಡ ಸಿನಿಮಾದಲ್ಲಿ ಬಳಸಿಕೊಳ್ಳೋದು ತಪ್ಪಾ..? ಸನ್ನಿವೇಶಕ್ಕೆ ತಕ್ಕಂತೆ ಕೆಲಸ‌ ಸನ್ನಿವೇಶದಲ್ಲಿ ಹಾಡು ಬಳಕೆಯಾಗಿದೆ. ಹಾಡುಗಳನ್ನು ಹಣ ಮಾಡುವ ಉದ್ದೇಶದಿಂದ ಬಳಸಿದ್ದರೆ ತಪ್ಪು. ನಾವು ಸಿನಿಮಾ ಮಾಡುವ ಮೊದಲೇ ಆಡಿಯೋ ಕಂಪನಿಯನ್ನ ಕೇಳಿದ್ದೆವು. ಆದ್ರೆ ಅವ್ರು ದೊಡ್ಡ ಮೊತ್ತದ ಹಣ ಕೇಳಿದ್ರು. ಆಮೇಲೆ ಸುಮ್ಮನಾಗಿದ್ವಿ" ಎಂದಿದ್ದಾರೆ.


ಇದನ್ನೂ ಓದಿ: ಈ ಪೋಟೋದಲ್ಲಿರುವ ಮಗು ಈಗ ಟಾಪ್‌ ಹಿರೋಯಿನ್..‌ ಸ್ಟಾರ್ ನಟನ ಪತ್ನಿ.. ಯಾರಿರಬಹುದು ಗುರುತಿಸಬಲ್ಲಿರಾ?! 


"ಇತ್ತೀಚೇಗೆ ಆಡಿಯೋ ಕಂಪನಿಗಳು ಇದೇ ರೀತಿ ಮಾಡುತ್ತಿದ್ದಾರೆ. ನಾನು ಇದನ್ನ ಕಾನೂನುಬದ್ದವಾಗಿ ಎದುರಿಸುತ್ತೇನೆ. ಕಿರಿಕ್ ಪಾರ್ಟಿ ಟೈಮ್ʼನಲ್ಲೂ ಇದೇ ರೀತಿ ಆಗಿತ್ತು. ಆಗಲು ನಾನು ಕಾಪಿ ರೈಟ್ ಅಲ್ಲ ಅಂತ ವಾದ ಮಾಡಿದ್ದು ಆಮೇಲೆ ರಾಜಿಯಾಗಿತ್ತು. ಈ ಬಾರಿ ರಾಜಿಯಾಗಲ್ಲ ಎಂದು  ಕಾನೂನು ಹೋರಾಟ ಮೂಲಕ ಉತ್ತರ ಕೊಡುತ್ತೇನೆ" ಎಂದು ಖಡಕ್ ಆಗಿ ರಕ್ಷಿತ್ ಶೆಟ್ಟಿ ಹೇಳಿಕೆ ಕೊಟ್ಟಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