ಚಂದನವನದ ಟಾಪ್ ನಟಿಯರ ಪಟ್ಟಿಯಲ್ಲಿ ರಮ್ಯಾ, ಇವರೇ ನೋಡಿ ನಂ.1

Popular Kannada actresses: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ನಟನೆಯಿಂದ ದೂರ ಉಳಿದಿರಬಹುದು. ಆದರೆ ಅವರ ಪಾಫುಲಾರಿಟಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಚಿತ್ರರಂಗದ ಹಲವು ಜನರ ಸಂಪರ್ಕದಲ್ಲಿದ್ದಾರೆ. 

Written by - Chetana Devarmani | Last Updated : Jul 26, 2022, 03:47 PM IST
  • ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ
  • ಚಂದನವನದ ಟಾಪ್ ನಟಿಯರ ಪಟ್ಟಿ
  • ಇವರೇ ನೋಡಿ ನಂ.1 ಕನ್ನಡ ಹೀರೋಯಿನ್‌
ಚಂದನವನದ ಟಾಪ್ ನಟಿಯರ ಪಟ್ಟಿಯಲ್ಲಿ ರಮ್ಯಾ, ಇವರೇ ನೋಡಿ ನಂ.1 title=
ರಮ್ಯಾ 

Top 5 popular Kannada actresses: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ನಟನೆಯಿಂದ ದೂರ ಉಳಿದಿರಬಹುದು. ಆದರೆ ಅವರ ಪಾಫುಲಾರಿಟಿ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಚಿತ್ರರಂಗದ ಹಲವು ಜನರ ಸಂಪರ್ಕದಲ್ಲಿದ್ದಾರೆ. ಅವರು ಬಣ್ಣ ಹಚ್ಚಿ ಸುಮಾರು 8 ವರ್ಷಗಳಾಗಿವೆ. ಇಷ್ಟು ವರ್ಷ ಯಾವುದೇ ಸಿನಿಮಾದಲ್ಲಿ ನಟಿಸದಿದ್ದರೂ ಕನ್ನಡದ ಟಾಪ್ 5 ಜನಪ್ರಿಯ ನಟಿಯರ ಪಟ್ಟಿಯಲ್ಲಿ ರಮ್ಯಾ ಸ್ಥಾನ ಗಳಿಸಿದ್ದಾರೆ. 

ಹೌದು, Ormax Media ನಡೆಸಿದ ಸಮೀಕ್ಷೆಯಲ್ಲಿ ರಮ್ಯಾ ಅವರು 4ನೇ ಸ್ಥಾನ ಪಡೆದಿದ್ದಾರೆ. ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ, ಆಶಿಕಾ ರಂಗನಾಥ್, ರಚಿತಾ ರಾಮ್ ಇತರ ಸ್ಥಾನಗಳಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ನಂ.1 ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: Vikrant Rona: ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಅಪಪ್ರಚಾರ!? ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ

ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅವರು ಒರ್ಮ್ಯಾಕ್ಸ್ ಮೀಡಿಯಾದ ಸಮೀಕ್ಷೆಯ ವರದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 8 ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದೇನೆ. ರಚಿತಾ ರಾಮ್, ಆಶಿಕಾ ರಂಗನಾಥ್, ರಶ್ಮಿಕಾ ಮಂದಣ್ಣ, ರಾಧಿಕಾ ಪಂಡಿತ್ ಜೊತೆಗೆ ನಾನು ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

 

 

2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ರಮ್ಯಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪುನೀತ್ ರಾಜ್ ಕುಮಾರ್, ಸುದೀಪ್, ಯಶ್, ಗಣೇಶ್, ಉಪೇಂದ್ರ, ವಿಜಯ್ ರಾಘವೇಂದ್ರ ಮುಂತಾದ ಸ್ಟಾರ್ ನಟರೊಂದಿಗೆ ರಮ್ಯಾ ತೆರೆ ಹಂಚಿಕೊಂಡಿದ್ದಾರೆ. 2014 ರಿಂದ ರಮ್ಯಾ ನಟನೆಯಲ್ಲಿ ಆಸಕ್ತಿ ತೋರಿಸಲಿಲ್ಲ. ಅವರು ನಟಿಸಿದ ‘ನಾಗರಹಾವು’ ಸಿನಿಮಾ 2016ರಲ್ಲಿ ತೆರೆಕಂಡಿತ್ತು.

ಇದನ್ನೂ ಓದಿ: ರಕ್ಕಮ್ಮನ ನೋಟಕ್ಕೆ ಬೀಳ್ದವ್ರು ಯಾರವ್ರೇ? ಹಳದಿ ಬಣ್ಣದ ಸೀರೆಯಲ್ಲಿ ಗೊಂಬೆಯಂತೆ ಕಂಡ ಜಾಕ್ವೆಲಿನ್

ಒಂದೋಳ್ಳೆ ಚಿತ್ರದ ಮೂಲಕ ರಮ್ಯಾ ಮತ್ತೆ ನಟನೆಗೆ ಮರಳಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ‘ಎಷ್ಟೇ ವರ್ಷ ಕಳೆದರೂ ನೀನೇ ನಮ್ಮ ನೆಚ್ಚಿನ ನಟಿ’ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ರಮ್ಯಾ ಹಲವು ಚಿತ್ರತಂಡಗಳಿಗೆ ಶುಭ ಹಾರೈಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಡಾಲಿ ಧನಂಜಯ್ ಅಭಿನಯದ ‘ಹೊಯ್ಸಳ’ ಚಿತ್ರದ ಶೂಟಿಂಗ್ ಸೆಟ್ ಗೆ ಭೇಟಿ ನೀಡಿ ಗಮನ ಸೆಳೆದಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News