Darshan Kranti movie : ನಾಳೆ ಬಹುನಿರೀಕ್ಷಿತ ಕ್ರಾಂತಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಟ ದರ್ಶನ್‌ ಅಭಿಮಾನಿಗಳು ಕ್ರಾಂತಿ ಹಬ್ಬ ಆಚರಿಸಲು ಸಿದ್ದರಾಗಿದ್ದಾರೆ. ಇನ್ನು ಆನ್‌ಲೈನ್‌ ಬುಕ್ಕಿಂಗ್‌ನಲ್ಲಿಯೂ ದಚ್ಚು ಸಿನಿಮಾ ಅಬ್ಬರಿಸುತ್ತಿದೆ. ಆದ್ರೆ, ಹೊಸಪೇಟೆಯಲ್ಲಿ ಮಾತ್ರ ಕ್ರಾಂತಿ ಸಿನಿಮಾದ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಸ್ಥಗಿತಗೊಂಡಿದ್ದು, ಡಿಬಾಸ್‌ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿದೆ.
 
ಹೌದು.. ರಾಜ್ಯಾದ್ಯಂತ ಕ್ರಾಂತಿ ಅಬ್ಬರ ಜೋರಾಗಿದೆ. ಚಿತ್ರದ ಅನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ದಾಖಲೆ ಮಟ್ಟದಲ್ಲಿ ಸೇಲ್‌ ಆಗಿವೆ. ಆದ್ರೆ ಹೊಸಪೇಟೆ ನಗರದಲ್ಲಿ ಅನ್‌ಲೈನ್‌ ಬುಕ್ಕಿಂಗ್‌ ಸ್ಥಗಿತವಾಗಿದ್ದು, ದಚ್ಚು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ನಗರದ ಮೀರ್ ಆಲಂ ಚಿತ್ರಮಂದಿರದಲ್ಲಿ ಕ್ರಾಂತಿ ಬಿಡುಗಡೆಯಾಗಲಿದೆ. ಬುಕ್‌ ಮೈ ಶೋನಲ್ಲಿ ಚಿತ್ರದ ಟಿಕೆಟ್‌ ಬುಕ್ಕಿಂಗ್‌ ಲಭ್ಯವಿಲ್ಲ. ಸಂಪರ್ಕ ಸಮಸ್ಯೆ ಕಾರಣ ಮುಂಗಡ ಟಿಕೆಟ್ ಬುಕ್‌ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಈ ಸಮಸ್ಯೆ ಬಗ್ಗೆಹರಿಯುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kisi Ka Bhai Kisi Ki Jaan : ಸಲ್ಲು ಭಾಯ್‌ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟೀಸರ್‌ ಲೀಕ್‌..! ನೋಡಿ


[[{"fid":"280805","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಕ್ರಾಂತಿ ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮದ ವೇಳೆ ಹೊಸಪೇಟೆಯಲ್ಲಿ ನಟ ದರ್ಶನ್‌ ಅವರ ಮೇಲೆ ಚಪ್ಪಲಿ ಏಸೆಯಲಾಗಿತ್ತು. ಅಲ್ಲದೆ, ಕ್ರಾಂತಿ ಸಿನಿಮಾದ ಪೋಸ್ಟರ್‌ ಹರಿದು ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಆನ್‌ಲೈನ್‌ ಟಿಕೆಂಟ್‌ ಬುಕ್ಕಿಂಗ್‌ ಸ್ಥಗಿತಗೊಂಡಿದ್ದು, ಚರ್ಚೆಗೆ ಕಾರಣವಾಗಿದೆ. ಹೊಸಪೇಟೆಯ ಒಂದೇ ಒಂದು ಚಿತ್ರಮಂದಿರದಲ್ಲಿ ಕ್ರಾಂತಿ ಪ್ರದರ್ಶನಗೊಳ್ಳಲಿದೆ.


ಸಾಕಷ್ಟು ಸಮಯದ ನಂತರ ದರ್ಶನ್‌ ಅವರು ತೆರೆಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಕ್ರಾಂತಿ ಟ್ರೇಲರ್‌ ಸಿನಿಮಾದ ಮೇಲಿನ ಕುತೂಹಲಕ್ಕೆ ಹೆಚ್ಚಿಸಿದೆ. ಕ್ರಾಂತಿ ಸಿನಿಮಾವನ್ನು ವಿ. ಹರಿಕೃಷ್ಣ ನಿರ್ದೇಶಿಸಿದ್ದಾರೆ. ದರ್ಶನ್‌ ಅವರಿಗೆ ಜೊತೆಯಾಗಿ ರಚಿತಾ ರಾಮ್‌ ನಟಿಸಿದ್ದಾರೆ. ರವಿಚಂದ್ರನ್‌ ಹಾಗೂ ಸುಮಲತಾ ಕೂಡಾ ಈ ಚಿತ್ರದಲ್ಲಿದ್ದಾರೆ. ನಾಳೆ ಸಿನಿಮಾ ತೆರೆ ಕಾಣಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.