Darshan On Kaatera : ನಟ ದರ್ಶನ್​ ಅಭಿನಯದ ಕಾಟೇರ ಸಿನಿಮಾ ಜನರ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ಸಿನಿಮಾದ ಶೂಟಿಂಗ್‌ ಒಂದು ಹಂತದ ವರೆಗೆ ಮುಗಿದಿದ್ದು, ಡಬ್ಬಿಂಗ್ ಕೂಡ ಆಗಿದೆ. ಮೂರು ಸಾಂಗ್ ಬಾಕಿ ಇದೆ. ಸಿನಿಮಾ ವಿಚಾರವಾಗಿ ಇಂದು ಕಾಟೇರ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. 


COMMERCIAL BREAK
SCROLL TO CONTINUE READING

ಕಾಟೇರ ಸಿನಿಮಾದ ಬಗ್ಗೆ ಮಾಟತನಾಡಿದ ದರ್ಶನ್‌, ಸಿನಿ ರಂಗದಲ್ಲಿ ತಮ್ಮ ಆರಂಭಿಕ ದಿನಗಳನ್ನು ಸಹ ನೆನೆದರು. ಕಾಟೇರ ಏನು ಅಂತ ಎಲ್ರೂ ಕೇಳ್ತಾ ಇದ್ರು. ಕಾಟೇರ 70 ರ ದಶಕದಲ್ಲಿ ನಡೆದ ಕತೆಯನ್ನು ಹೇಳುತ್ತದೆ. ಈಗಾಗಲೇ ಡಬ್ಬಿಂಗ್ ಮುಗಿದಿದೆ ಮೂರು ಸಾಂಗ್ ಬಾಕಿ ಇದೆ. ಕುಮಾರ್ ಗೋವಿಂದ್ ಸಿನಿಮಾ ಮಾಡುವಾಗ ನಾನು ಲೈಟ್ ಬಾಯ್ ಕೆಲಸ ಮಾಡಿದ್ದೇನೆ ಎಂದು ದರ್ಶನ್‌ ಹೇಳಿದರು. 


ಇದನ್ನೂ ಓದಿ: ಮೈ ಚಳಿ ಬಿಟ್ಟು ಆಲಿಯಾ ಭಟ್‌ - ರಣವೀರ್​ ಸಿಂಗ್ ​ರೊಮ್ಯಾನ್ಸ್.. ವೈರಲ್‌ ಆಯ್ತು ವಿಡಿಯೋ!


ಇಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಚಿಕ್ಕವರಲ್ಲ. ಎಲ್ಲರಿಗಿಂತ, ಎಲ್ಲಕ್ಕಿಂತ ದೊಡ್ಡದು ಸಿನಿಮಾ. ಸಿನಿಮಾ ಇದ್ದರೇನೆ ನಾವೆಲ್ಲ. ನನ್ನ ಡೇಟ್ಸ್ 85 ದಿನ ಅಷ್ಟೇ.. ಇವತ್ತು 71ನೇ ದಿನ. ವಿನೋದ್ ಆಳ್ವಾ ಸರ್ ಜೊತೆ ಇದು ನನ್ನ ಮೊದಲ ಸಿನಿಮಾ. ಅವರ ಸಿನಿಮಾದಲ್ಲಿ ನಾನು ಲೈಟ್ ಬಾಯ್ ಆಗಿದ್ದೆ. ಜಗಪತಿ ಬಾಬು ತುಂಬಾ ಮೂಡಿ.. ರಾಬರ್ಟ್ ಅಲ್ಲಿ ಆಗಲಿ, ಈ‌ ಸಿನಿಮಾ ಆಗಲಿ.. ಮನೆಯಿಂದ ಅವರೇ ಅಡುಗೆ ಮಾಡಿಸಿ ತಂದಿದ್ರು. ಕ್ಯಾರವ್ಯಾನ್ ಗೆ ಹೋಗದೆ ಅಲ್ಲೇ ಚೇರ್ ಹಾಕಿ ಕೂರ್ತಿದ್ವಿ. ಎಲ್ಲರ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು ಎಂದು ದರ್ಶನ್‌ ಹೇಳಿದರು. 


ರಚಿತಾ ಅವರ ಸಾಲಿಗೆ ಆರಾಧನಾ ನಿಲ್ಲುತ್ತಾರೆ. ಅವರು ಒನ್ ಟೇಕ್ ಆರ್ಟಿಸ್ಟ್. ಮಾಲಾಶ್ರೀ ಅವರ ಬಗ್ಗೆ ನಾವು ಮಾತಾಡೋಕೆ ಆಗುತ್ತಾ..? ಅವರ ಮುಂದೆ ಯಾರೇ ನಿಂತರೂ ಬಡಿದು ಬಾಯಿಗೆ ಹಾಕಿಕೊಳ್ತಿದ್ರು ಎಂದರು.


