ಮುಂಬೈ: Cruise Drugs Rave Party - ಮುಂಬೈನ ಕರಾವಳಿ ತೀರದಲ್ಲಿ ಕ್ರೂಸ್ ವೊಂದರಲ್ಲಿ ನಡೆದಿದೆ ಎನ್ನಲಾಗಿರುವ ಡ್ರಗ್ಸ್ ರೇವ್ ಪಾರ್ಟಿ (Drugs Rave Party) ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಅವರನ್ನು ಬಂಧಿಸಿದ್ದಾರೆ.  ಆರ್ಯನ್ ಖಾನ್ ನನ್ನು NDPS ಆಕ್ಟ್ ನ ಸೆಕ್ಷನ್ 8C, 20B ಹಾಗೂ 35K ಅಡಿ ಬಂಧನಕ್ಕೆ ಒಳಪಡಿಸಲಾಗಿದೆ ಎಂದು NCB ಮೂಲಗಳು ವರದಿ ಮಾಡಿವೆ. ಇದರಲ್ಲಿನ ಸೆಕ್ಷನ್ 8C ಮಾದಕ ಪದಾರ್ಥ ಸೇವನೆಗೆ ಸಂಬಂಧಿಸಿದೆ ಎನ್ನಲಾಗಿದೆ.


Sandalwood Drug Case: ನಟಿ ಅನುಶ್ರೀಗೆ ಎದುರಾಗುತ್ತಾ ಸಂಕಷ್ಟ..?


COMMERCIAL BREAK
SCROLL TO CONTINUE READING

ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಅನುಭವವನ್ನು ಹಂಚಿಕೊಂಡ ಡಿಜಿ, 'ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ, ತನಿಖೆಯೊಂದಿಗೆ ಅದರ ವ್ಯಾಪ್ತಿ ಹೆಚ್ಚಾಗುತ್ತದೆ, ಮತ್ತು ಈ ಪ್ರಕರಣದಲ್ಲೂ ಅದೇ ರೀತಿ ಇರಲಿದೆ ಎಂದು ನಾನು ಭಾವಿಸುತ್ತೇನೆ. ಹೆಚ್ಚಿನ ತನಿಖೆಯಲ್ಲಿ, ಆಶಾದಾಯಕವಾಗಿ ನಾವು ಅದರ ಆಳಕ್ಕೆ ಇಳಿಯುತ್ತೇವೆ' ಎಂದಿದ್ದಾರೆ. ಆದರೆ Zee News ವರದಿಗಾರ ಸೆಲೆಬ್ರಿಟಿಗಳ ಸಂಬಂಧಿಯ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ನ್ಯಾಯಾಂಗ ವ್ಯವಸ್ಥೆಯನ್ನು ಉಲ್ಲೇಖಿಸಿರುವ  ಡಿಜಿ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. ಆದರೆ ಬಾಲಿವುಡ್ ಸೇರಿದಂತೆ ದೆಹಲಿಯ ಸಂಪರ್ಕಗಳು ಇದರಲ್ಲಿ ಕಂಡುಬಂದಿವೆ ಮತ್ತು ಈಗ ಅದನ್ನು ತನಿಖೆ ಮಾಡಲಾಗುತ್ತಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. 


ಇದನ್ನೂ ಓದಿ-Sandalwood Drug Scandal: ರಾಗಿಣಿ, ಸಂಜನಾ ಡ್ರಗ್ ಸೇವಿಸಿದ್ದು ದೃಢ; ಕಾದಿದೆ ಭಾರೀ ಶಾಕ್!


ಇದು 'ಟೀಂ ಇಂಡಿಯಾ' ಕ್ರಮವಾಗಿದೆ
ಸರ್ಕಾರದ ಮಾದಕ ವ್ಯಸನ ಮುಕ್ತಿ ಅಭಿಯಾನವನ್ನು ಉಲ್ಲೇಖಿಸಿ ಮಾತನಾಡಿರುವ  NCB DG ಇಂತಹ ಡ್ರಗ್ಸ್ ಗಳ ಸಂಪೂರ್ಣ ಪೂರೈಕೆ ಸರಪಳಿಯನ್ನು ಮುರಿಯುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ. ಈ ರೀತಿಯ ಡ್ರಗ್ಸ್ ದಂಧೆಯನ್ನು ಪುನರಾವರ್ತಿಸಲು ಎನ್‌ಸಿಬಿ ಅನುಮತಿಸುವುದಿಲ್ಲ ಎಂಬ ಸಂದೇಶವನ್ನು ನಾವು ನೀಡಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ. ಮಾದಕತೆ ಅಥವಾ ಮಾದಕ ದ್ರವ್ಯವನ್ನು ಭಾರತದಲ್ಲಿ ಸಹಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದಕ್ಕಾಗಿ ಸಂಪೂರ್ಣ ಕ್ರಮ ಕೈಗೊಳ್ಳಲಾಗುವುದು. ಇದುವರೆಗೆ ತೆಗೆದುಕೊಂಡ ಕ್ರಮವನ್ನು 'ಟೀಮ್ ಇಂಡಿಯಾ'ದ ಕ್ರಮ ಎಂದು ವಿವರಿಸಿರುವ ಅವರು, ಇಂತಹ ರೇವ್ ಪಾರ್ಟಿಗಳ ಮೇಲೆ ಎನ್‌ಸಿಬಿಯ ದಾಳಿ ಭವಿಷ್ಯದಲ್ಲಿಯೂ ಮುಂದುವರೆಯಲಿದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ-Sandalwood drug case : ಚಂದನವನ ಡ್ರಗ್ ಕೇಸ್ ನಲ್ಲಿ ಟ್ವಿಸ್ಟ್ – ನಾಲ್ಕು ತಿಂಗಳ ಬಳಿಕ ಆದಿತ್ಯ ಆಳ್ವಾ ಬಂಧನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.