ಹಡಗಿನಲ್ಲಿ ಹೈಪ್ರೊಫೈಲ್ ರೇವ್‌ ಪಾರ್ಟಿ: ಬಾಲಿವುಡ್ ಸೂಪರ್ ಸ್ಟಾರ್ ಪುತ್ರ ಸೇರಿ 10 ಮಂದಿಯ ಬಂಧನ..!

ವಾಣಿಜ್ಯ ನಗರಿ ಮುಂಬೈ(Mumbai) ನಲ್ಲಿ ಹೈಪ್ರೊಫೈಲ್ ಡ್ರಗ್ಸ್  ಪಾರ್ಟಿ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಪುತ್ರ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

Written by - Puttaraj K Alur | Last Updated : Oct 3, 2021, 12:42 PM IST
  • ಮುಂಬೈ ಬಳಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಹೈಪ್ರೊಫೈಲ್ ಡ್ರಗ್ಸ್ ಪಾರ್ಟಿ ಮೇಲೆ ಎನ್‌ಸಿಬಿ ದಾಳಿ
  • ಬಾಲಿವುಡ್ ಸೂಪರ್ ಸ್ಟಾರ್ ಪುತ್ರ ಸೇರಿ 10 ಮಂದಿ ವಶಕ್ಕೆ ಪಡೆದ ಎನ್‌ಸಿಬಿ ಅಧಿಕಾರಿಗಳು..!
  • ಹಡಗಿನಲ್ಲಿ ಅಪಾರ ಪ್ರಮಾಣದ ಕೊಕೇನ್ ಸೇರಿ ಅಪಾರ ಪ್ರಮಾಣದ ಮಾದಕವಸ್ತುಗಳು ಜಪ್ತಿ
ಹಡಗಿನಲ್ಲಿ ಹೈಪ್ರೊಫೈಲ್ ರೇವ್‌ ಪಾರ್ಟಿ: ಬಾಲಿವುಡ್ ಸೂಪರ್ ಸ್ಟಾರ್ ಪುತ್ರ ಸೇರಿ 10 ಮಂದಿಯ ಬಂಧನ..! title=
ಶಿಪ್ ನಲ್ಲಿ ಕೊಕೇನ್ ಸೇರಿ ಮಾದಕವಸ್ತುಗಳು ಜಪ್ತಿ (Photo Courtesy: @ANI)

ಮುಂಬೈ: ವಾಣಿಜ್ಯ ನಗರಿ ಮುಂಬೈ(Mumbai) ನಲ್ಲಿ ಹೈಪ್ರೊಫೈಲ್ ಡ್ರಗ್ಸ್  ಪಾರ್ಟಿ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಪುತ್ರ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.

ಮುಂಬೈನ ಕರಾವಳಿಯಲ್ಲಿ ಕ್ರೂಸ್‌ ಹಡಗಿನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಯನ್ನು(Rave Party) ಮಾದಕ ವಸ್ತು ನಿಯಂತ್ರಣ ದಳ(NCB)ದ ಅಧಿಕಾರಿಗಳು ಬಯಲು ಮಾಡಿದ್ದಾರೆ. ಈ ವೇಳೆ ಹಡಗಿನಲ್ಲಿದ್ದ ಕೊಕೇನ್‌, ಹಶೀಶ್‌ ಮತ್ತು MDMA ಮಾತ್ರೆಗಳು ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: Shocking News: ಹಿರಿಯ ವಿದ್ಯಾರ್ಥಿಯನ್ನೇ ಇರಿದು ಕೊಂದ ಕಿರಿಯ ವಿದ್ಯಾರ್ಥಿ..!

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಮುಂಬೈನ ಎನ್‌ಸಿಬಿ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ರೇವ್ ಪಾರ್ಟಿಯಲ್ಲಿ ತೊಡಗಿದ್ದ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ ಪೈಕಿ ಬಾಲಿವುಡ್‌ ಸೂಪರ್‌ಸ್ಟಾರ್‌(Bollywood Superstar) ಒಬ್ಬರ ಪುತ್ರನೂ ಇದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಆತನ ಹೆಸರು ಎಲ್ಲಿಯೂ ಬಹಿರಂಗವಾಗಿಲ್ಲ.

ಹಡಗಿನಲ್ಲಿ ಹೈಪ್ರೊಫೈಲ್ ರೇವ್‌ ಪಾರ್ಟಿ ನಡೆಯುತ್ತಿದೆ ಎಂಬುದರ ಬಗ್ಗೆ ಎನ್‌ಸಿಬಿ(NCB) ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಪ್ರಯಾಣಿಕರಂತೆ ಹಡಗಿನೊಳಗೆ ಪ್ರವೇಶಿಸಿದ ಎನ್‌ಸಿಬಿ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.  ಹಡಗು ಮುಂಬೈ ಕರಾವಳಿ ದಾಟಿ ಸಮುದ್ರದ ಮಧ್ಯ ಭಾಗಕ್ಕೆ ಬರುತ್ತಿದ್ದಂತೆ ರೇವ್‌ ಪಾರ್ಟಿ(Rave Party) ಆರಂಭವಾಗಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಶೇ 50 ರಷ್ಟು ಸ್ಥಳಾವಕಾಶದೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಮುಂದಾದ ಕೇರಳ

ಬಂಧಿತ ಆರೋಪಿಗಳು ಯಾವುದೇ ಭೀತಿಯಿಲ್ಲದೆ ಮಾದಕ ವಸ್ತು(Drugs)ಗಳ ಸೇವನೆ ಮಾಡುತ್ತಿದ್ದರಂತೆ. ಅವರನ್ನು ಸದ್ಯ ಮುಂಬೈಗೆ ವಾಪಸ್ ಕರೆತರಲಾಗಿದೆ. ಪೊಲೀಸರು ಅವರನ್ನು ಕರೆದೊಯ್ಯುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈನ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ, ‘ನಾವು ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದೇವೆ. ದಾಳಿ ವೇಳೆ ಅಪಾರ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ. ನಾವು 8-10 ವ್ಯಕ್ತಿಗಳನ್ನು ಈ ಬಗ್ಗೆ ವಿಚಾರಣೆ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಬಂಧಿತರ ಪೈಕಿ ಯಾರಾದರೂ ಸೆಲೆಬ್ರೆಟಿಗಳು ಇದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ವೆಂದು ಅವರು ಹೇಳಿದ್ದಾರೆ. ಎನ್‌ಸಿಬಿ ಅಧಿಕಾರಿಗಳ ಪ್ರಕಾರ, ಬಾಲಿವುಡ್‌ನ ಪ್ರಮುಖ ನಟರ ಮಕ್ಕಳನ್ನು ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News