ಮಿಕ್ಸಿಗೆ ಇರುವೆ ಹಾಕಿ, ಚಟ್ನಿ ಮಾಡಿ ತಿಂದು ವಿಡಿಯೋ ಹಂಚಿಕೊಂಡ ಡ್ಯಾನ್ಸರ್ ಕಿಶನ್..!
Dancer Kishan : ರಿಯಾಲಿಟಿ ಶೋಗಳ ಮೂಲಕ ಕಿಶನ್ ಈಗಾಗಲೇ ಕರುನಾಡಿನ ಜನರಿಗೆ ಚಿರಪರಿಚಿತರಾಗಿದ್ದಾರೆ. ಅಲ್ಲದೆ, ಹಿಂದಿ ಕಿರುತೆರೆಗೂ ಎಂಟ್ರಿ ಕೊಟ್ಟು ಅಲ್ಲಿಯೂ ಸಹ ಮಿಂಚಿದ್ದರು. ಸದ್ಯ ಇರುವೆ ಚಟ್ನಿ ಮಾಡಿ ತಿನ್ನುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
Red ant chutney : ಬಿಗ್‌ಬಾಸ್ ಮತ್ತು ಡಾನ್ಸ್ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ಮೇಲೆ ಮಿಂಚಿದ್ದ ಕಿಶನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ನಟ ನಟಿಯರ ಜೊತೆ ಡಾನ್ಸ್ ಮಾಡಿರುವ ರೀಲ್ಸ್ ಶೇರ್ ಮಾಡಿ ಸುದ್ದಿಯಲ್ಲಿರುತ್ತಾರೆ. ಇದೀಗ ಕಿಶನ್ ಇರುವೆ ಚಟ್ನಿ ತಿಂದು ವೈರಲ್ ಆಗಿದ್ದಾರೆ.
ಹೌದು.. ರಿಯಾಲಿಟಿ ಶೋಗಳ ಮೂಲಕ ಕಿಶನ್ ಈಗಾಗಲೇ ಕರುನಾಡಿನ ಜನರಿಗೆ ಚಿರಪರಿಚಿತರಾಗಿದ್ದಾರೆ. ಅಲ್ಲದೆ, ಹಿಂದಿ ಕಿರುತೆರೆಗೂ ಎಂಟ್ರಿ ಕೊಟ್ಟು ಅಲ್ಲಿಯೂ ಸಹ ಮಿಂಚಿದ್ದರು. ʼಡಾನ್ಸ್ ದಿವಾನೆʼ ವಿನ್ನರ್ ಕೂಡ ಆಗಿದ್ದರು. ಸದ್ಯ ಈ ಚಿಕ್ಕಮಗಳೂರು ಹುಡುಗ ಇರುವೆ ಮೂಲಕ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: ಮದುವೆಯಾಗಿ ಮಗುವಿದ್ದರೂ ತೆಲುಗು ಯುವ ಡೈರೆಕ್ಟರ್ ಜೊತೆ ನಟಿ ಜ್ಯೋತಿ ಡೇಟಿಂಗ್.! ಫೋಟೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಕಿಶನ್ ಇತ್ತೀಚೆಗೆ ಇರುವೆ ಚಟ್ನಿ ಮಾಡಿಕೊಂಡು ತಿಂದ ವಿಡಿಯೋ ಒಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೆಂಪು ಇರುವೆ ಚಟ್ನಿಯನ್ನು ಮಾಡುವ ವಿಧಾನದ ರೀಲ್‌ನಲ್ಲಿ ಇರುವೆಗಳನ್ನು ಹಿಡಿದು ತಂದು ಮಿಕ್ಸಿಗೆ ಹಾಕಿ ಚಟ್ನಿ ಮಾಡಿ ತಿನ್ನುವುವ ದೃಶ್ಯಗಳಿವೆ.
ಅಲ್ಲದೆ, ಚಗಳಿ ಇರುವೆ ಚಟ್ನಿಯ ಮಹತ್ವವನ್ನೂ ಸಹ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಚಟ್ನಿಯು ಅತ್ಯುತ್ತಮ ಪ್ರಮಾಣದ ಸತು, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಅರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ, ಕೆಮ್ಮು, ಜ್ವರ, ಉಸಿರಾಟದ ತೊಂದರೆ, ಶೀತ, ಆಯಾಸ ಮತ್ತು ಹಲವಾರು ಇತರ ಕಾಯಿಲೆಗಳಿಗೆ ಉತ್ತಮ ಪರಿಹಾರವಾಗಿದೆ ಎಂದು ನಂಬಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗೂಗಲ್ ಸರ್ಚ್ ಲೀಸ್ಟ್ ನಲ್ಲಿ ಅಬ್ಬರಿಸುತ್ತಿರೋ ರಾಜ್ ಬಿ ಶೆಟ್ಟಿ ನಟನೆಯ ʼಟೋಬಿʼ
ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಚಗಳಿ ಇರುವೆ ಚಟ್ನಿಯನ್ನು ಮಾಡಲಾಗುತ್ತದೆ. ಈ ಕುರಿತು ತಿಳಿಯದ ಅನೇಕ ಜನರು ಕಿಶನ್ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಮಲೆನಾಡು ಭಾಗದ ಕಿಶನ್ ಫ್ಯಾನ್ಸ್‌ಗಳು ಈ ಕುರಿತು ತಿಳುವಳಿಕೆ ನೀಡುವ ಕೆಲಸ ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.