Juliet-2 :ಟೀಸರ್ ಮತ್ತು ತಂದೆ ಮಗಳ ಬಾಂಧವ್ಯ ಹಾಗೂ ಹೆಣ್ಣಿನ ತ್ಯಾಗದ ಸಂಕೇತವಾಗಿ ಬಿಡುಗಡೆಯಗಿರೋ ಹಾಡುಗಳಿಂದ ಇದೀಗ'ಜೂಲಿಯಟ್ 2' ಸಿನಿಮಾ ಸಖತ್ ಟಾಕ್ನಲ್ಲಿದೆ.ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ ಹಾಡುತ್ತೆ ಎಂಬ ಹಾಡು ಯಾಕೋ ಮತ್ತೇ ಮತ್ತೇ ಕೇಳಬೇಕೆನಿಸುತ್ತೆ. ಅದರ ಬೆನ್ನಲ್ಲೇ ಮೊನ್ನೆಯಷ್ಟೇ ರಿಲೀಸ್ ಆಗಿರೋ ಜಗವ ಹಡೆದ ಮಗಳಿವಳು,ಕರುಳ ಕರೆಗೆ ಮರಗುವಳು' ಅನ್ನೋ ಜೂಲಿಯಟ್ 2 ಸಿನಿಮಾದ ಈ ಹೊಸ ಹಾಡು ನಿಜಕ್ಕೂ ಹೆಣ್ಣು ಈ ಭೂಮಿ ಮೇಲೆ ಎಷ್ಟು ಪ್ರಮುಖ ಪಾತ್ರ ನಿಭಾಯಿಸುತ್ತಾಳೆ ಅನ್ನೋದನ್ನ ಒಮ್ಮೆ ಹಾಡು ಕೇಳಿದ್ರೆ ಅರ್ಥ ಆಗಿಬಿಡುತ್ತೆ..


COMMERCIAL BREAK
SCROLL TO CONTINUE READING

ಇದೀಗ ಇಷ್ಟೋಳ್ಳೆ ಸಂದೇಶವಿರೋ ಹಾಡುಗಳು ಮತ್ತು ಟೀಸರ್ ನೋಡಿದ ಮೇಲೆ ಸಿನಿಮಾವು ಅಷ್ಟೇ ಅದ್ಭುತ ಕಂಟೆಂಟ್ ಹೊಂದಿದೆ ಅನ್ನೋ ಮಾತು ಗಾಂಧಿನಗರದಲ್ಲಿ ಸೌಂಡ್ ಮಾಡುತ್ತಿದೆ.ಪಿಐ ಪ್ರೊಡಕ್ಷನ್​ ಮತ್ತು ವಿರಾಟ್​ ಮೋಷನ್ ಪಿಕ್ಚರ್ ಲಾಂಛನದಲ್ಲಿ ಲಿಖಿತ್ ಆರ್.ಕೋಟ್ಯಾನ್ ನಿರ್ಮಾಣ ಮಾಡಿರುವ "ಜ್ಯೂಲಿಯೆಟ್ 2" ಚಿತ್ರವನ್ನು ವಿರಾಟ್ ಬಿ.ಗೌಡ ನಿರ್ದೇಶಿಸಿದ್ದಾರೆ. ಸಚಿನ್ ಬಸ್ರೂರ್ ಅವರ ಬಿ.ಜಿ.ಎಂ ಹಾಗೂ ಶ್ಯಾಂಟೋ ವಿ ಆ್ಯಂಟೋ ಅವರ ಛಾಯಾಗ್ರಹಣವಿದೆ.


ಇದನ್ನೂ ಓದಿ:ನಟಿ ಜಯಸುಧಾಗೆ ಮೂರನೇ ಮದುವೆ ಸುದ್ದಿ ನಿಜವೇ ?


ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರವನ್ನು ರಿಲಯನ್ಸ್ ಎಂಟರ್​ಟೈನ್​ಮೆಂಟ್ ಮೂಲಕ ವಿಶ್ವಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಹಾಡು ಮತ್ತು ಟೀಸರ್​ನಿಂದಲೇ ಟಾಕ್ ಆಗುತ್ತಿರುವ ಜೂಲಿಯೆಟ್‌ 2 ಸಿನಿಮಾ ಬೃಂದಾ ಆಚಾರ್ಯ ಅವರ ಕೆರಿಯರ್​ಗೆ ಬ್ರೇಕ್ ನೀಡುತ್ತಾ ಅನ್ನೋದು ಈ ತಿಂಗಳ 24ರಂದು ಗೊತ್ತಾಗಲಿದೆ.ಜ್ಯೂಲಿಯೇಟ್ ಟೂ.. ಪ್ರೇಮಂ ಪೂಜ್ಯಂ ಚಿತ್ರದ ನಾಯಕಿ ಬೃಂದಾ ಆಚಾರ್ಯ ನಟಿಸಿರೋ ವಿಭಿನ್ನ ಸಿನಿಮಾ ಇದು.. ಜ್ಯೂಲಿಯೆಟ್ ಚಿತ್ರದ ಹೆಸ್ರೇ ಹೇಳುವಂತೆ ಚಿತ್ರ ಸಂಪೂರ್ಣವಾಗಿ ಬೃಂದಾ ಅವರ ಪಾತ್ರದ ಸುತ್ತ ಗಿರಕಿ ಹೊಡೆಯುತ್ತೆ.


ಇದನ್ನೂ ಓದಿ:ದೇಹದ ತೂಕ ಇಳಿಸಲು ಪ್ರಯತ್ನ ಮಾಡಲೇ ಇಲ್ವಾ ನಟಿ ರಕ್ಷಿತಾ ಪ್ರೇಮ್...!


ಪಟ್ಟಣದಿಂದ ಹಳ್ಳಿಗೆ ಸೇರುವ ನಾಯಕಿಯ ಬದುಕಲ್ಲಿ ಆ ನಂತರ ನಡೆಯುವ ಘಟನೆ ಶಾರದೆಯಂತೆ ಶಾಂತರೂಪಿಯಾದ ನಾಯಕಿಯನ್ನ ಹೇಗೆ ದುರ್ಗೆಯನ್ನಾಗಿಸುತ್ತೆ ಚಿತ್ರದ ಒನ್ ಲೈನ್ ಸ್ಟೋರಿ.. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಪಂಚ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ಲಿಖಿತ್ ಆರ್ ಕೋಟ್ಯಾನ್ ನಿರ್ಮಿಣ ಮಾಡಿರೋ ಜ್ಯೂಲಿಯೆಟ್ ಟೂ ಚಿತ್ರವನ್ನ   ಮಂಗಳೂರು, ಬೆಳ್ತಂಗಡಿ ಹಾಗೂ ಅದರ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ ಸೇರಿದಂತೆ ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದೆ.. ಸದ್ಯ ಟೀಸರ್‌ನಿಂದಲೇ ಎಲ್ಲರ ಗಮನ ಸೆಳೆಯುತ್ತಿರೋ ಜ್ಯೂಲಿಯೇಟ್ ಸದ್ಯದಲ್ಲೇ ಟ್ರೇಲರ್ ರಿಲೀಸ್ ಮಾಡಿ ಅದ್ದೂರಿ ಟ್ರೀಟ್ ಕೊಡಲು ಪ್ಲ್ಯಾನ್ ಮಾಡ್ತಿದ್ದಾರೆ..https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.