ಆ ನಟ ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೆನಹಳ್ಳಿ ಎಂಬ ಪುಟ್ಟ ಗ್ರಾಮದ ಪ್ರತಿಭೆ. ಶಾಲಾ-ಕಾಲೇಜುಗಳಿಂದಲೇ ಊರಿಗೆ, ರಾಜ್ಯಕ್ಕೆ ಹೆಸರು ತಂದ ಯುವಕನಿಗೆ ಓದು ಮುಗಿದ ಮೇಲೆ ಒಂದೊಳ್ಳೆ ಉದ್ಯೋಗ ಕೂಡ ಸಿಗುತ್ತೆ. ಆ ಉತ್ತಮ ಕೆಲಸ ಯಾಕೋ ಮನಸ್ಸಿಗೆ ಒಪ್ಪದಾಗ ಗಾಂಧಿನಗರಕ್ಕೆ ಆ ಯುವಕ ಎಂಟ್ರಿ ಕೊಡ್ತಾನೆ. ಹಾಸನದ ಕಾಳೆನಹಳ್ಳಿ ಅಂದಾಗಲೇ ನಿಮಗೆ ಅರ್ಥವಾಗಿರುತ್ತೆ ಇದು ನಟ ರಾಕ್ಷಸ ಡಾಲಿ ಧನಂಜಯನ ಮ್ಯಾಟರ್ ಅಂತ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ನಂಗೆ ಭಯ ಆಗ್ತಿದೆ… ನಾನು ಮಕ್ಕಳಿಗೆ ಏನೂ ಮಾಡಿಲ್ಲ”: ಭಾವುಕರಾದ ಕ್ರೇಜಿಸ್ಟಾರ್ ಹೀಗೆ ಹೇಳಿದ್ದೇಕೆ?


ಹೌದು ಡಾಲಿ ಎಂಬ ಅದ್ಭುತ ಪ್ರತಿಭೆ ಸ್ಯಾಂಡಲ್ ವುಡ್ ಸಮುದ್ರಕ್ಕೆ ಹಾರಿ ಆಗಿತ್ತು. ಡೈರೆಕ್ಟರ್ ಸ್ಪೆಷಲ್ ಅನ್ನೋ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಾಗಿತ್ತು. ಬಣ್ಣ ಅನ್ನೋದು ಅಂದುಕೊಂಡಂತೆ ಹೊಟ್ಟೆ ತುಂಬಿಸೋದಿಲ್ಲ. ಬಹಳಷ್ಟು ಪರಿಶ್ರಮದ ಬಳಿಕ ಸಿಕ್ಕ ಆ ಒಂದು ಸಿನಿಮಾ ಧನಂಜಯ್ ಹೆಸರನ್ನ ಮತ್ತೇ ಎಲ್ಲೆಡೆ ಪಸರಿಸಿಬಿಟ್ಟಿತು. ಅದುವೇ ಟಗರು.


ಟಗರು ಸಿನಿಮಾದಲ್ಲಿ ಡಾಲಿ ಎಂಬ ಖಳನಾಯಕನ ಪಾತ್ರದಲ್ಲಿ ಮಿಂಚಿದ ಧನಂಜಯ್, ಚಿತ್ರರಂಗದಲ್ಲಿ ಕೊನೆಗೂ ತಮ್ಮ ಸ್ಥಾನವನ್ನ ಭದ್ರ ಮಾಡಿಳ್ಳೋದ್ರಾ ಜೊತೆಗೆ ಜನಮನ ಗೆದ್ದುಬಿಟ್ರು. ಅಲ್ಲಿಂದ ಡಾಲಿ ಜರ್ನಿ ಅದ್ಭುತ ಎಂಬಂತೆ ಸಾಗಿತು. ಸಾಲು ಸಾಲು ಸಿನಿಮಾಗಳಲ್ಲಿ ನಟನೆ ಮಾಡಿ ಪರಭಾಷಗಳಿಗೂ ಡಾಲಿಯ ಘಮಲು ಹರಡಿತು. ಅವಾರ್ಡ್ ಗಳ ಮೇಲೆ ಅವಾರ್ಡ್ ಗಳನ್ನ ಪಡೆದುಕೊಂಡು ಇವತ್ತು ಯಶಸ್ಸು ಅನ್ನೋದನ್ನ ಬೆನ್ನಿಗೆ ಕಟ್ಟಿಕೊಂಡೆ ತಿರುಗುತ್ತಿದ್ದಾರೆ.


ಬಡವ ರಾಸ್ಕಲ್ ಅನ್ನೋ ಸಿನಿಮಾದ ನಿರ್ಮಾಣವನ್ನ ತಾವೇ ಮಾಡಿ ಅದರಲ್ಲೂ ಬಹುದೊಡ್ಡ ಜಯಗಳಿಸಿದರು. ಇದೀಗ ಬೆಂಗಳೂರಿನ ಭೂಗತ ದೊರೆ ಎಂಪಿ ಜಯರಾಜ್ ಅವರ ಜೀವನದ ಕಥೆ ‘ಹೆಡ್ ಬುಷ್’ ಅನ್ನೋ ಟೈಟಲ್ ನಲ್ಲಿ ಇದೇ ಅಕ್ಟೋಬರ್ 21ಕ್ಕೆ ರಿಲೀಸ್ ಆಗುತ್ತಿದೆ. ಇದಕ್ಕೆ ಕೋಟಿ ಕೋಟಿ ಬಂಡವಾಳ ಹೂಡಿರೋ ಡಾಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.


ಸಿನಿಮಾದಲ್ಲಿ ತಾವೇ ಜಯರಾಜ್ ಪಾತ್ರದಲ್ಲಿ ಶೈನ್ ಆಗಲು ಮುಂದಾಗಿದ್ದಾರೆ. ಅಭಿಮಾನಿಗಳು ಕೂಡ ದೀಪಾವಳಿ ಹಬ್ಬದ ಮುಂಚಿತವಾಗಿ ‘ಹೆಡ್ ಬುಷ್’ ಸಿನಿಮಾ ನೋಡಿ ಭರ್ಜರಿ ಪಟಾಕಿ ಹೊಡೆಯಲು ಸಿದ್ಧವಾಗಿದ್ದಾರೆ. ಡಾಲಿಯ ಈ ಸಿನಿಮಾ ಜರ್ನಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಅನ್ನೋದೇ ಜೀ ಕನ್ನಡ ನ್ಯೂಸ್ ಆಶಯ.


ಇದನ್ನೂ ಓದಿ: ಸಲ್ಮಾನ್‌ ಖಾನ್‌ಗೆ ತೆಲುಗು ಡೈಲಾಗ್‌ ಹೇಳಿಕೊಟ್ಟ ಕನ್ನಡತಿ ರಶ್ಮಿಕಾ ಮಂದಣ್ಣ...!


ಇದೀಗ ಸಿನಿಮಾನೇ ಉಸಿರು ಅಂತ ಬದುಕುತ್ತಿರುವ ಡಾಲಿಯ ಹೆಡ್ ಬುಷ್ ಸಿನಿಮಾಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಡೋದು ಪಕ್ಕಾ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.