ಸಾಲು ಸಾಲು ಸೋಲು, ಅವಮಾನ, ಸವಾಲು ಇವೆಲ್ಲಾ ಮೆಟ್ಟಿ ನಿಂತ ನಟ ರಾಕ್ಷಸ ಡಾಲಿ..!
ಡಾಲಿ ಧನಂಜಯ.. ಕನ್ನಡ ಸಿನಿಮಾ ಇಂಡಸ್ಟ್ರಿಯ ಪ್ರತಿಭಾನ್ವಿತ ನಟ. ಓದಿನಲ್ಲೂ ಸದಾ ಮುಂದಿದ್ದ ಡಾಲಿ ಓದುವ ಹಂತದಲ್ಲೇ ಒಳ್ಳೆ ಕೆಲಸವನ್ನು ಗಿಟ್ಟಿಸಿಕೊಂಡರು.ಆದರೆ ಡಾಲಿಗೆ ಇದ್ಯಾಕೋ ನನ್ನ ಕೆಲಸ ಅಲ್ಲ.ನನಗಾಗಿ ಬೇರೆಯದ್ದೇ ಜಗತ್ತಿದೆ.ಅದುವೇ ಬಣ್ಣದ ಕ್ಷೇತ್ರ ಅಂತ ಅನಿಸಿದ್ದೆ ತಡ ಕೈತುಂಬಾ ಸಂಬಳ ಸಿಗೋ ಕೆಲಸ ಬಿಟ್ಟು ಬಣ್ಣದ ಜಗತ್ತಿನ ಕಡೆ ಹೊರಟೇ ಬಿಟ್ಟರು.
ಇದನ್ನೂ ಓದಿ: Karnataka Cabinet: ಸಚಿವರ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರ ಅನುಮೋದನೆ
ಹೇಗೋ ಸಿಕ್ಕ ಕೆಲಸ ಬಿಟ್ಟು ಬೆಂಗಳೂರು ಅನ್ನೋ ಮಾಯಾನಗರಿಯಲ್ಲಿ ಸಾಧನೆಯ ಶಿಖರವೇರಲು ಪಟ್ಟಪಾಡು ಅಷ್ಟಿಷ್ಟಲ್ಲ. ಸಾಲುಸಾಲು ಸೋಲು,ಅವಮಾನ ಇವೆಲ್ಲಾವನ್ನೂ ಮೆಟ್ಟಿ ನಿಲ್ಲೋದು ಸುಲಭವಲ್ಲ.ಆದರೆ ರಾಕ್ಷಸನಂತೆ ಘರ್ಜಿಸಿ ಎದ್ದು ನಿಂತ ಡಾಲಿ ಎಲ್ಲಾ ಸವಾಲುಗಳಿಗೆ ತನ್ನ ಪರಿಶ್ರಮದ ಮೂಲಕವೇ ಉತ್ತರ ಕೊಡಲು ಆರಂಭಿಸಿ ಇವತ್ತು ಬಹುಬೇಡಿಕೆಯ ನಟನಾಗಿ ನಿಂತಿದ್ದಾರೆ.ಇದೀಗ ಡಾಲಿ ಇಂಡಸ್ಟ್ರಿಗೆ ಎಂಟ್ರಿಯಾಗಿ ಭರ್ತಿ 10 ವರ್ಷಗಳೇ ಕಳೆದಿವೆ. 10 ವರ್ಷ ತುಂಬಿದ ಖುಷಿಯಲ್ಲಿ ಡಾಲಿ ಧನಂಜಯ ಅವರ ಫ್ಯಾಮಿಲಿ,ಫ್ರೆಂಡ್ಸ್ ಇದ್ದಾರೆ.
ಇದನ್ನೂ ಓದಿ: Rain Alert: ರಾಜ್ಯದಲ್ಲಿ ಇನ್ನೂ 2 ದಿನ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ಭೀತಿ-ಹೈ ಅಲರ್ಟ್ ಘೋಷಿಸಿದ ಇಲಾಖೆ!
ಸರಿಯಾಗಿ 10 ವರ್ಷಗಳ ಹಿಂದೆ ಧನಂಜಯ್ ನಟಿಸಿದ ಮೊದಲ ಸಿನಿಮಾ 'ಡೈರೆಕ್ಟರ್ಸ್ ಸ್ಪೆಷಲ್' ರಿಲೀಸ್ ಆಗಿತ್ತು. ಚೊಚ್ಚಲ ಪ್ರಯತ್ನದಲ್ಲೇ ಧನು ಭರವಸೆ ಮೂಡಿಸಿದರು. ನಿಧಾನವಾಗಿ ಒಂದೊಂದೇ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಇನ್ನೇನು ಗೆದ್ದೆ ಎನ್ನುವ ಸಮಯದಲ್ಲಿ ಪಾತಾಳಕ್ಕೆ ಕುಸಿದುಬಿಟ್ಟರು. ಅಲ್ಲಿಗೆ ಎಲ್ಲವೂ ಮುಗಿತು ಅಂತ ಕೆಲವರು ಅಂದುಕೊಂಡಿದ್ದರು. ಆದರೆ ಧನು ಪಟ್ಟು ಬಿಡಲಿಲ್ಲ, 'ಟಗರು' ಚಿತ್ರದ ಡಾಲಿ ಪಾತ್ರ ದೊಡ್ಡ ಬ್ರೇಕ್ ಕೊಡ್ತು. ಮತ್ತೆ ಫೀನಿಕ್ಸ್ ರೀತಿ ಎದ್ದು ಬಂದರು. ಮುಂದೆ ನಿರ್ಮಾಪಕರು ಆದರು.ಇದೀಗ ಡಾಲಿ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ಲೆವೆಲ್ಲಿಗೆ ಬೆಳೆದು ನಿಂತಿದ್ದಾರೆ. ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್ ನಟ ರಾಕ್ಷಸ ಡಾಲಿ ಧನಂಜಯ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