ನನ್ನ ಮಗಳು ಫಸ್ಟ್ ಟೈಮ್ ಪ್ರೆಸ್‌ ಮೀಟ್‌ಗೆ ಕುಳಿತಿರೋದು ಹೆಮ್ಮೆ ಆಗ್ತಿದೆ. ನನ್ನ ಮಗಳಿಗೆ ರಾಧನಾ ಹೆಸರಿತ್ತು. ಇನ್ಮೇಲೆ ಆರಾಧನಾ ಹೆಸರಿಂದ ಚಿತ್ರರಂಗಕ್ಕೆ ಬರುತ್ತಾರೆ. ನನ್ನ ಮಗಳು ತುಂಬಾ ಕಂಫರ್ಟ್ ಯಿಂದ ಶೂಟಿಂಗ್ ಗೆ ಭಾಗಿಯಾಗಿದ್ದಾರೆ ಎಂದು ಹಿರಿಯ ನಟಿ ಮಾಲಶ್ರೀ ಹೇಳಿದರು. 


ಇದನ್ನೂ ಓದಿ: Jawan OTT Release: ಜವಾನ್ ಒಟಿಟಿ ಬಿಡುಗಡೆ ಎಲ್ಲಿ, ಯಾವಾಗ?


ಹಿರಿಯ ನಟ ಅವಿನಾಶ್ ಮಾತನಾಡಿ, ಸೂಪರ್ ಸ್ಟಾರ್ ಗೆ ಸ್ಕ್ರಿಪ್ಟ್ ಮಾಡೋದು ತುಂಬಾ ಕಷ್ಟ. ಆದರೆ ಈ ಸಿನಿನಾ ಕಥೆ ತುಂಬಾ ಚೆನ್ನಾಗಿದೆ. ನಾನು ಖುಷಿಯಿಂದ ಈ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದೀನಿ. ಮಾಲಾಶ್ರೀ ಅಂತ ಹೀರೋಯಿನ್ ಇನ್ನೊಬ್ಬರು ಸಿಗಲ್ಲ. ಅವರು ಮಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದರ್ಶನ್ ಜೊತೆ ಸಾಕಷ್ಟು ಸಿನಿಮಾ ಮಾಡಿದ್ದೀನಿ. ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದರು.


ನಾನೇನಾ ಅಂತ ಶಾಕ್ ಆಗ್ತಿದೆ. ದರ್ಶನ್ ಅವರು ಶೂಟಿಂಗ್‌ನಲ್ಲಿ ಚೆನ್ನಾಗಿ ನೋಡಿಕೊಂಡ್ರು ಚಾಕಲೇಟ್ ಕೊಡ್ತಿದ್ರು. ತರುಣ್ ಸರ್ ಸಹಾ ನನಗೆ ಎಲ್ಲಾ ರೀತಿಯೂ ಗೈಡ್ ಮಾಡ್ತಿದ್ರು. ಕಾಟೇರ ಸಿನಿಮಾ ಎಲ್ಲಾ ದಿನವನ್ನು ಕಲಿಯೋಕೆ ಚಾನ್ಸ್ ಸಿಕ್ತಿತ್ತು. ಈ ಸಿನಿಮಾ ಮೂಲಕ ಕಾಲಿಡ್ತಿರೋದಕ್ಕೆ ನನಗೆ ಖುಷಿಯಿದೆ. ಈ ಸಿನಿಮಾ ನನಗೆ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಟಿ ಆರಾಧನ ಹೇಳಿದರು.


ದರ್ಶನ್‌ಗೆ ಜೋಡಿಯಾಗಿ ಕಾಟೇರ ಸಿನಿಮಾದಲ್ಲಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್​ ಅಭಿನಯಿಸಿದ್ದಾರೆ. ಶ್ರುತಿ, ಕುಮಾರ್​ ಗೋವಿಂದ್, ಸೇರದಂತೆ ಬಹುದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಕಾಟೇರ ಸಿನಿಮಾವನ್ನು ತರುಣ್​ ಸುಧೀರ್ ನಿರ್ದೇಶಿಸಿದ್ದಾರೆ. ರಾಕ್‌ಲೈನ್‌ ವೆಂಕಟೇಶ್​ ನಿರ್ಮಾಣ ಮಾಡುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.