“ನಂಗೆ ಭಯ ಆಗ್ತಿದೆ… ನಾನು ಮಕ್ಕಳಿಗೆ ಏನೂ ಮಾಡಿಲ್ಲ”: ಭಾವುಕರಾದ ಕ್ರೇಜಿಸ್ಟಾರ್ ಹೀಗೆ ಹೇಳಿದ್ದೇಕೆ?

ಆದ್ರೆ ಇದೀಗ ಅದು ನಿಜವಾಗಿದೆ. ತಮ್ಮ ಮನಸ್ಸಿನ ಒಳಗಿನ ನೂರು ನೋವನ್ನ ಜೀ ಕನ್ನಡ  ವಾಹಿನಿಯ ರಿಯಾಲಿಟಿ ಶೋನಲ್ಲಿ ಹೊರಹಾಕಿದ್ದಾರೆ. ರವಿಚಂದ್ರನ್ ಅವರಿಗೆ ಫೇಮ್-ನೇಮ್ ಕೊಟ್ಟಿದ್ದ ಪ್ರೇಮಲೋಕ ಸಿನಿಮಾದ ‘ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು’ ಎಂಬ ಹಾಡನ್ನು ಸ್ಪರ್ಧಾಳುಗಳು ಹಾಡುತ್ತಿದ್ದಾರೆ.

Written by - YASHODHA POOJARI | Edited by - Bhavishya Shetty | Last Updated : Oct 9, 2022, 07:31 PM IST
    • ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಮನರಂಜಿಸಿದ ಅದ್ಭುತ ನಟ ಅಂದ್ರೆ ರವಿಮಾಮ
    • ಯಾಕೋ ವೃತ್ತಿಜೀವನದಲ್ಲಿ ಸ್ವಲ್ಪ ನೊಂದಿದ್ದಾರೆ ಎಂಬುದಾಗಿ ಕೆಲ ಮಾಹಿತಿ ಹರಡಿತ್ತು
    • ಮನಸ್ಸಿನ ಒಳಗಿನ ನೂರು ನೋವನ್ನ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋನಲ್ಲಿ ಹೊರಹಾಕಿದ್ದಾರೆ
“ನಂಗೆ ಭಯ ಆಗ್ತಿದೆ… ನಾನು ಮಕ್ಕಳಿಗೆ ಏನೂ ಮಾಡಿಲ್ಲ”: ಭಾವುಕರಾದ ಕ್ರೇಜಿಸ್ಟಾರ್ ಹೀಗೆ ಹೇಳಿದ್ದೇಕೆ?  title=
Ravichandran

ಕ್ರೇಜಿಸ್ಟಾರ್ ರವಿಚಂದ್ರನ್.. ಸಿನಿಮಾ ಲೋಕದ ಕನಸುಗಾರ.. ಇವರ ಹಾಗೇ ಕನಸು ಕಾಣಲು ಯಾರಿಂದಲೂ ಸಾಧ್ಯವೇ ಇಲ್ಲಬಿಡಿ. ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಮನರಂಜಿಸಿದ ಅದ್ಭುತ ನಟ ಅಂದ್ರೆ ರವಿಮಾಮ. ಸಿನಿಮಾದಲ್ಲಿ ತಮ್ಮದೇ ಆದ ಒಂದು ಕಲ್ಪನಾ ಲೋಕವನ್ನೇ ಸೃಷ್ಟಿಸಿ ಮನಸ್ಸಿಗೆ ಹಿತವೆನಿಸುವಂತಹ ಹಾಡುಗಳನ್ನು ಕೊಟ್ಟ ರವಿಮಾಮ ಇತ್ತೀಚಿಗೆ ಯಾಕೋ ವೃತ್ತಿಜೀವನದಲ್ಲಿ ಸ್ವಲ್ಪ ನೊಂದಿದ್ದಾರೆ ಅನ್ನೋ ಮಾತು ಆಗಾಗ ಕೇಳಿಬಂದಿತ್ತು.

ಇದನ್ನೂ ಓದಿ: ʼನಾ ಕಂಡ ಅದ್ಭುತ ನಾಯಕನ ಅದ್ಭುತ ಪಯಣʼ : ʼಗಂಧದಗುಡಿʼ ನೋಡಿ ಭಾವುಕರಾದ ರಿಷಬ್‌ ಶೆಟ್ಟಿ

ಆದ್ರೆ ಇದೀಗ ಅದು ನಿಜವಾಗಿದೆ. ತಮ್ಮ ಮನಸ್ಸಿನ ಒಳಗಿನ ನೂರು ನೋವನ್ನ ಜೀ ಕನ್ನಡ  ವಾಹಿನಿಯ ರಿಯಾಲಿಟಿ ಶೋನಲ್ಲಿ ಹೊರಹಾಕಿದ್ದಾರೆ. ರವಿಚಂದ್ರನ್ ಅವರಿಗೆ ಫೇಮ್-ನೇಮ್ ಕೊಟ್ಟಿದ್ದ ಪ್ರೇಮಲೋಕ ಸಿನಿಮಾದ ‘ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು’ ಎಂಬ ಹಾಡನ್ನು ಸ್ಪರ್ಧಾಳುಗಳು ಹಾಡುತ್ತಿದ್ದಾರೆ. ಇದನ್ನ ಕೇಳಿದ ರವಿ ಮಾಮ ಯಾಕೋ ತುಂಬಾ ಭಾವುಕರಾಗಿ ಮಾತುಗಳನ್ನ ಹೊರಹಾಕಿದ್ದಾರೆ. ನಾನು ಬೆಳೆದ ಮನೆ ಖಾಲಿ ಮಾಡಿದ್ದು ನಿಜ ಅನ್ನೋದನ್ನ ಇಲ್ಲಿ ಒಪ್ಪಿಕೊಂಡಿದ್ದಾರೆ. ನನ್ನ ಸಾಲು ಸಾಲು ಸಿನಿಮಾಗಳು ಸೋಲುತ್ತಿವೆ. ಇದು ನಂಗೆ ತುಂಬಾ ನೋವಾಗುತ್ತೆ. ನಾನು ಬೇಕಾದಷ್ಟು ಹಣ ಮಾಡಿದ್ದೀನಿ. ಆದ್ರೆ ಆ ಹಣವನ್ನ ಮತ್ತೇ ಸಿನಿಮಾಗಳಿಗೆ ಹಾಕಿದ್ದೀನಿ. ಯಾಕೆ ಜನ ನನ್ನ ಸಿನಿಮಾ ಒಪ್ಪುತ್ತಿಲ್ಲ?

