ಸಾಗರದಾಚೆಗೂ ಸದ್ದು ಮಾಡಿದ ʼಡೇರ್‌ಡೆವಿಲ್ ಮುಸ್ತಫಾʼ
Daredevil Musthafa : ಕನ್ನಡದ ಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಕಿರುಕಥೆಗಳ ಆಧಾರಿತ ಸಿನಿಮಾ ʼಡೇರ್‌ಡೆವಿಲ್ ಮುಸ್ತಫಾʼ. ಈ ಸಿನಿಮಾ ಕಳೆದವಾರ ಬಿಡುಗಡೆಗೊಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಅದೇ ರೀತಿ 2ನೇ ವಾರವೂ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ.
Sandalwood : ಈ ʼಡೇರ್‌ಡೆವಿಲ್ ಮುಸ್ತಫಾʼ ಸಿನಿಮಾ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲೆ ಸಿನಿಮಾವನ್ನು ಚಿತ್ರತಂಡ ಸಾಗರಾಚೆ ಬಿಡುಗಡೆ ಮಾಡುವಲ್ಲಿ ಗೆಲುವು ಸಾಧಸಿದೆ. ಈ ಸಿನಿಮಾ ಬೆಂಗಳೂರು, ಮೈಸೂರು, ತುಮಕೂರು ಕುಂದಾಪುರ, ಸೇರಿದಂತೆ ರಾಜ್ಯದ ಹಲವಡೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ನೋಡಿದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿದ್ದಾರೆ.
ಇನ್ನೂ ಈ ಸಿನಿಮಾವನ್ನು ವಿದೇಶಲ್ಲಿ ನೆಲೆಸಿರುವ ಕನ್ನಡಿಗರು, ಹೆಚ್ಚಾಗಿ ತೇಜಸ್ವಿ ಅವರ ಅಭಿಮಾನಿಗಳು ಸಾಗರದಾಚೆಗೂ ಬಿಡುಗಡೆ ಮಾಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾ ಅಮೆರಿಕಾ, ಸ್ವೀಡನ್, ನೆದರ್‌ಲ್ಯಾಂಡ್ಸ್ ದೇಶಗಳ ಪ್ರಮುಖ ನಗರಗಳಲ್ಲಿ ಮೇ 26ರಿಂದ ಪ್ರದರ್ಶನ ಕಾಣುತ್ತಿದೆ.
ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದ ʼಹೊಂದಿಸಿ ಬರೆಯಿರಿʼ ಬರಲಿದೆಯಾ ಪಾರ್ಟ್ 2?
ಈ ಇರಿಸು ಮುರಿಸು ಕಥೆಯಲ್ಲಿ ಹಿರಿಯ ನಟ ಮಂಡ್ಯ ರಮೇಶ್ ಅಬಚೂರು ಕಾಲೇಜಿನ ಪ್ರಾಂಶುಪಾಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಗಭೂಷನ್, ಪೂರ್ಣಚಂದ್ರ ಮೈಸೂರು, ಸುಂದರ್ ವೀಣಾ ಮುಂದಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯುವ ಪ್ರತಿಭೆ ಶಿಶಿರ್ ಬೈಕಾಡಿ ಮುಸ್ತಫಾ ಪಾತ್ರದಲ್ಲಿ ಗಮನ ಸೆಳೆದಿದ್ದು, ಸಾಕಷ್ಟು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಈ ಚಿತ್ರದ ಸಂಗೀತವನ್ನು ನವನೀತ್ ಅವರು ನೀಡಿದ್ದು, ಈ ಕಲಾವಿದನ ಕಥಾಹಂದರದ ಚಿತ್ರಕ್ಕೆ ನಟ, ಮತ್ತು ಸಾಹಿತ್ಯಸಕ್ತ ಡಾಲಿ ಧನಂಜಯ್ ಸಾತ್ ನೀಡಿದ್ದಾರೆ ಜೊತೆಗೆ ತಮ್ಮ ಒಡೆತನದ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ಸಿನಿಮಾವನ್ನು ಪ್ರಸ್ತುತಪಡಿಸಿದ್ದಾರೆ.
ಇದನ್ನೂ ಓದಿ-Janhvi Kapoor: ಸಮುದ್ರದ ಮಧ್ಯದಲ್ಲಿ ಮುತ್ತಿನಂತೆ ಕಂಗೊಳಿಸಿದ ಜಾನ್ವಿ