Vikrant Rona Release - 'ವಿಕ್ರಾಂತ್ ರೋಣ' ರಿಲೀಸ್ ಗೆ ಜಗತ್ತಿನಾದ್ಯಂತ ಕೌಂಟ್ ಡೌನ್ ಶುರುವಾಗಿದೆ..! ಚಿತ್ರ ಬಿಡುಗಡೆಗೂ ಮುನ್ನ ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಕ್ರಮ ಆಯೋಜನೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ವಿಕ್ರಾಂತ ರೋಣ ಹವಾ ತುಂಬಾ ಜೋರಾಗಿದ್ದು, ಖಾಸಗಿ ಮಾಲ್ ನಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Vikrant Rona Pre Release event : 'VR' ಪ್ರೀ ರಿಲೀಸ್‌ ಇವೆಂಟ್‌ : ಉಪ್ಪಿ-ಕಿಚ್ಚ ಇಂದು ಒಂದೇ ವೇದಿಕೆಯಲ್ಲಿ!

ಇನ್ನೊಂದೆಡೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಿಡುಗಡೆಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ, ವಿರ್ಕಾಂತ್ ರೋಣ ಪ್ರೀ ರಿಲೀಸ್ ಇವೆಂಟ್ ಭರ್ಜರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ನಟ ಸುದೀಪ್ ಸೇರಿದಂತೆ ಚಿತ್ರದ ಸಂಪೂರ್ಣ ತಂಡ ಹಾಜರಾಗಿದೆ. 


ಇದನ್ನೂ ಓದಿ-ಚಂದನವನದ ಟಾಪ್ ನಟಿಯರ ಪಟ್ಟಿಯಲ್ಲಿ ರಮ್ಯಾ, ಇವರೇ ನೋಡಿ ನಂ.1


ಆದರೆ, ಮತ್ತೊಂದೆಡೆ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗಳು ತೀವ್ರ ಪರದಾಟ ನಡೆಸಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಈ ಚಿತ್ರ ಹಾಲಿವುಡ್ ನಲ್ಲಿಯೂ ಬಿಡುಗಡೆಯಾಗುತ್ತಿರುವುದು ಈ ಬಾರಿಯ ವಿಶೇಷ. ಇದಕ್ಕೂ ಮೊದಲು ಕಳೆದ ಎರಡು ದಿನಗಳಿಂದ ವಿಕ್ರಾಂತ್ ರೋಣ ತಂಡ ದೇಶದ ವಿವಿಧ ನಗರಗಳಲ್ಲಿ ಪ್ರೀರಿಲೀಸ್ ಇವೆಂಟ್ ಆಯೋಜಿಸುವುದರಲ್ಲಿ ನಿರತವಾಗಿದೆ. ಇದೆ ಸರಣಿಯಲ್ಲಿ ಇಂದು ಬೆಂಗಳೂರಿನ ಲುಲೂ ಮಾಲ್ ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.  ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಿಯಲ್ ಸ್ಟಾರ್ ಉಪೇಂದ್ರ , ಸಚಿವ ಮುನಿರತ್ನ , ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂತಾದವರು ವಿಕ್ರಾಂತ್ ರೋಣ ಟೀಮ್ ಜೊತೆಗೆ ಹಾಜರಾಗಿದ್ದಾರೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.