Kranti on OTT : ದರ್ಶನ್ ʼಕ್ರಾಂತಿʼ ಸಿನಿಮಾ ಓಟಿಟಿ ರಿಲೀಸ್ ಡೇಟ್ ಫಿಕ್ಸ್...! 240 ದೇಶಗಳಲ್ಲಿ ಲಭ್ಯ
ವಿ. ಹರಿಕೃಷ್ಣ ನಿರ್ದೇಶನದ ಕ್ರಾಂತಿ ಸಿನಿಮಾ ಚಿತ್ರಮಂದಿಗಳಲ್ಲಿ ಯಶಸ್ವಿ 25ನೇ ದಿನದ ಪ್ರದರ್ಶನಗೊಂಡಿದೆ. ಇನ್ನು ತೆರೆ ಮೇಲೆ ಅಬ್ಬರಿಸಿದ್ದ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಗೊಳ್ಳಲು ಸಿದ್ದವಾಗಿದೆ. ಭಾರತ ಸೇರಿದಂತೆ ವಿಶ್ವಾದ್ಯಂತ ಫೆಬ್ರವರಿ 23 ರಿಂದ ಕನ್ನಡ ಆಕ್ಷನ್ ಕ್ರಾಂತಿ ಸಿನಿಮಾವನ್ನು ವೀಕ್ಷಿಸಬಹುದು.
Kranti on OTT : ವಿ. ಹರಿಕೃಷ್ಣ ನಿರ್ದೇಶನದ ಕ್ರಾಂತಿ ಸಿನಿಮಾ ಚಿತ್ರಮಂದಿಗಳಲ್ಲಿ ಯಶಸ್ವಿ 25ನೇ ದಿನದ ಪ್ರದರ್ಶನಗೊಂಡಿದೆ. ಇನ್ನು ತೆರೆ ಮೇಲೆ ಅಬ್ಬರಿಸಿದ್ದ ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಗೊಳ್ಳಲು ಸಿದ್ದವಾಗಿದೆ. ಭಾರತ ಸೇರಿದಂತೆ ವಿಶ್ವಾದ್ಯಂತ ಫೆಬ್ರವರಿ 23 ರಿಂದ ಕನ್ನಡ ಆಕ್ಷನ್ ಕ್ರಾಂತಿ ಸಿನಿಮಾವನ್ನು ವೀಕ್ಷಿಸಬಹುದು.
ʼಕ್ರಾಂತಿʼ ವಿ. ಹರಿಕೃಷ್ಣ ನಿರ್ದೇಶನ ಬ್ಲಾಕ್ಟಬಸ್ಟರ್ ಸಿನಿಮಾ. ಈ ಚಿತ್ರದಲ್ಲಿ ದರ್ಶನ್ ತೂಗುದೀಪ, ರಚಿತಾ ರಾಮ್, ಡಾ. ವಿ ರವಿಚಂದ್ರನ್, ತರುಣ್ ಅರೋರಾ ಮತ್ತು ಸುಮಲತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಆಕ್ಷನ್ ಸಿನಿಮಾ ಫೆಬ್ರವರಿ 23 ರಿಂದ ಜಾಗತಿಕವಾಗಿ ಸ್ಟ್ರೀಮಿಂಗ್ ಮಾಡುವುದಾಗಿ ಪ್ರೈಮ್ ವೀಡಿಯೋ ಘೋಷಿಸಿದೆ. ಎರಡು ವರ್ಷಗಳ ನಂತರಮುಖ್ಯ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಕಾಣಿಸಿಕೊಂಡಿದ್ದು, ಥಿಯೇಟರ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು.
ಇದನ್ನೂ ಓದಿ: SK Bhagavan : ಎರಡು ದಿನ ಉಪವಾಸವಿದ್ದ ಭಗವಾನ್ ಅವರಿಗೆ ʼನಿಜ ಸ್ನೇಹʼ ಸಿಕ್ಕಿತ್ತು..!
ಅಲ್ಲದೆ, ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿಯೂ ಸಹ ಸದ್ದು ಮಾಡಿತ್ತು. ಇತ್ತೀಚಿಗೆ ಚಿತ್ರತಂಡ ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ರಚಿತಾ ರಾಮ್ ಈ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮೊದಲ ಸಿನಿಮಾ ಕೂಡ ದರ್ಶನ್ ಅವರ ಜೊತೆಗೇ ಆಗಿತ್ತು. ಈಗ ಮತ್ತೊಮ್ಮೆ ಕ್ರಾಂತಿಯಲ್ಲಿ ದಚ್ಚು ಜೊತೆ ಡಿಂಪಲ್ ಕ್ವೀನ್ ಕಾಣಿಸಿಕೊಂಡು ಮೋಡಿ ಮಾಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದ ನಂತರ ಇದೀಗ ಕ್ರಾಂತಿ ಸಿನಿಮಾವನ್ನು ಪ್ರೈಮ್ ವೀಡಿಯೋದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಶ್ರೀಮಂತ ಎನ್‌ಆರ್‌ಐ ಉದ್ಯಮಿ ಕ್ರಾಂತಿ ರಾಯಣ್ಣ (ದರ್ಶನ್) ಭಾರತಕ್ಕೆ ವಾಪಸ್ ಬಂದು, ತಾನು ಓದಿದ ಶಾಲೆಯ ಶತಮಾನೋತ್ಸವದಲ್ಲಿ ಭಾಗವಹಿಸುತ್ತಾರೆ. ಆದರೆ, ಕಾರ್ಯಕ್ರಮದಲ್ಲಿ ದುರ್ಘಟನೆ ಸಂಭವಿಸಿ ಹಲವು ಸಾವನ್ನಪ್ಪುತ್ತಾರೆ ಮತ್ತು ಗಾಯಗೊಳ್ಳುತ್ತಾರೆ. ಈ ದುರ್ಘಟನೆಯ ಹಿಂದಿರುವ ದುಷ್ಕರ್ಮಿಗಳನ್ನು ಶಾಲೆಗಳನ್ನು ಖಾಸಗೀಕರಣಗೊಳಿಸುವ ಸಂಚು ಮಾಡಿರುತ್ತಾನೆ. ಈ ವಿಚಾರ ಅರಿಯುವ ಕ್ರಾಂತಿ ರಾಯಣ್ಣ, ಶಾಲೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಹೋರಾಡುವ ಸಾಮಾಜಿಕ ಕಳಕಳಿಯ ಕಥಾಹಂದರ ಈ ಸಿನಿಮಾದಲ್ಲಿದೆ. ಫೆಬ್ರವರಿ 23 ರಿಂದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಸಿನಿಮಾ ಲಭ್ಯವಿರಲಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.