ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್‌ ಪಡೆದ ʼಹೊಂದಿಸಿ ಬರೆಯಿರಿʼ ಬರಲಿದೆಯಾ ಪಾರ್ಟ್‌ 2?

Hondisi Bareyiri : ರಾಮೇನಹಳ್ಳಿ ಜಗನ್ನಾಥ್‌ ನಿರ್ದೇನದಡಿಯಲ್ಲಿ ಮೂಡಿಬಂದ ಭಾವನಾತ್ಮಕ ಸಿನಿಮಾ ʼಹೊಂದಿಸಿ ಬರೆಯಿರಿʼ. ಈ ಸಿನಿಮಾ ಫೆಬ್ರುವರಿ 10ರಂದು ತೆರೆಕಂಡಿತು ಮತ್ತು ಒಳ್ಳೆಯ ಕಲೆಕ್ಷನ್‌ ಕೂಡಾ ಮಾಡಿತ್ತು. ಆದಾಗ್ಯೂ ಈ ಯುತ್‌ ಸಿನಿಮಾ ಏಪ್ರಿಲ್‌ 1ರಂದು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಪ್ರದರ್ಶನಗೊಂಡು ಭರ್ಜರಿ ರೆಸ್ಪಾನ್ಸ್‌ ಪಡದುಕೊಂಡಿತ್ತು.   

Written by - Zee Kannada News Desk | Last Updated : May 26, 2023, 12:08 PM IST
  • ರಾಮೇನಹಳ್ಳಿ ಜಗನ್ನಾಥ್‌ ನಿರ್ದೇನದಡಿಯಲ್ಲಿ ಮೂಡಿಬಂದ ಭಾವನಾತ್ಮಕ ಸಿನಿಮಾ ʼಹೊಂದಿಸಿ ಬರೆಯಿರಿʼ
  • ತನ್ನ ಆಕರ್ಷಕ ಕಥಾಹಂದರದೊಂದಿಗೆ ಗಮನಾರ್ಹ ಸಾಧನೆ ಮಾಡಿದೆ.
  • ಸದ್ಯದ ಪ್ರಾಜೆಕ್ಟ್‌ಗಳು ಮುಗಿದ ಮೇಲೆ ಚಿತ್ರದ ಸಿಕ್ವೆಲ್‌ನ್ನು ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ.
ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್‌ ಪಡೆದ ʼಹೊಂದಿಸಿ ಬರೆಯಿರಿʼ ಬರಲಿದೆಯಾ ಪಾರ್ಟ್‌ 2?

Sandalwood : ಈ ʼಹೊಂದಿಸಿ ಬರೆಯಿರಿʼ ಸಿನಿಮಾ ಕ್ರಿಕೆಟ್‌ ಸೀಸನ್‌ ಹಾಗೂ ಕರ್ನಾಟಕ ಚುನಾವಣೆಗಳ ಸಂದರ್ಭದಲ್ಲಿ ಬಿಡುಗಡೆಯಾದರೂ ಸಹ ತನ್ನ ಆಕರ್ಷಕ ಕಥಾಹಂದರದೊಂದಿಗೆ 50 ಮಿಲಿಯನ್‌ ನಿಮಿಷಗಳ ವೀಕ್ಷಕರನ್ನು ಗಳಿಸಿ ಗಮನಾರ್ಹ ಸಾಧನೆ ಮಾಡಿದೆ. 

ಈ ಕುರಿತು ನಿರ್ದೇಶಕ ಜಗನ್ನಾಥ್‌ ಅವರು ಹರುಷವನ್ನು ವ್ಯಕ್ತ ಪಡಿಸಿದ್ದು, ʼಭಾವನೆಗಳನ್ನು ಪ್ರಚೋದಿಸುವ ಸ್ಕ್ರಿಪ್ಟ್‌ನ ಸಾಮರ್ಥ್ಯವು ಪ್ರೇಕ್ಷಕರ ಮನ ಮುಟ್ಟುವಂತೆ ಮಾಡಿತು. ನಿರ್ದೇಶಕ ಪ್ರೇಮ್‌, ನಟರಾದ ರಕ್ಷಿತಾ ಮತ್ತು ಶ್ರೀನಗರ ಕಿಟ್ಟಿ ಮೆಚ್ಚುಗೆಯ ಮಾತುಗಳೊಂದಿಗೆ ನನ್ನ ಹೃದಯವನ್ನು ತಲುಪಿದ್ದಾರೆ ಮತ್ತು ಚಿತ್ರದ ಶಕ್ತಿಯುತ ಭಾವನಾತ್ಮಕ ಅಂಶದ ಬಗ್ಗೆ ಮಾತನಾಡಿದ್ದಾರೆʼ ಎಂದರು.

ಇದನ್ನೂ ಓದಿ-Viral Video : ಏರ್‌ಪೋರ್ಟ್‌ನಲ್ಲಿ ಪುಟ್ಟ ಅಭಿಮಾನಿಯನ್ನು ಅಪ್ಪಿಕೊಂಡ ಸಲ್ಮಾನ್‌ ಖಾನ್‌

ಈ ಸಿನಿಮಾಗೆ ಸಿಕ್ಕಿರುವ ಅಪಾರ ರೆಸ್ಪಾನ್ಸ್‌ನಿಂದಾಗಿ ನಿರ್ದೇಶಕರು ಚಿತ್ರದ ಸಿಕ್ವೆಲ್‌ಗಾಗಿ ಚಿಂತಿಸುವ ಸಮಯ ಬಂದಿದೆ. ಆದಗ್ಯೂ ಅವರು ತಮ್ಮ ಸದ್ಯದ ಪ್ರಾಜೆಕ್ಟ್‌ಗಳು ಮುಗಿದ ಮೇಲೆ ಚಿತ್ರದ ಸಿಕ್ವೆಲ್‌ನ್ನು ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ.

ಈ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಶ್ರೀ, ನವೀನ್‌ ಶಂಕರ್‌, ಪ್ರವೀಣ್‌ ತೇಜ್‌, ಅನಿರುದ್ಧ್‌ ಆಚಾರ್ಯ, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್‌ ಮತ್ತು ಇತತರು ಪ್ರಮುಖ ಪಾತ್ರದಲ್ಲಿ ನಟಡಿಸಿದ್ದಾರೆ. 

ಇದನ್ನೂ ಓದಿ-Janhvi Kapoor: ಸಮುದ್ರದ ಮಧ್ಯದಲ್ಲಿ ಮುತ್ತಿನಂತೆ ಕಂಗೊಳಿಸಿದ ಜಾನ್ವಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

More Stories

Trending News