ನಾನು ಒಂದು ತಿಂಗಳಿನಿಂದ ಬದಲಾಗಿದ್ದೀನಿ. ಬದಲಾಗಲೇಬೇಕು ಅಂತ ಬಯಸಿದ್ದೀನಿ. ಮತ್ತೇ ನೀವೆಲ್ಲಾ ಥಿಯೇಟರ್ ಗೆ ಬಂದು ಸಿನಿಮಾ ಒಪ್ಪಿಕೊಳ್ಳೋ ಹಾಗೇ ಮತ್ತೇ ಸಿನಿಮಾ ಮಾಡ್ತೀನಿ ಅಂತ ಜನತೆ ಮುಂದೆ ಪ್ರಮಾಣ ಮಾಡಿದರು. ನಾನು ಬೆಳೆಸಿದ ಹುಡುಗ ನಂಗೆ ಈಗ ಹಣ ಹಾಕಿ ಸಿನಿಮಾ ಮಾಡ್ತಾನೆ ಅಂದ್ರೆ ನಾನು ಇಂತಹ ಎಷ್ಟೋ ಹುಡುಗರನ್ನ ಬೆಳೆಸಿದ್ದೀನಿ ಅನ್ನೋ ಖುಷಿಯಿದೆ ಎಂದು ಮನದಾಳದ ಮಾತನ್ನು ಹಂಚಿಕೊಂಡರು.

ರವಿಚಂದ್ರನ್ ಭಾವುಕರಾಗಿ ಮಾತನಾಡಿರುವ ವಿಡಿಯೋ ಲಿಂಕ್ ಇಲ್ಲಿದೆ: https://fb.watch/g2yOtJscUe/

ನಂಗೆ ಈಗ ಭಯ ಆಗ್ತಾ ಇದೆ. ನಾನು ನನ್ನ ಮಕ್ಕಳ ಭವಿಷ್ಯಕ್ಕಾಗಿ ಏನೂ ಮಾಡಿಲ್ಲ. ಆ ನೋವು ನನ್ನ ಆಗಾಗ ಕಾಡುತ್ತಿದೆ. ಮನಸ್ಸು ಮಾಡಿದ್ರೆ ನಾನು ಆಗಲೇ ಜಾಗ ಮಾಡಿಕೊಂಡು ದುಡ್ಡು ಮಾಡಬಹುದಿತ್ತು. ಆದ್ರೆ ನಾನು ಮಾಡಿಲ್ಲ. ನಾನು ಇರೋದೇ ಸಿನಿಮಾಗಾಗಿ, ನಿಮ್ಮನ್ನ ರಂಜಿಸಲು ಅನ್ನೋ ಮಾತು ಕೇಳಿ ಪ್ರತಿಯೊಬ್ಬರೂ ಭಾವುಕರಾದರು.

ಇದನ್ನೂ ಓದಿ: ವಿಜಯ್‌ ಸನ್‌ಗ್ಲಾಸ್‌ ರಶ್ಮಿಕಾ ಕಣ್ಣಲ್ಲಿ : ಇಬ್ಬರೂ ಮಾಲ್ಡೀವ್ಸ್‌ನಲ್ಲಿ ಇರೋದು ನಿಜನಾ..!

ಅಭಿಮಾನಿಗಳು ಇನ್ನಾದ್ರೂ ಕ್ರೇಜಿಸ್ಟಾರ್ ಸಿನಿಮಾನ ನಮ್ಮ ಸಿನಿಮಾ ಅಂತ ಭಾವಿಸಿ ದಯವಿಟ್ಟು ಥಿಯೇಟರ್ ಗೆ ಬಂದು ಸಿನಿಮಾ ನೋಡಿ. ನನಗೆ ಯಾರು ಹಾರ ಹಾಕೋದು ಬೇಡ. ಥೀಯೇಟರ್ ಗೆ ಬಂದು ಸಿನಿಮಾ ನೋಡಿದ್ರೆ ಸಾಕು ಅಂದಿದ್ದಾರೆ ರವಿಮಾಮ. ನೀವು ಚಿತ್ರಮಂದಿರಕ್ಕೆ ಬಂದಿಲ್ಲ ಅಂದ್ರೆ ನಂಗೆ ಕಪಾಳಕ್ಕೆ ಹೊಡೆದಂತೆ ಫೀಲ್ ಆಗುತ್ತೆ ಅನ್ನೋ ನೋವನ್ನ ಹೊರಹಾಕಿದ್ರು ರವಿ ಸರ್.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News