Pathaan : ವಿರೋಧದ ನಡುವೆಯೂ ʼಪಠಾಣ್‌ʼ ಸಿನಿಮಾದಲ್ಲಿ ʼದೀಪಿಕಾ ಕೇಸರಿ ಬಿಕಿನಿʼ ಪ್ರತ್ಯಕ್ಷ..! 

ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್‌' ಚಿತ್ರದ ಮೊದಲ ಹಾಡು 'ಬೇಷರಂ ರಂಗ್' ಬಿಡುಗಡೆಯಾದಾಗ ವಿವಾದಕ್ಕೆ ಒಳಗಾಗಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದರು. ಅಲ್ಲದೆ, ಹಲವಾರು ರಾಜಕಾರಣಿಗಳು ಮತ್ತು ಟ್ರೋಲ್‌ಗಳು ಈ ಹಾಡನ್ನು ಅಶ್ಲೀಲವಾಗಿದೆ ಎಂದು ದೂರಿದ್ದರು. ಅಲ್ಲದೆ, ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಸಿನಿಮಾದಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು.

Written by - Krishna N K | Last Updated : Jan 25, 2023, 04:12 PM IST
  • ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್‌' ಚಿತ್ರ ಬಿಡುಗಡೆಯಾಗಿದೆ.
  • ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿತ್ತು.
  • ಸಿನಿಮಾ ಬಿಡುಗಡೆಯಾಗಿದ್ದು, ವಿವಾದಕ್ಕೆ ಕಾರಣವಾಗಿದ್ದ ಕೇಸರಿ ಬಿಕಿನಿ ತೆರೆದುಹಾಕಿಲ್ಲ.
Pathaan : ವಿರೋಧದ ನಡುವೆಯೂ ʼಪಠಾಣ್‌ʼ ಸಿನಿಮಾದಲ್ಲಿ ʼದೀಪಿಕಾ ಕೇಸರಿ ಬಿಕಿನಿʼ ಪ್ರತ್ಯಕ್ಷ..!  title=

Pathaan Review : ಬಾಲಿವುಡ್‌ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್‌' ಚಿತ್ರದ ಮೊದಲ ಹಾಡು 'ಬೇಷರಂ ರಂಗ್' ಬಿಡುಗಡೆಯಾದಾಗ ವಿವಾದಕ್ಕೆ ಒಳಗಾಗಿತ್ತು. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿಯಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದರು. ಅಲ್ಲದೆ, ಹಲವಾರು ರಾಜಕಾರಣಿಗಳು ಮತ್ತು ಟ್ರೋಲ್‌ಗಳು ಈ ಹಾಡನ್ನು ಅಶ್ಲೀಲವಾಗಿದೆ ಎಂದು ದೂರಿದ್ದರು. ಅಲ್ಲದೆ, ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ಸಿನಿಮಾದಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು.

ಅಲ್ಲದೆ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ಪಠಾಣ್‌ ಚಿತ್ರವನ್ನು ನಿಷೇಧಿಸುವಂತೆ ಕೋರಿದ್ದರು. ನಂತರ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಚಿತ್ರದ ʼಹಾಡುಗಳುʼ ಸೇರಿದಂತೆ ಚಿತ್ರದಲ್ಲಿ ʼಬದಲಾವಣೆಗಳನ್ನುʼ ಮಾಡಲು ಚಿತ್ರ ತಂಡಕ್ಕೆ ಹಾಗೂ ನಿರ್ಮಾಪಕರಿಗೆ ನಿರ್ದೇಶನ ನೀಡಿತು.

ಇದನ್ನೂ ಓದಿ: Anushka Shetty : ಅನುಷ್ಕಾ ಬೇಕು ಅಂದ್ರೆ 50 ಲಕ್ಷ..? ಸಿನಿಮಾ ಮ್ಯಾನೇಜರ್ ಗುಟ್ಟು ರಟ್ಟು

ಇದೀಗ ಸೆನ್ಸಾರ್‌ ನಂತರ ಪಠಾಣ್‌ ಚಿತ್ರ ಬಿಡುಗಡೆಯಾಗಿದೆ. ಫೈನಲ್ ಕಟ್‌ನಲ್ಲಿ ಹಾಡಿನಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗಿವೆ. ಅಶ್ಲೀಲ ಎನಿಸುವ ಕ್ಲೋಸ್-ಅಪ್ ಶಾಟ್‌ಗಳನ್ನು ತೆಗೆದುಹಾಕಲಾಗಿದೆ, ದೀಪಿಕಾ ಸ್ಟ್ರಾಬೆರಿ ತಿನ್ನುತ್ತಿರುವ ಶಾಟ್ ಅನ್ನು ಸಹ ತೆಗೆದುಹಾಕಲಾಗಿದೆ. ಆದ್ರೆ, ದೀಪಿಕಾ ಅವರ ವಿವಾದಕ್ಕೆ ಮುಖ್ಯ ಕಾರಣವಾಗಿದ್ದ ದೀಪಿಕಾ ಕೇಸರಿ ಬಿಕಿನಿಯನ್ನು ಮಾತ್ರ ತೆಗೆದುಹಾಕಿಲ್ಲ. 

ಈ ಮಧ್ಯ ಪಠಾಣ್ ಚಿತ್ರವನ್ನು ವಿಶ್ವ ಹಿಂದೂ ಪರಿಷತ್‌ ವಿರೋಧಿಸುವುದಿಲ್ಲ. ನಮ್ಮ ಹಿಂದಿನ ಆಕ್ಷೇಪಗಳನ್ನು ಗಮನದಲ್ಲಿಟ್ಟುಕೊಂಡು, ಚಿತ್ರದಲ್ಲಿ ಮಾಡಿದ ಬದಲಾವಣೆಗಳು ಸರಿಯಾಗಿವೆ. ಚಿತ್ರವನ್ನು ವೀಕ್ಷಿಸಿದ ನಂತರ, ನಮಗೆ ಏನಾದರೂ ಆಕ್ಷೇಪಾರ್ಹ ಎಂದು ಕಂಡುಬಂದರೆ, ನಾವು ಚಿತ್ರವನ್ನು ವಿರೋಧಿಸುವ ಕುರಿತು ಚರ್ಚಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ವಕ್ತಾರ ಶ್ರೀರಾಜ್ ನಾಯರ್ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News